ಬೊಮ್ಮಾಯಿ ಸರ್ಕಾರಕ್ಕೆ ಖಡಕ್‌ ಎಚ್ಚರಿಕೆ ಕೊಟ್ಟ ಮತ್ತೊಬ್ಬ ಸ್ವಾಮೀಜಿ..!

By Kannadaprabha News  |  First Published Oct 16, 2021, 3:21 PM IST

*  ವಾಲ್ಮೀಕಿ ಜಯಂತಿಯೊಳಗೆ ಎಸ್‌ಟಿ ಮೀಸಲಾತಿ ಹೆಚ್ಚಿಸಿ
*  ಸರ್ಕಾರಕ್ಕೆ ಪ್ರಸನ್ನಾನಂದಪುರಿ ಸ್ವಾಮೀಜಿ ಗಡುವು
*  ಕಳೆದ 40 ವರ್ಷಗಳಿಂದ ಬರೀ ಶೇ. 3ರಷ್ಟು ಮಾತ್ರ ಮೀಸಲಾತಿ ನೀಡುತ್ತಿರುವ ರಾಜ್ಯ ಸರ್ಕಾರ
 


ಹಾವೇರಿ(ಅ.16): ರಾಜ್ಯದಲ್ಲಿನ(Karnataka) ವಾಲ್ಮೀಕಿ ಸಮಾಜಕ್ಕೆ(Valmiki Community) ಈ ವರೆಗೆ ನ್ಯಾಯವಾಗಿ ಸಿಗಬೇಕಾದ ಮೀಸಲಾತಿ(Reservation) ನೀಡಿಲ್ಲ. ರಾಜ್ಯ ಸರ್ಕಾರ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಗೂ(Valmik Jayanti) ಮುನ್ನ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ ಶೇ. 7.5ಕ್ಕೆ ಏರಿಸಬೇಕು ಎಂದು ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ(Prasannanandapuri Swamiji) ಆಗ್ರಹಿಸಿದ್ದಾರೆ. 

ನಗರದಲ್ಲಿ ಗುರುವಾರ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ವಾಲ್ಮೀಕಿ ನಾಯಕ ಜನಾಂಗದ ಮೀಸಲಾತಿಗಾಗಿ ಜಾಗೃತಿ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಪರಿಶಿಷ್ಟ ಪಂಗಡದವರ ಜನಸಂಖ್ಯೆ ಸುಮಾರು 50ರಿಂದ 60 ಲಕ್ಷದಷ್ಟಿದೆ. ಡಾ. ಅಂಬೇಡ್ಕರ್‌(Dr BR Ambedkar) ಅವರು ಹೇಳಿರುವಂತೆ ಮತ್ತು ಸಂವಿಧಾನದ(Constitution) ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಯಾವುದೇ ನಿರ್ಬಂಧವಿಲ್ಲ. ಹೀಗಾಗಿ, ಮೀಸಲಾತಿ ಹೆಚ್ಚಿಸಲೇಬೇಕು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ(Government) ವಾಲ್ಮೀಕಿ ಜಯಂತಿಯ ಗಡುವು(Deadline) ನೀಡಲಾಗಿದೆ ಎಂದು ಹೇಳಿದರು.

Latest Videos

undefined

ಒಂದು ನಾನಿರ್ಬೇಕು, ಇಲ್ಲ ನೀವಿರ್ಬೇಕು: ಸಿಎಂ ಬೊಮ್ಮಾಯಿಗೆ ವಾಲ್ಮೀಕಿ ಶ್ರೀ ಎಚ್ಚರಿಕೆ

ಪರಿಶಿಷ್ಟ ಪಂಗಡಕ್ಕೆ(Scheduled Caste) ಈಗಾಗಲೇ 2004ರಿಂದ ಕೇಂದ್ರ ಸರ್ಕಾರ(Central Government) ಜನಸಂಖ್ಯೆಗೆ ಅನುಗುಣವಾಗಿ ಶೇ 7.5 ಮೀಸಲಾತಿಯನ್ನು ಎಲ್ಲ ರಂಗಗಳಲ್ಲೂ ನೀಡುತ್ತಿದೆ. ಆದರೆ ರಾಜ್ಯ ಸರ್ಕಾರ ಕಳೆದ 40 ವರ್ಷಗಳಿಂದ ಬರೀ ಶೇ. 3ರಷ್ಟು ಮಾತ್ರ ಮೀಸಲಾತಿ ನೀಡುತ್ತಿದೆ. ರಾಜ್ಯ ಸರ್ಕಾರವೂ ಕೇಂದ್ರದ ಮಾದರಿಯಲ್ಲಿ ಮೀಸಲಾತಿಯನ್ನು ಹೆಚ್ಚಿಸಬೇಕು. ಸರ್ಕಾರ ನಮ್ಮ ಬೇಡಿಕೆಗೆ(Demand) ಸ್ಪಂದಿಸದೇ ಹೋದರೆ ನಾಯಕರ ತಾಕತ್ತು ಎಂತಹದ್ದು ಎಂದು ಉಪಚುನಾವಣೆಯಲ್ಲಿ(Byelection) ಮತ್ತು ಬರುವು ಸಾರ್ವತ್ರಿಕ ಚುನಾವಣೆಯಲ್ಲಿ(General Election) ತೋರಿಸಬೇಕಾಗುತ್ತದೆ ಎಂದು ಎಚ್ಚ​ರಿ​ಸಿದರು.

ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ, ಕೆಪಿಎಸ್‌ಸಿ ಮಾಜಿ ಸದಸ್ಯ ಜಿ.ಟಿ. ಚಂದ್ರಶೇಖರಪ್ಪ, ಮುಖಂಡರಾದ ಸಣ್ಣತಮ್ಮಪ್ಪ ಬಾರ್ಕಿ, ಎನ್‌.ಎಂ. ಈಟೇರ, ಫಕ್ಕೀರಪ್ಪ ವಾಲ್ಮೀಕಿ, ಮಂಜುಳಾ ಕರಬಸಮ್ಮನವರ ಮತ್ತಿತರರು ಮಾತನಾಡಿದರು.

ಶ್ರೀಧರ ದೊಡ್ಡಮನಿ, ಚಂದ್ರಣ್ಣ ಬೇಡರ, ಶೇಖರಪ್ಪ ಕಳ್ಳಿಮನಿ, ಬಸವರಾಜ ಹೊನ್ನೂರಪ್ಪನವರ, ಅಶೋಕ ತಳವಾರ, ಸೋಮನಗೌಡ ಪಾಟೀಲ, ಕೆ. ಮಂಜಪ್ಪ, ಅಶೋಕ ಹರನಗರಿ, ಹೊನ್ನಪ್ಪ ಮಾಳಗಿ, ನಾಗರಾಜ ಯರೆಮನಿ, ಬಸವರಾಜ ಹಾದಿಮನಿ, ಬಸವರಾಜ ಭೀಮಕ್ಕನವರ ಇತರರು ಇದ್ದರು. ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿಸ್ವಾಗತಿಸಿದರು. ಶೇಖರ ಕಳ್ಳಿಮನಿ ನಿರೂಪಿಸಿದರು.
 

click me!