Udupi: ಪ್ರಮೋದ್ ಮುತಾಲಿಕ್ ವಿರುದ್ಧ ತಿರುಗಿ ಬಿದ್ದ ಮಂಗಳೂರು ವಿಭಾಗ ಶ್ರೀರಾಮ ಸೇನೆ

By Govindaraj S  |  First Published Feb 11, 2023, 12:21 AM IST

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೆಲ್ಲುವುದಿಲ್ಲ, ಸೋತ ನಂತರ ಅವರು ದುರಂತ ನಾಯಕರಾಗುತ್ತಾರೆ ಎಂದು ಶ್ರೀರಾಮ ಸೇನೆಯ ಮಂಗಳೂರು ವಿಭಾಗಾಧ್ಯಕ್ಷ ಮೋಹನ್ ಭಟ್ ನೋವು ವ್ಯಕ್ತಪಡಿಸಿದ್ದಾರೆ. 


ಉಡುಪಿ (ಫೆ.11): ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೆಲ್ಲುವುದಿಲ್ಲ, ಸೋತ ನಂತರ ಅವರು ದುರಂತ ನಾಯಕರಾಗುತ್ತಾರೆ ಎಂದು ಶ್ರೀರಾಮ ಸೇನೆಯ ಮಂಗಳೂರು ವಿಭಾಗಾಧ್ಯಕ್ಷ ಮೋಹನ್ ಭಟ್ ನೋವು ವ್ಯಕ್ತಪಡಿಸಿದ್ದಾರೆ. ಅವರು ಶುಕ್ರವಾರ, ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕಾರ್ಕಳದಲ್ಲಿ ಸುನಿಲ್ ಕುಮಾರ್‌ರಂತಹ ನಾಯಕರನ್ನು ಸೋಲಿಸಲು ಸಾಧ್ಯವಿಲ್ಲ, ಅವರ ವಿರುದ್ಧ ಸ್ಪರ್ಧಿಸುವುದು ಮಕ್ಕಳಾಟವಲ್ಲ. 

ಮುತಾಲಿಕ್ ಜೀ ನೀವು ದುರಂತ ನಾಯಕರಾಗಬೇಡಿ, ಮಹಾರಾಷ್ಟ್ರದ ಶಿವಸೇನೆಯ ಬಾಳ್ ಠಾಕ್ರೆಯಂತೆ ನೀವು ಸಂಘಟನೆಯಲ್ಲಿಯೇ ಇದ್ದು ಬೇರೆಯವರನ್ನು ರಾಜಕೀಯದಲ್ಲಿ ಬೆಳಸಿ, ಇತಿಹಾಸ ಪುರುಷರಾಗಿ ಎಂದು ಮುತಾಲಿಕ್ ಅವರನ್ನು ವಿನಂತಿಸಿದರು. ಕಾರ್ಕಳದ ಉದ್ಯಮಿ ಮತ್ತು ವಕೀಲರೊಬ್ಬರ ಕುಮ್ಮಕ್ಕಿನಿಂದ ಮುತಾಲಿಕ್ ಸುನಿಲ್ ಕುಮಾರ್ ಎದುರು ಸ್ಪರ್ಧೆಗಿಳಿಯುತಿದ್ದಾರೆ, ಸುನಿಲ್ ಕುಮಾರ್ ಮೇಲೆ ಉದ್ಯಮಿಯವರು ವೈಯುಕ್ತಿಕ ದ್ವೇಷಕ್ಕಾಗಿ ಮುತಾಲಿಕ್ ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಆರೋಪಿಸಿದರು.

Latest Videos

undefined

ಫೆ.24ಕ್ಕೆ ನರೇಶ್ ಕುಮಾರ್ ನಿರ್ದೇಶನದ 'ಸೌತ್ ಇಂಡಿಯನ್ ಹೀರೋ' ಚಿತ್ರ ಬಿಡುಗಡೆ

ಮುತಾಲಿಕ್ ಅವರು ಕಾರ್ಕಳದಿಂದ ಸ್ಪರ್ಧಿಸುವ ಬಗ್ಗೆ ಶ್ರೀರಾಮ ಸೇನೆಯ ಹಿರಿಯ ನಾಯಕರನ್ನಾಗಲಿ, ಸ್ಥಳೀಯ ಕಾರ್ಯಕರ್ತರನ್ನಾಗಲಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಈಗ ಸಂಘಟನೆ ಕಾರ್ಯಕರ್ತರ ನಡುವೆ ಪರ ವಿರೋಧ ಚರ್ಚೆ ಆರಂಭವಾಗಿ ಸಂಘಟನೆಯೇ ವಿಭಜನೆಯಾಗುವ ಹಂತದಲ್ಲಿದೆ ಎಂದು ಬೇಸರಿಸಿದರು. ಕಾರ್ಕಳದಿಂದ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಿದ ಮೇಲೆ ತಮ್ಮನ್ನಾಗಲಿ ಅಥವಾ ಇತರ ನಾಯಕರನ್ನಾಗಲಿ ಯಾವುದೇ ಕಾರ್ಯಕ್ರಮಕ್ಕೆ ಕರೆಯುತ್ತಿಲ್ಲ ಅಥವಾ ಸಂಪರ್ಕದಲ್ಲಿಲ್ಲ. 

ಕೊಡಗಿಗೆ ಬರಲು ಹೆದರಿದ್ರಾ ಸಿದ್ದು, ಡಿಕೆಶಿ ಜೋಡಿಯ ಪ್ರಜಾಧ್ವನಿ ಯಾತ್ರೆ!

ಆದ್ದರಿಂದ ಅವರನ್ನು ನೇರವಾಗಿ ವಿನಂತಿಸುವುದಕ್ಕಾಗುತ್ತಿಲ್ಲ ಎಂದವರು ಹೇಳಿದರು‌. ಸಂಘಟನೆ ಮತ್ತು ರಾಜಕೀಯ ಜೊತೆಯಾಗಿ ಸಾಗುವುದಿಲ್ಲ, ರಾಜಕೀಯವೇ ಬೇಕು ಎಂದಾದರೇ ಸಂಘಟನೆಯನ್ನು ನಮಗೆ ಬಿಟ್ಟುಬಿಡಿ, ನಾವೇ ಮುಂದುವರಿಸುತ್ತೇವೆ ಎಂದೂ ಮೋಹನ್ ಭಟ್ ಪ್ರಮೋಧ ಮುತಾಲಿಕ್ ಅವರಿಗೆ ಮಾಧ್ಯಮದ ಮೂಲಕ ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ಮಂಗಳೂರು ವಿಭಾಗ ಗೌರವಾಧ್ಯಕ್ಷ ಚಂದ್ರಕಾಂತ್ ಶೆಟ್ಟಿ, ಉಡುಪಿ ಜಿ.ಪ್ರ.ಕಾರ್ಯದರ್ಶಿ ಸಂದೀಪ್ ಮೂಡುಬೆಟ್ಟು, ಜಿ.ವಕ್ತಾರ ಶ್ರೀನಿವಾಸ್ ರಾವ್, ಶಿವಮೊಗ್ಗ ಜಿಲ್ಲಾಧ್ಯಕ್ಷ ಪ್ರಶಾಂತದ ಬಂಗೇರ ಉಪಸ್ಥಿತರಿದ್ದರು.

click me!