ನಾನು ಯಾವಾಗ ಸಿಎಂ ಆಗುತ್ತೇನೆ ಗೊತ್ತಾ?: ಡಿ.ಕೆ.ಶಿವಕುಮಾರ್ ಉತ್ತರ ಕೇಳಿ ಎಲ್ಲರೂ ಶಾಕ್!

Published : May 22, 2026, 12:26 AM IST
DK Shivakumar

ಸಾರಾಂಶ

ಕಾಲ, ಸರಿಯಾದ ಸಮಯ ನಾನು ಯಾವಾಗ ಸಿಎಂ ಆಗಬೇಕು ಎಂಬುದನ್ನು ತೀರ್ಮಾನ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಮಧ್ಯರಂಗ ದೇಗುಲ ಉದ್ಘಾಟನೆ ನಿಮಿತ್ತ ಹೆಲಿಪ್ಯಾಡ್‌ಗೆ..

ಕೊಳ್ಳೇಗಾಲ (ಮೇ.22): ಕಾಲ, ಸರಿಯಾದ ಸಮಯ ನಾನು ಯಾವಾಗ ಸಿಎಂ ಆಗಬೇಕು ಎಂಬುದನ್ನು ತೀರ್ಮಾನ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಮಧ್ಯರಂಗ ದೇಗುಲ ಉದ್ಘಾಟನೆ ನಿಮಿತ್ತ ಹೆಲಿಪ್ಯಾಡ್‌ಗೆ ಆಗಮಿಸಿದ ಡಿಸಿಎಂರನ್ನು ಪತ್ರಕರ್ತರು, ‘ನೀವು ಯಾವಾಗ ಸಿಎಂ ಆಗುತ್ತೀರಿ?’ ಎಂದು ಪ್ರಶ್ನಿಸುತ್ತಿದ್ದಂತೆ ‘ಅದನ್ನು ಕಾಲ ತೀರ್ಮಾನ ಮಾಡುತ್ತದೆ’. ಮಾಧ್ಯಮದವರ ಸಹಕಾರವೂ ಅಗತ್ಯ ಎಂದರು.

ಚಾಮರಾಜನಗರ ಐತಿಹಾಸಿಕವಾದಂತಹ ಜಿಲ್ಲೆ. ಧಾರ್ಮಿಕ, ಪ್ರಾಕೃತಿಕ ಸಂಪತ್ತು ಹೊಂದಿರುವ ಕಾವೇರಿ ನದಿ ತೀರದಲ್ಲಿರುವ ಪವಿತ್ರ ಪುಣ್ಯಭೂಮಿಯಾಗಿದೆ. ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೌಢ್ಯ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ಮಲೆ ಮಹದೇಶ್ವರ, ಮಧ್ಯರಂಗ, ಸಿದ್ದಪ್ಪಾಜಿ, ಗೋಪಾಲಸ್ವಾಮಿ ಪುಣ್ಯಕ್ಷೇತ್ರಗಳಿಗೆ ಬಂದು ಜನ ನೆಮ್ಮದಿ ಕಂಡುಕೊಳ್ಳುತ್ತಾರೆ. ಬೆಳಗ್ಗೆಯಿಂದ ಸೂರ್ಯ ಮುಳುಗುವ ವೇಳೆಗೆ ಶ್ರೀರಂಗಪಟ್ಟಣ ಆದಿರಂಗ, ಮಧ್ಯರಂಗ ಹಾಗೂ ತಮಿಳುನಾಡಿನಲ್ಲಿರುವ ಅಂತ್ಯರಂಗ ದೇವಾಲಯಗಳಿಗೆ ಭೇಟಿ ನೀಡುವ ಪದ್ಧತಿ ನಡೆದುಕೊಂಡು ಬಂದಿದೆ ಎಂದರು.

ನಮ್ಮ ಸರ್ಕಾರ ಹಾಗೂ ಖಾಸಗಿಯವರು ಸೇರಿ ಈ ದೇವಾಲಯದ ಜೀರ್ಣೋದ್ಧಾರ ಕೆಲಸ ಮಾಡಲಾಗಿದೆ. ಇಂದು ಸಚಿವ ಸಂಪುಟ ಸಭೆ ಇದ್ದರೂ ನಾನು ಸೇರಿ ಅನೇಕ ಸಚಿವರು ಈ ಕಾರ್ಯಕ್ರಮಕ್ಕೆ ಬಂದಿದ್ದೇವೆ. ಭಕ್ತ ಹಾಗೂ ಭಗವಂತನ ನಡುವೆ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಈ ಪುಣ್ಯಕ್ಷೇತ್ರ ಯಾತ್ರಿಕರಿಗೆ ಪ್ರಸಿದ್ಧವಾಗಿದೆ. ಇದು ಪ್ರಕೃತಿ ಕೊಡುಗೆ. ಇಲ್ಲಿ ಸಚಿವ ಸಂಪುಟ ಸಭೆ ಮಾಡಿ ಈ ಭಾಗದ ಅಭಿವೃದ್ಧಿಗೆ ಅನೇಕ ಕ್ರಮ ಕೈಗೊಳ್ಳಲಾಗಿದೆ. ಕೈಗಾರಿಕಾ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ. ಆಮ್ಲಜನಕ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಸಚಿವರಾದ ಕೆ. ವೆಂಕಟೇಶ್ ಸಹ ಸಾಥ್ ನೀಡಿದ್ದಾರೆ ಎಂದು ತಿಳಿಸಿದರು.

ಜಿಬಿಎ ಚುನಾವಣೆ

ಜಿಬಿಎ ಚುನಾವಣೆ ನಡೆಸುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ. ಚುನಾವಣೆ ನಡೆಸಲು ಸರ್ಕಾರ ಸಂಪೂರ್ಣವಾಗಿ ಸಹಕಾರ ನೀಡಲಿದೆ. ಸಮಯದ ಪ್ರಕಾರ ಚುನಾವಣೆ ನಡೆಯಲಿದೆ. ನಾವೆಲ್ಲ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಈ ಸಂದರ್ಭದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಉಸ್ತುವಾರಿ ಸಚಿವ ವೆಂಕಟೇಶ್, ಹನೂರು ಶಾಸಕ ಎಂ.ಆರ್‌. ಮಂಜುನಾಥ್, ಕೊಳ್ಳೇಗಾಲ ಶಾಸಕ ಎ.ಆರ್‌. ಕೃಷ್ಣಮೂರ್ತಿ, ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮಾಜಿ ಶಾಸಕ ಆರ್‌. ನರೇಂದ್ರ, ಜಿಪಂನ ಮಾಜಿ ಸದಸ್ಯ ಕೊಪ್ಪಾಳಿ ನಾಯಕ, ಪುಟ್ಟರಾಜು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಮಂಜುನಾಥ್, ಚೇತನ್ ದೊರೆ, ಇಓ ಸುರೇಶ್ ಕುಮಾರ್‌, ಜಿಲ್ಲಾಧಿಕಾರಿ ಶ್ರೀರೂಪಾ, ಎಸ್ಪಿ ಮುತ್ತುರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಚಿಕ್ಕರಾಜು ಇನ್ನಿತರಿದ್ದರು.

PREV
Read more Articles on
click me!

Recommended Stories

ವಿಶ್ವ ವಿಖ್ಯಾತ ನಂದಿಗಿರಿಧಾಮ ಸಮೀಪ ಭಾರಿ ನಿಗೂಢ ಸ್ಪೋಟ: ಬ್ರಹ್ಮಗಿರಿ ಬೆಟ್ಟದಿಂದ ಉರುಳಿಬಿದ್ದ ಬೃಹತ್ ಬಂಡೆಗಳು!
ಸ್ಯಾಂಡ್​ವಿಚ್​ಗೆ ಸ್ಪರ್ಧೆ ​ಕೊಡ್ತಿರೋ Wrapper Dosa! Gen Zಗಳ ಕನಸು ನನಸಾಯ್ತು- ರಾತ್ರೋರಾತ್ರಿ ಫೇಮಸ್​ ಆಗೋಯ್ತು