ಲೋಕಾಯುಕ್ತಕ್ಕೆ ಮರು ಜೀವ ನೀಡಿ, ಹಲ್ಲು ಕೊಟ್ಟಿರುವುದು ಬೊಮ್ಮಾಯಿ ಸರಕಾರ: ಕೋಟ ಶ್ರೀನಿವಾಸ ಪೂಜಾರಿ

By Suvarna News  |  First Published Mar 14, 2023, 7:21 PM IST

ಹಳೆ ಮೈಸೂರು ಭಾಗದಲ್ಲಿ ಅಭ್ಯರ್ಥಿಯ ಆಯ್ಕೆಗೂ ತಡಕಾಡುತ್ತಿದ್ದ ಕಾಲವಿತ್ತು. ಆದರೆ ಈಗ ನೂರಕ್ಕೆ ನೂರು ಶಕ್ತಿ ವೃದ್ದಿಸಿದೆ. ಪ್ರಧಾನಿ ಮೋದಿಯವರ ಮಂಡ್ಯ ಭೇಟಿ ವೇಳೆ ಜನರು ತೋರಿದ ಪ್ರೀತಿಯೇ ಇದಕ್ಕೆ ಸಾಕ್ಷಿ ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.


ಉಡುಪಿ (ಮಾ.14): ಬಿಜೆಪಿ ಪಕ್ಷದ ವಿಜಯ ಸಂಕಲ್ಪ ರಥಯಾತ್ರೆಗೆ ಅಭೂತಪೂರ್ವ ಸ್ಪಂದನೆಯನ್ನು ಜನತೆ ನೀಡಿದ್ದಾರೆ. ಯುವಕರ ರಣೋತ್ಸವ, ಕಾಯಕರ್ತರು ಉತ್ಸಾಹದಿಂದಾಗಿ ಸಾವಿರಾರು ಜನರು ರಥಯಾತ್ರೆಯಲ್ಲಿ ಭಾಗಿಯಾಗಿದ್ದಾರೆ‌. ಇದರ ಆಧಾರದಲ್ಲಿ ಬಿಜೆಪಿ ಪಕ್ಷವು ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಸರಕಾರ ರಚಿಸುತ್ತೇವೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಮಂಗಳವಾರ, ಮಣಿಪಾಲದ ಕಂಟ್ರಿ ಇನ್ ಹೋಟೆಲಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು.   ಹಳೆ ಮೈಸೂರು ಭಾಗದಲ್ಲಿ ಅಭ್ಯರ್ಥಿಯ ಆಯ್ಕೆಗೂ ತಡಕಾಡುತ್ತಿದ್ದ ಕಾಲವಿತ್ತು. ಆದರೆ ಈಗ ನೂರಕ್ಕೆ ನೂರು ಶಕ್ತಿ ವೃದ್ದಿಸಿದೆ. ಪ್ರಧಾನಿ ಮೋದಿಯವರ ಮಂಡ್ಯ ಭೇಟಿ ವೇಳೆ ಜನರು ತೋರಿದ ಪ್ರೀತಿಯೇ ಇದಕ್ಕೆ ಸಾಕ್ಷಿ ಎಂದರು.

ಲೋಕಾಯುಕ್ತಕ್ಕೆ ಹಲ್ಲು ಕೊಟ್ಟದ್ದು ಬಿಜೆಪಿ ಸರಕಾರ:
ಶಾಸಕ ವಿರೂಪಾಕ್ಷಪ್ಪ ಮಾಡಾಳ್ ವಿರುದ್ದ ದಾಖಲಾಗಿರುವ ಲೋಕಾಯುಕ್ತ ಪ್ರಕರಣವು ಚುನಾವಣಾ ಸನಿಹದಲ್ಲಿರುವುದರಿಂದ ಸ್ವಾಭಾವಿಕವಾಗಿ ಚರ್ಚೆಯಾಗುತ್ತದೆ. ಆದರೆ ಲೋಕಾಯುಕ್ತವನ್ನು ಸಂಪೂರ್ಣ ನಿಷ್ಕ್ರಿಯ ಮಾಡಿ, ಎಸಿಬಿ ರಚಿಸಿದ್ದು ಯಾರು..? ಎಂಬುದು ರಾಜ್ಯದ ಜನರಿಗೆ ತಿಳಿದಿದೆ. ಲೋಕಾಯುಕ್ತ ಮರು ಜೀವ ನೀಡಿ, ಶಕ್ತಿ ಕೊಟ್ಟು, ಹಲ್ಲು ಕೊಟ್ಟಿರುವುದು ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರಕಾರ. ಲೋಕಾಯುಕ್ತ ಜಾರಿಗೆ ತಂದಿರುವುದು ಪಾರದರ್ಶಕ ಆಡಳಿತ ತರಲು ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕೆ ತರಲು. ನಮ್ಮ ಸರಕಾರ ಬಿಟ್ಟು ಬೇರೆ ಯಾವ ಸರಕಾರ ಇದ್ದರೂ, ಆಡಳಿತ ಪಕ್ಷದ ಶಾಸಕ ಮೇಲೆ ಪ್ರಕರಣ ದಾಖಲಾಗಲು ಸಾಧ್ಯವಿತ್ತೇ..? ಆರೋಪ ಇದೆ ಕಾನೂನಾತ್ಮಕ ಕ್ರಮ ನಡೆಯುತ್ತದೆ ಎಂದರು. 

Tap to resize

Latest Videos

undefined

ರಾಹುಲ್ ಗಾಂಧಿ ಕ್ಷಮೆ ಕೇಳಲಿ:
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದವರು, ವಿದೇಶದಲ್ಲಿ ಭಾರತವನ್ನು ಟೀಕಿಸುವುದನ್ನು ಕಾಂಗ್ರೆಸ್ ನ ಹಿರಿಯ ನಾಯಕರು ಹೇಗೆ ಸಮರ್ಥಿಸುತ್ತೀರಿ. ಅವರ ಯೋಚನೆ, ಚಿಂತನೆ, ಭಾರತದ ಪ್ರಜಾಪ್ರಭುತ್ವದ ಬಗ್ಗೆ ಅವರಿಗಿರುವ ಮಾನಸಿಕತೆ ಅರ್ಥವಾಗುತ್ತದೆ. ಇಡೀ ಪ್ರಪಂಚ ಭಾರತವನ್ನು ಗೌರವಿಸುತ್ತದೆ. ಮೋದಿಯವರನ್ನು ಜಗ್ಗತ್ತು ನಾಯಕ ಎಂದು ಒಪ್ಪಿಕೊಂಡಿದೆ ಎಂದರು.

ರಾಜಕೀಯವಾಗಿ ಸಿದ್ದರಾಮಯ್ಯ ಹಾಳಾಗಿ ಹೋಗಲಿ: ಉಡುಪಿಯಲ್ಲಿ ಬೇಡಿಕೊಂಡ ಈಶ್ವರಪ್ಪ!

ರೌಡಿ ಶೀಟರ್ ಗೆ ಮೋದಿ ಕೈ ಮುಗಿದ ವಿಚಾರ:
ರಾಜಕೀಯ ಪಕ್ಷದ ಕಾರ್ಯಕರ್ತರಾಗಿ ಪ್ರಧಾನ ಮಂತ್ರಿಯವರಿಗೆ ಕೈ ಮುಗಿದಿದ್ದಾರೆ. ಅವರು ವಾಪಾಸು ಕೈ ಮುಗಿದಿದ್ದಾರೆ. ಭಾರತೀಯನಾಗಿ ಕೈ ಮುಗಿದಿದ್ದಾರೆ, ಅವರು ಕೈ ಮುಗಿದಿದ್ದಾರೆ. ಕಾನೂನಿನ ಕ್ರಮಗಳು ನಡೆಯುತ್ತದೆ. ಅದಕ್ಕೂ ಇದಕ್ಕೂ ಸಂಭಂದವಿಲ್ಲ.

ಉಡುಪಿ: ಬಸ್ರೂರು ಅಶೋಕ್ ಪಾರ್ಕ್‌ನಲ್ಲಿ 400 ವರ್ಷಗಳಷ್ಟು ಹಳೆಯ ಲಿಂಗಮುದ್ರೆ ಕಲ್ಲು ಪತ್ತೆ!

ಬಂಟ ನಿಗಮ - ಸಿಎಂ ಗೆ ಮನವರಿಕೆ:
ಅನೇಕ ಜಾತಿಯವರಿಗೆ ನಿಗಮ ನೀಡಲಾಗಿದೆ. ಬಂಟ ಸಮುದಾಯದ ಭಾವನೆಗಳನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುತ್ತೇನೆ ಎಂದು ನುಡಿದರು.

click me!