ದಿನಕ್ಕೆ ನಾಲ್ಕೈದು ಬಾರಿ ಕೂಗಿದ್ರೆ ಸಾರ್ವಜನಿಕರಿಗೆ ಕಿರಿಕಿರಿ: ಅಜಾನ್ ಬಗ್ಗೆ ಮತ್ತೆ ಹೇಳಿಕೆ ನೀಡಿದ ಈಶ್ವರಪ್ಪ!

Published : Mar 14, 2023, 08:48 PM ISTUpdated : Mar 14, 2023, 08:50 PM IST
ದಿನಕ್ಕೆ ನಾಲ್ಕೈದು ಬಾರಿ ಕೂಗಿದ್ರೆ ಸಾರ್ವಜನಿಕರಿಗೆ ಕಿರಿಕಿರಿ: ಅಜಾನ್ ಬಗ್ಗೆ ಮತ್ತೆ ಹೇಳಿಕೆ ನೀಡಿದ ಈಶ್ವರಪ್ಪ!

ಸಾರಾಂಶ

ಮಸೀದಿಗಳಲ್ಲಿ ದಿನಕ್ಕೆ 4 - 5 ಬಾರಿ ಆಜಾನ್ ಕೂಗುವುದರಿಂದ  ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎನ್ನವುದು ಕೇವಲ ನನ್ನ ಅಭಿಪ್ರಾಯವಲ್ಲ, ಸಾರ್ವಜನಿಕ ಅಭಿಪ್ರಾಯವೂ ಹೌದು, ಆದ್ದರಿಂದ ಇದನ್ನು ಹೇಳುವುದಕ್ಕೆ ನನಗೆ ಯಾವ ಮುಲಾಜೂ ಇಲ್ಲ ಎಂದು ಮಾಜಿ ಸಚಿವ ಎಸ್.ಈಶ್ವರಪ್ಪ(KS Eshwarappa) ಉಡುಪಿಯಲ್ಲಿ ಮತ್ತೆ ಹೇಳಿದ್ದಾರೆ.

ಉಡುಪಿ (ಮಾ.14) : ಮಸೀದಿಗಳಲ್ಲಿ ದಿನಕ್ಕೆ 4 - 5 ಬಾರಿ ಆಜಾನ್ ಕೂಗುವುದರಿಂದ  ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎನ್ನವುದು ಕೇವಲ ನನ್ನ ಅಭಿಪ್ರಾಯವಲ್ಲ, ಸಾರ್ವಜನಿಕ ಅಭಿಪ್ರಾಯವೂ ಹೌದು, ಆದ್ದರಿಂದ ಇದನ್ನು ಹೇಳುವುದಕ್ಕೆ ನನಗೆ ಯಾವ ಮುಲಾಜೂ ಇಲ್ಲ ಎಂದು ಮಾಜಿ ಸಚಿವ ಎಸ್.ಈಶ್ವರಪ್ಪ(KS Eshwarappa) ಉಡುಪಿಯಲ್ಲಿ ಮತ್ತೆ ಹೇಳಿದ್ದಾರೆ.

ಉಡುಪಿ(Udupi)ಯಲ್ಲಿ ವಿಜಯ ಸಂಕಲ್ಪ ಯಾತ್ರೆ(Vijayasankalpa yatre)ಯ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನಾ ಬೆಳಿಗ್ಗೆ ಮಧ್ಯಾಹ್ನ ಸಂಜೆ  ನಾಲ್ಕಾರು ಮೈಕುಗಳಲ್ಲಿ ಆಜಾನ್(Azan) ಕೂಗುತ್ತಾರೆ, ಇದರಿಂದ ಸಭೆ ಸಮಾರಂಭಗಳಿಗೆ ತೊಂದರೆಯಾಗುತ್ತಿದೆ, ರಾಜ್ಯದಲ್ಲಿ ಪರೀಕ್ಷೆ ಬರೆಯುತ್ತಿರು ವಿದ್ಯಾರ್ಥಿಗಳಿಗೆ, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಅದನ್ನು ನಾನು ಸ್ಪಷ್ಟವಾಗಿ  ಹೇಳಿದ್ದೇನೆ. ನನ್ನ ಹೇಳಿಕೆಯಲ್ಲಿ ವಿವಾದವಾಗುವಂತಹದ್ದೇನಿದೆ ಎಂದರು.

ಅಜಾನ್‌ ಸದ್ದು ಕೇಳುತ್ತಲೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಡು ಹೇಳೋದನ್ನ ನಿಲ್ಲಿಸಿದ ಶೆಹನಾಜ್‌!

ನಂಗೆ ಅಥವಾ ಮಗನಿಗೆ ಟಿಕೇಟ್

ಈ ಬಾರಿಯ ವಿಧಾನಸಭಾ ಚುನಾವಣೆ(Karnataka assembly election)ಯಲ್ಲಿ ಕುಟುಂಬಕ್ಕೆ ಒಂದು ಟಿಕೆಟ್ ಎಂದು ಕೇಂದ್ರದವರು ಆಲೋಚನೆ ಮಾಡಿರಬಹುದು ಎಂದು ನಾನು ಭಾವಿಸಿದ್ದೇನೆ. ನಮ್ಮ ಕುಟುಂಬದಲ್ಲೂ ನಾವು ಎರಡು ಟಿಕೇಟ್ ಕೇಳುವುದಿಲ್ಲ, ನನಗೆ ಅಥವಾ ಮಗನಿಗೆ ಒಂದೇ  ಟಿಕೆಟ್ ಎಂದು ನಾನು ತೀರ್ಮಾನ ಮಾಡಿದ್ದೇನೆ ಎಂದು ಈಶ್ವರಪ್ಪ ಹೇಳಿದರು.

ಇಬ್ಬರಿಗೂ ಟಿಕೆಟ್ ಸಿಗದಿದ್ದರೆ ಯಾರೋ ಕಾರ್ಯಕರ್ತನಿಗೆ ಟಿಕೆಟ್ ಹೋಗುತ್ತದೆ. ಪಕ್ಷದ ನಾಯಕರಾದ ತೀರ್ಮಾನಕ್ಕೆ ಬದ್ಧ. ಪಕ್ಷ ನನಗೆ ನಗರ ಕಾರ್ಯದರ್ಶಿಯಿಂದ ಉಪ ಮುಖ್ಯಮಂತ್ರಿ ಹುದ್ದೆಯ ತನಕ ಜವಾಬ್ದಾರಿ ಕೊಟ್ಟಿದೆ. ಅನೇಕ ಖಾತೆಗಳನ್ನು ನಿಭಾಯಿಸಿದ್ದೇನೆ. ಪಕ್ಷ ಹೇಳಿದ್ದನ್ನು ಮಾಡುವುದು ನನ್ನ ಸಂಸ್ಕೃತಿ ಎಂದರು.

ಹಿಂದುತ್ವದ ಆಧಾರದಲ್ಲಿ ಕಾರ್ಕಳದಲ್ಲಿ ಸಚಿವ ಸುನಿಲ್(Sunil kumar karkal) ವಿರುದ್ಧ ಪ್ರಮೋದ ಮುತಾಲಿಕ್(Pramod muthalik) ಸ್ಪರ್ಧೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಮುತಾಲಿಕ್ ಅವರು ಬಿಜೆಪಿಯವರಲ್ಲ, ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು, ಹಿಂದೂ ಸಂಘಟನೆ, ಹಿಂದೂ ಸಮಾಜವನ್ನು ನಾವು ಕೊಂಡುಕೊಂಡಿಲ್ಲ, ಆದರೇ ನಾವು ಹಿಂದೂ ಸಮಾಜದ ರಕ್ಷಣೆಗೆ ಏನೇನು ಬೇಕು ಅದನ್ನು ಮಾಡಿದ್ದೇವೆ, ಹಿಂದೂ ಸಮಾಜ ಯಾರು ರಕ್ಷಣೆ ಮಾಡುತ್ತಾರೆ ಎಂದು ಮತದಾರರು ತೀರ್ಮಾನ ಮಾಡಲಿ ಎಂದರು.

ಯಡಿಯೂರಪ್ಪ ಟಿಕೆಟ್‌ ಬಾಂಬ್- ಬಿಜೆಪಿಯಲ್ಲಿ ಭಾರಿ ಕಂಪನ: ಟಿಕೆಟ್‌ ಭಾಗ್ಯ ಇಲ್ಲದ ಶಾಸಕರು ಇವರೆನಾ?

ಮುತಾಲಿಕ್ ಅವರನ್ನು ಕಾಂಗ್ರೆಸ್ ಪಕ್ಷದವರು ಸ್ಪರ್ಧೆಗೆ ಇಳಿಸಿದ್ದಾರೆ ಎಂಬ ವದಂತಿಗೆ, ಕಾಂಗ್ರೆಸ್ ನವರು ಏನೇ ಮಾಡಿದರು ಅಟ್ಟರ್ ಫ್ಲಾಪ್ ಆಗುತ್ತಾರೆ ಎಂದು ಪ್ರತಿಕ್ರಿಯಿಸಿದರು.

PREV
Read more Articles on
click me!

Recommended Stories

ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ
ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ