chikkaballapura ಭಾರೀ ಮಳೆಗೆ ಗ್ರಾಮಗಳ ಸಂಪರ್ಕವೇ ಕಡಿತ : ಜನ ಪರದಾಟ

By Kannadaprabha News  |  First Published Oct 16, 2021, 3:42 PM IST
  •  ಜಿಲ್ಲೆಯಲ್ಲಿ ಬೀಳುತ್ತಿರುವ ವರ್ಷಧಾರೆ ಹಲವು ಗ್ರಾಮಗಳಿಗೆ ಕಲ್ಪಿಸಿದ್ದ ರಸ್ತೆ, ಸೇತುವೆ ಕಡಿದು ಜಲ ದಿಗ್ಬಂಧನ ವಿಧಿಸಿದೆ
  •  ಶಿಡ್ಲಘಟ್ಟತಾಲೂಕಿನ ಅರಿಕೆರೆ ಸೇರಿದಂತೆ ಕೆಲ ಗ್ರಾಮದ ಜನತೆ ಶುಕ್ರವಾರ ಸುರಿದ ಮಳೆಯ ಕಾರಣವಾಗಿ ಜಲ ದಿಗ್ಬಂಧನಕ್ಕೆ ಒಳಗಾಗಿದ್ದಾರೆ

 ಚಿಕ್ಕಬಳ್ಳಾಪುರ (ಅ.16):  ಜಿಲ್ಲೆಯಲ್ಲಿ ಬೀಳುತ್ತಿರುವ ವರ್ಷಧಾರೆ ಹಲವು ಗ್ರಾಮಗಳಿಗೆ ಕಲ್ಪಿಸಿದ್ದ ರಸ್ತೆ, ಸೇತುವೆ ಕಡಿದು ಜಲ ದಿಗ್ಬಂಧನ ವಿಧಿಸಿದೆ. 

ಅದೇ ಶಿಡ್ಲಘಟ್ಟ(Shidlaghatta) ತಾಲೂಕಿನ ಅರಿಕೆರೆ ಸೇರಿದಂತೆ ಕೆಲ ಗ್ರಾಮದ (Village) ಜನತೆ ಶುಕ್ರವಾರ ಸುರಿದ ಮಳೆಯ (Rain) ಕಾರಣವಾಗಿ ಜಲ ದಿಗ್ಬಂಧನಕ್ಕೆ ಒಳಗಾಗಿ ಗ್ರಾಮಕ್ಕೆ ಇರುವ ಏಕೈಕ ದಾರಿಯ ನಡುವೆ ಇರುವ ಪರಸುಬಂದಿ ತುಂಬಿಹರಿಯುತ್ತಿದ್ದು ಊರೊಳಗೆ ಬರಲು ಶಾಲಾ ಮಕ್ಕಳು (School Children) ಕೂಲಿ ಕಾರ್ಮಿಕರು ಪರದಾಡುವಂತಾಗಿದೆ.

Tap to resize

Latest Videos

undefined

ಬೆಳೆ ಹಾನಿ : ಅಧಿಕಾರಿಗಳಿಂದ ಸುಳ್ಳು ಮಾಹಿತಿ-ರೈತರ ಆಕ್ರೋಶ

ಜನರ ಪರದಾಟ ನೋಡಲಾರದೆ ದೈರ್ಯಶಾಲಿ ಯುವಕರು ಮಾನವ ಸರಪಳಿಯ (Human chain) ನೆರವಿನಿಂದ ಮಕ್ಕಳು, ಕೂಲಿ ಕಾರ್ಮಿಕರನ್ನು ದಡ ಸೇರಿಸಿದ್ದಾರೆ. ಮಳೆಗಾಲದಲ್ಲಿ ಈ ಸಮಸ್ಯೆ ಎದುರಾಗುವುದು ನಡೆದೇ ಇದ್ದು ಸುರಕ್ಷಿತ ಸೇತುವೆಗಾಗಿ ಊರಿನ ಜನತೆ ಸರಕಾರವನ್ನು ಆಗ್ರಹಿಸಿದ್ದಾರೆ.

ಏನಿದು ಸಮಸ್ಯೆ ?

ಜಿಲ್ಲೆಯ ಶಿಡ್ಲಘಟ್ಟತಾಲೂಕಿಗೆ ಸೇರಿದ ಅರಿಕೆರೆ ಗ್ರಾಮವು ಜಂಗಮಕೋಟೆ ಹೋಬಳಿ ಚೀಮಂಗಲ ಗ್ರಾಮ ಪಂಚಾಯಿತಿಗೆ ಸೇರಿದ್ದು ಮೂಲಭೂತ ಸೌಲಭ್ಯಗಳಿಂದ ಮೊದಲೇ ವಂಚಿತವಾದ ಕುಗ್ರಾಮವಾಗಿದೆ.ಈ ಊರಿಗೆ ಇರುವ ಒಂಟಿ ರಸ್ತೆಯ (Road) ನಡುವೆ ದೊಡ್ಡ ರಾಜಕಾಲುವೆಯಿದೆ. ಇದಕ್ಕೆ ಸೇತುವೆ ನಿರ್ಮಿಸಲಾರದ ಜನಪ್ರತಿನಿಧಿಗಳು ಪರಸುಬಂದಿ ಮಾಡಿ ಕೈತೊಳೆದುಕೊಂಡಿದ್ದಾರೆ. 

ಚಿಕ್ಕಬಳ್ಳಾಪುರ : ಬೆಳೆ ವಿಮೆ ಯೋಜನೆಗೆ ರೈತರ ನಿರಾಸಕ್ತಿ

ಮಳೆಗಾಲದಲ್ಲಿ ಜೋರಾಗಿ ಮಳೆಯಾದರೆ ಸಾಕು ಎರಡು ಮೂರು ದಿನಗಳ ಕಾಲ ರಾಜಕಾಲುವೆ ತುಂಬಿಹರಿಯುತ್ತದೆಲೀ ಅವಧಿಯಲ್ಲಿ ಯಾರೂ ಈ ಊರಿನ ಜತೆ ಸಂಪರ್ಕ ಸಾಧಿಸಲು ಆಗುವುದಿಲ್ಲ. ಪ್ರವಾಹ (Flood) ಕಡಿಮೆಯಾದ ಮೇಲೆಯೇ ಬೇರೆ ಊರುಗಳ ಜನತೆ ಈ ಕಡೆ ಬಂದು ಹೋಗಲು ಮಾಡುತ್ತಾರೆ.ಈ ಸಮಸ್ಯೆಯನ್ನು ಪರಿಹರಿಸಲು ಶತಮಾನಗಳಿಂದ ಪ್ರಯತ್ನಿಸಿದರೂ ಈವರಗೆ ಆಗಿಲ್ಲದಿರುವುದು ಆಶ್ಚರ್ಯವಾದರೂ ಸತ್ಯ.ಮಳೆಗಾಲದಲ್ಲಿ ಈ ಊರು ಜಲದಿಗ್ಬಂಧನಕ್ಕೆ ಒಳಗಾಗುವುದು ಮಾತ್ರ ಪರಂಪರೆಯಂತೆ ನಡೆದುಕೊಂಡು ಬಂದಿದೆ.

ಚಿತ್ರಾವತಿ ಜಲಾಶಯ ಕೋಡಿ ಹರಿಯಿತು

 ಭಾರಿ ಮಳೆಯಿಂದಾಗಿ (Rain) 6 ವರ್ಷಗಳ ನಂತರ ಪಟ್ಟಣದ ಜನತೆಗೆ ಕುಡಿಯುವ ನೀರಿನ ದಾಹ ನೀಗಿಸುವ ಪರಗೋಡು ಚಿತ್ರಾವತಿ ಬ್ಯಾರೇಜ್‌( Barrage)) ತುಂಬಿ ಕೋಡಿ ಹರಿಯಿತು. ಈ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಮಳೆ ಕೈಕೊಟ್ಟಪರಿಣಾಮ ಚಿತ್ರಾವತಿ ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರು ದಿನದಿಂದ ದಿನಕ್ಕೆ ಕಡಿಮೆ ಆಗಿ ಭರಿದಾಗಿತ್ತು. ಇದರಿಂದ 23 ವಾರ್ಡ್‌ಗಳನ್ನು ಹೊಂದಿರುವ ಬಾಗೇಪಲ್ಲಿ (Bagepalli) ಪುರಸಭೆ ವ್ಯಾಪ್ತಿಯ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಪರಿಸ್ಥಿತಿ ಎದುರಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿತ್ತು.

ಆದರೆ ಕಳೆದ ಹಲವು ದಿನಗಳಿಂದ ಚಿತ್ರಾವತಿ ಜಲಾಶಯದ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚಿತ್ರಾವತಿ ಜಲಾಶಯ ತುಂಬಿ ಬುಧವಾರ ಮಧ್ಯಾಹ್ನದ ವೇಳೆಯಲ್ಲಿ ಕೋಡಿ ಹರಿಯಿತು.

ಹಲವು ವರ್ಷಗಳ ವರುಣನ ಅವಕೃಫೆಯಿಂದಾಗಿ ಪಟ್ಟಣದ ಜನತೆ ಕುಡಿಯುವ ನೀರಿಗಾಗಿ ಪರದಾಡುವಂತಹ ಪರಸ್ಥಿತಿ ನಿರ್ಮಾಣವಾಗಿತ್ತು. 2017 ರಲ್ಲಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಚಿತ್ರಾವತಿ ಜಲಾಶಯ ತುಂಬಿ ಹರಿದಿತ್ತು.

ನಂತರದ ವರ್ಷಗಳಲ್ಲಿ ವಾಡಿಕೆಗೆಗಿಂತ ಕಡಿಮೆ ಮಳೆಯಾದ ಪರಿಣಾಮ ಜಲಾಶಯದಲ್ಲಿ ನೀರು ಸಂಗ್ರಹವಾಗಿರಲಿಲ್ಲ ಅದರೂ ಸಹ ಕುಡಿಯುವ ನೀರಿನ ಕೊರತೆ ಇರಲಿಲ್ಲ, ಬುಧವಾರ ಚಿತ್ರಾವತಿ ಜಲಾಶಯ ತುಂಬಿ ಹರಿದ ಪರಿಣಾಮ ಕನಿಷ್ಠ 3 ವರ್ಷಗಳು ಕುಡಿಯುವ ನೀರಿನ ಸಮಸ್ಯೆ ಇರಲ್ಲ ಎಂದು ಪಟ್ಟಣದ ಜನತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

click me!