ಮಂಗಳೂರು-ಮುಂಬೈ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಚಾರ ಜೂ.19ರವರೆಗೆ ಬದಲಾವಣೆ, ಕಾರಣವೇನು?

Published : May 22, 2026, 11:50 AM IST
Train

ಸಾರಾಂಶ

ಮಂಗಳೂರಿನಿಂದ ಮುಂಬೈಗೆ ಸಂಚರಿಸುವ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣವನ್ನು ಥಾಣೆಯಲ್ಲಿ ತಾತ್ಕಾಲಿಕವಾಗಿ ಕೊನೆಗೊಳಿಸಲಾಗುತ್ತಿದೆ. ಈ ಸೇವೆಯು ಥಾಣೆ ಮತ್ತು ಮುಂಬೈ ಸಿಎಸ್‌ಎಂಟಿ ನಡುವೆ ಭಾಗಶಃ ರದ್ದಾಗಿದೆ. ಇದಲ್ಲದೆ, ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಚೆನ್ನೈ-ಮಂಗಳೂರು ಮಾರ್ಗದ ರೈಲುಗಳಿಗೆ ಹೆಚ್ಚುವರಿ ಸ್ಲೀಪರ್ ಕೋಚ್‌ಗಳನ್ನು ಅಳವಡಿಸಲಾಗುತ್ತಿದೆ.

ಮಂಗಳೂರು: ರೈಲು ಸಂಖ್ಯೆ 12134 ಮಂಗಳೂರು ಜಂಕ್ಷನ್ - ಮುಂಬೈ ಸಿಎಸ್‌ಎಂಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮೇ 20 ರಿಂದ ಜೂ.19ರ ವರೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಡುವ ಪ್ರಯಾಣವನ್ನು ಥಾಣೆಯಲ್ಲಿ ಅಲ್ಪಾವಧಿಗೆ ಕೊನೆಗೊಳಿಸಲಾಗುತ್ತದೆ. ಈ ರೈಲು ಸೇವೆಯನ್ನು ಥಾಣೆ ಮತ್ತು ಮುಂಬೈ ಸಿಎಸ್‌ಎಂಟಿ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ.

ಥಾಣೆ ಮತ್ತು ಮುಂಬೈ ಸಿಎಸ್‌ಎಂಟಿ ನಡುವೆ ಭಾಗಶಃ ರದ್ದು

ಮಂಗಳೂರು ಜಂಕ್ಷನ್‌ನಿಂದ ಮೇ 20 ರಿಂದ ಮೇ 29 ರವರೆಗೆ ಹೊರಡುವ ರೈಲು ಸಂಖ್ಯೆ 12134 ಮಂಗಳೂರು ಜಂಕ್ಷನ್ - ಮುಂಬೈ ಸಿಎಸ್‌ಎಂಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಪ್ರಯಾಣವನ್ನು ಥಾಣೆಯಲ್ಲಿ ಅಲ್ಪಾವಧಿಗೆ ಸ್ಥಗಿತಗೊಳಿಸಲಾಗುತ್ತದೆ. ಈ ರೈಲು ಸೇವೆಯನ್ನು ಥಾಣೆ ಮತ್ತು ಮುಂಬೈ ಸಿಎಸ್‌ಎಂಟಿ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಹೆಚ್ಚುವರಿ ಕೋಚ್‌ ಅಳವಡಿಕೆ:

ಜನದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಚೆನ್ನೈ ಎಗ್ಮೋರ್‌ನಿಂದ ಹೊರಡುವರೈಲು ಸಂಖ್ಯೆ 16159 ಚೆನ್ನೈ ಎಗ್ಮೋರ್ - ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಪ್ರಯಾಣಕ್ಕೆ ಮೇ 22 ಮತ್ತು 23 ರಂದು ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಕೋಚ್‌ಗಳನ್ನು, ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ರೈಲು ಸಂಖ್ಯೆ 16160 ಮಂಗಳೂರು ಸೆಂಟ್ರಲ್ - ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್ ಪ್ರಯಾಣಕ್ಕೆ ಜೂ. 24 ಮತ್ತು 25 ರಂದು ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಕೋಚ್‌ಗಳನ್ನು ಅಳವಿಸಲಾಗುವುದು ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

PREV
Read more Articles on
click me!

Recommended Stories

ಬಳ್ಳಾರಿಯಲ್ಲಿ ಸಿಕ್ಕ ಬಂಡೆಯಲ್ಲಿ ಬಯಲಾಯ್ತು 17ನೇ ಶತಮಾನದ ನಿಗೂಢ ರಹಸ್ಯ, 8 ಸಾಲಿನ ಅಪರೂಪದ ಶಾಸನ ಪತ್ತೆ!
Ballari University Exam Scam: ಬಳ್ಳಾರಿ ವಿವಿಯಲ್ಲಿ ಹಣ ಕೊಟ್ಟರೆ ಪರೀಕ್ಷೆ ಪಾಸ್‌! ಆಡಿಯೊ ವೈರಲ್