ಬೆಳೆ ಹಾನಿ : ಅಧಿಕಾರಿಗಳಿಂದ ಸುಳ್ಳು ಮಾಹಿತಿ-ರೈತರ ಆಕ್ರೋಶ

By Kannadaprabha NewsFirst Published Oct 16, 2021, 2:51 PM IST
Highlights
  • ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಜನ ಜೀವನ ಅಸ್ತವ್ಯಸ್ಥ
  • ಲಕ್ಷಾಂತರ ರು, ಬಂಡವಾಳ ಹಾಕಿ ಬೆಳೆದಿದ್ದ ವಾಣಿಜ್ಯ ಬೆಳೆಗಳು ಮಳೆಗೆ ಕೊಚ್ಚಿ ಹೋಗಿದ್ದರೂ ಅಧಿಕಾರಿಗಳಿಂದ ಸುಳ್ಳು ಮಾಹಿತಿ

ವರದಿ :  ಕಾಗತಿ ನಾಗರಾಜಪ್ಪ

 ಚಿಕ್ಕಬಳ್ಳಾಪುರ (ಅ.16):  ಜಿಲ್ಲೆಯಲ್ಲಿ ಮಳೆಯಿಂದ (Rain) ಜನ ಜೀವನ ಅಸ್ತವ್ಯಸ್ಥವಾಗಿರುವುದು ಒಂದೆಡೆಯಾದರೆ ಲಕ್ಷಾಂತರ ರು, ಬಂಡವಾಳ ಹಾಕಿ ಬೆಳೆದಿದ್ದ ವಾಣಿಜ್ಯ ಬೆಳೆಗಳು (crops) ಮಳೆಗೆ ಕೊಚ್ಚಿ ಹೋಗಿದ್ದರೂ ಅಧಿಕಾರಿಗಳು (Officers) ಮಾತ್ರ ಮಳೆಯಿಂದ ಏನು ಆಗಿಲ್ಲ ಎಂಬ ಸುಳ್ಳು ವರದಿ ತಯಾರಿಸಿರುವುದು ರೈತರ(Farmers) ಆಕ್ರೋಶಕ್ಕೆ ಕಾರಣವಾಗಿದೆ.

ಹೌದು, ಜಿಲ್ಲೆಯ ಬಾಗೇಪಲ್ಲಿ (bagepalli), ಚಿಂತಾಮಣಿ, ಚಿಕ್ಕಬಳ್ಳಾಪುರ (chikkaballapura) ತಾಲೂಕು ಸೇರಿದಂತೆ ಶಿಡ್ಲಘಟ್ಟದಲ್ಲಿ ಮಳೆಯ ಅರ್ಭಟಕ್ಕೆ ಆಲೂಗಡ್ಡೆ, ಹಿಪ್ಪು ನೇರಳೆ, ಟೊಮೇಟೊ(Tomato), ಕ್ಯಾರೆಟ್‌, ಬೀನ್ಸ್‌ ಸೇರಿದಂತೆ ಕೊಯ್ಲಿಗೆ ಬಂದಿದ್ದ ನೆಲಗಡಲೆ, ಕ್ಯಾಪ್ಸಿಕಂ ಮತ್ತಿತರ ವಾಣಿಜ್ಯ ಬೆಳೆಗಳು ನೀರು ಪಾಲಾಗಿದ್ದರೂ ತೋಟಗಾರಿಕೆ ಹಾಗೂ ಕೃಷಿ ಅಧಿಕಾರಿಗಳು ದಸರಾ ವಿಜಯ ದಶಮಿ ಹಬ್ಬದ ಸಂಭ್ರಮದಲ್ಲಿ ಮುಳಗಿ ಮಳೆಯಿಂದ ಏನು ಬೆಳೆ ಹಾನಿ (Crop loss) ಆಗಿಲ್ಲ ಎಂಬ ವರದಿ ಮೇಲಧಿಕಾರಿಗಳಿಗೆ ರವಾನಿಸಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಕೊರತೆ : ಬೆಳೆ ಒಣಗುವ ಭೀತಿಯಲ್ಲಿ ರೈತ

ಕಳೆದೊಂದು ವಾರದಿಂದ ಜಿಲ್ಲಾದ್ಯಂತ ಬೀಳುತ್ತಿರುವ ಭಾರಿ ಮಳೆಯಿಂದ ಕೆರೆ, ಕುಂಟೆಗಳು ಕಟ್ಟೆಗಳು ಒಡೆದು ಅಪಾರ ಪ್ರಾಮಾಣ ನೀರು ನುಗ್ಗಿ ರೈತರ ತೋಟ, ಭತ್ತ (Paddy), ರಾಗಿ (Millet) ಮತ್ತಿತರ ಬೆಳೆಗಳು ಮಣ್ಣು ಪಾಲಾಗುತ್ತಿವೆ. ಆದರೆ ಈ ಬಗ್ಗೆ ಬೆಳೆ ಹಾನಿ ಸಮೀಕ್ಷೆ (Survey) ನಡೆಸಬೇಕಾದ ಅಧಿಕಾರಿಗಳು ಜಿಲ್ಲೆಯಲ್ಲಿ ಎಲ್ಲಿಗೂ ಭೇಟಿ ನೀಡದೇ ಮಳೆಯಿಂದ ಬೆಳೆ ಹಾನಿ ಅಗಿಲ್ಲ ಎನ್ನುವ ವರದಿ ಸಲ್ಲಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕೊಚ್ಚಿ ಹೋಗಿದ್ದ ನಂದಿ ಬೆಟ್ಟ ರಸ್ತೆ ಪುನರ್ ನಿರ್ಮಾಣ ಚುರುಕು

ಸಾಲ ಸೋಲ ಮಾಡಿ ಉತ್ತಮ ಬೆಳೆ, ಬೆಲೆ ನಿರೀಕ್ಷೆ ಹೊಂದಿದ್ದ ರೈತರಿಗೆ ಸದ್ಯ ಬೆಲೆ (Price) ಇದ್ದರೂ ಮಳೆಯಿಂದ ಬೆಳೆ ಕೈಗೆ ಸಿಗದ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಟೊಮೇಟೋಗೆ ಮಾರುಕಟ್ಟೆಯಲ್ಲಿ (Market) 15 ಕೆಜಿ ಬಾಕ್ಸ್‌ 500 ರಿಂದ 600, 650 ರುಗೆ ಮಾರಾಟವಾದರೂ ಮಳೆಯಿಂದ ಟೊಮೇಟೋ ತೋಟಗಳಿಗೆ ನಾಶವಾಗಿದೆ. ಕೆಲವು ಕಡೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆ, ಕುಂಟೆಗಳ ಒಡೆದು ಪ್ರವಾಹ ಉಂಟಾಗಿ ರೈತನ ಬೆಳೆ ಕಳೆದುಕೊಳ್ಳುವಂತಾಗಿದ್ದು ಜಿಲ್ಲೆಯ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಕನಿಷ್ಠ ಬೆಳೆ ಹಾನಿ ಪ್ರದೇಶಗಳಿಗೆ ಹೋಗಿ ವಾಸ್ತವ ಅರಿಯದೇ ಜಿಲ್ಲೆಯಲ್ಲಿ ಮಳೆಯಿಂದಾಗಿ ಬೆಳೆ ಹಾನಿ ಆಗಿಲ್ಲ ಎಂಬ ಸುಳ್ಳು ವರದಿ ರವಾನೆ ಮಾಡುತ್ತಿರುವುದು ಎಷ್ಟುಮಾತ್ರ ಸರಿ ಎಂಬುದಕ್ಕೆ ಜಿಲ್ಲಾಡಳಿತವೇ ಉತ್ತರಿಸಬೇಕಿದೆ.

ಜಿಲ್ಲೆಯಲ್ಲಿ ಗುಡಿಬಂಡೆಯಲ್ಲಿ ನಾಲ್ಕೈದು ಎಕರೆ ಬೀನ್ಸ್‌ ಮತ್ತಿತರ ವಾಣಿಜ್ಯ ಬೆಳೆ ಬಿಟ್ಟರೆ ಜಿಲ್ಲೆಯ ಬೇರೆ ತಾಲೂಕುಗಳಲ್ಲಿ (Taluk) ಮಳೆಯಿಂದ ವಾಣಿಜ್ಯ ಬೆಳೆಗಳಿಗೆ ಯಾವುದೇ ರೀತಿ ಹಾನಿ ಆಗಿಲ್ಲ ಎಂದು ತಾಲೂಕು ಮಟ್ಟದ ಅಧಿಕಾರಿಗಳು ವರದಿ ನೀಡಿದ್ದಾರೆ. ಆದರೂ ಮತ್ತೊಮ್ಮೆ ಸಮಗ್ರವಾಗಿ ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ.

ಕೃಷ್ಣಮೂರ್ತಿ, ಜಿಲ್ಲಾ ತೋಟಗಾರಿಕಾ ಅಧಿಕಾರಿ.

ಕೃಷಿ ಅಧಿಕಾರಿಗಳು ಹೇಳಿದ್ದೇನು?

ಜಿಲ್ಲೆಗೆ ಮಳೆ ತೀರಾ ಅಗತ್ಯವಾಗಿತ್ತು. ಆದ್ದರಿಂದ ಮಳೆ ಆಗಿರುವುದು ರೈತರಿಗೆ ಸಂತಸವಾಗಿದೆ. ಆದರೆ ಮಳೆಯಿಂದ ಕೃಷಿ ಬೆಳೆಗಳಿಗೆ ಯಾವುದೇ ರೀತಿ ಹಾನಿ ಆಗಿಲ್ಲ. ನೆಲಗಡಲೆ ಸಂಸ್ಕರಣೆಗೆ ಒಂದಿಷ್ಟುತೊಂದರೆ ಆಗಿದೆ. ಬಿಟ್ಟರೆ ಮಳೆ ಅಶ್ರಿತ ಬೆಳೆಗಳು ಮಳೆಯಿಂದ ಹಾನಿ ಆಗಿಲ್ಲ. ಮಳೆ ಆಗಿದ್ದು ಒಳ್ಳೆಯದಾಗಿದೆ.

ಎಲ್‌.ರೂಪ, ಜಂಟಿ ಕೃಷಿ ನಿರ್ದೇಶಕಿ, ಚಿಕ್ಕಬಳ್ಳಾಪುರ

click me!