Election: ಸರ್ಕಾರಿ ಆದೇಶಕ್ಕೆ ಕ್ಯಾರೇ ಎನ್ನದ ವಿವಿ; ಕಾಲೇಜು ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಖಭಂಗ! ಗೆದ್ದು ಬೀಗಿದ ABVP!

Published : Sep 11, 2026, 04:28 PM IST
ABVP

ಸಾರಾಂಶ

ಕಾಲೇಜು ಚುನಾವಣೆಯಲ್ಲಿ, ಕೊನೆ ಕ್ಷಣದಲ್ಲಿ ಸರ್ಕಾರ ಹೊರಡಿಸಿದ ನೇರ ಚುನಾವಣೆ ಆದೇಶವನ್ನು ವಿಶ್ವವಿದ್ಯಾಲಯ ತಿರಸ್ಕರಿಸಿತು. ನಿಗದಿಯಂತೆ ನಡೆದ ಪರೋಕ್ಷ ಚುನಾವಣೆಯಲ್ಲಿ ಎಬಿವಿಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದು, ಇದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟುಮಾಡಿದೆ.

ಮಂಗಳೂರು: ಕರಾವಳಿಯ ಶೈಕ್ಷಣಿಕ ಕೇಂದ್ರ ಮಂಗಳೂರಿನಲ್ಲಿ ನಡೆದ ವಿವಿ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ ಈಗ ರಾಜ್ಯ ರಾಜಕೀಯ ಮತ್ತು ಶೈಕ್ಷಣಿಕ ವಲಯದಲ್ಲಿ ದೊಡ್ಡ ಮಟ್ಟದ ಸೌಂಡ್ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಖಭಂಗ ಉಂಟುಮಾಡಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಬೆಂಬಲಿತ ಅಭ್ಯರ್ಥಿಗಳು, ಸರ್ಕಾರದ ಆದೇಶಕ್ಕೆ ನೇರ ಠಕ್ಕರ್ ನೀಡಿ ಭರ್ಜರಿ ಜಯಭೇರಿ ಬಾರಿಸಿದ್ದಾರೆ.

ಸರ್ಕಾರದ ಮಾಸ್ಟರ್ ಪ್ಲಾನ್ ಮತ್ತು ಕೊನೇ ಕ್ಷಣದ ಆದೇಶ!

ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಐತಿಹಾಸಿಕ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಿಗದಿಯಾಗಿತ್ತು. ಅಲ್ಲಿಯವರೆಗೆ ಚಾಲ್ತಿಯಲ್ಲಿದ್ದ ನಿಯಮದಂತೆ, ತರಗತಿ ಪ್ರತಿನಿಧಿಗಳು ಮತದಾನ ಮಾಡುವ ‘ಪರೋಕ್ಷ ಮತದಾನ’ (Indirect Election) ಪದ್ಧತಿಯಲ್ಲಿ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು. ಆದರೆ, ಪರೋಕ್ಷ ಚುನಾವಣೆ ನಡೆದರೆ ಎಬಿವಿಪಿ ಬೆಂಬಲಿತರೇ ಗೆದ್ದು ಬೀಗಲಿದ್ದಾರೆ ಎಂಬ ಸುಳಿವು ಸಿಗುತ್ತಿದ್ದಂತೆ, ಆಡಳಿತಾರೂಢ ಸರ್ಕಾರ ಮತ್ತು ಸಚಿವರಿಂದ ಚುನಾವಣೆ ತಡೆಯಲು ಅಥವಾ ಮುಂದೂಡಲು ವಿಶ್ವವಿದ್ಯಾಲಯದ ಮೇಲೆ ತೀವ್ರ ಒತ್ತಡ ಹೇರಲಾಗಿತ್ತು ಎನ್ನಲಾಗಿದೆ.

ಸರ್ಕಾರಕ್ಕೆ ಠಕ್ಕರ್!

ಈ ಚುನಾವಣೆಯನ್ನು ಹೇಗಾದರೂ ಮಾಡಿ ತಡೆಯಲು ತರಾತುರಿಯಲ್ಲಿ ಮಾಸ್ಟರ್ ಪ್ಲಾನ್ ರೂಪಿಸಿದ ಸರ್ಕಾರ, ನಿನ್ನೆ ರಾತ್ರೋರಾತ್ರಿ ರಾಜ್ಯಾದ್ಯಂತ ಕಾಲೇಜು ಚುನಾವಣೆ‌ಗೆ ಹೊಸ ನಿಯಮ ಜಾರಿಗೆ ತಂದು ಆದೇಶ ಹೊರಡಿಸಿತು. ಇನ್ಮುಂದೆ ಪರೋಕ್ಷ ಚುನಾವಣೆ ಬೇಡ, ಎಲ್ಲಾ ವಿದ್ಯಾರ್ಥಿಗಳು ನೇರವಾಗಿ ಮತ ಚಲಾಯಿಸುವ ‘ನೇರ ಚುನಾವಣೆ’ ನಡೆಸಬೇಕು ಎಂದು ಸರ್ಕಾರದ ಮಟ್ಟದಲ್ಲಿ ಆದೇಶ ಹೊರಡಿಸಲಾಯಿತು. ಈ ಮೂಲಕ ಇಂದಿನ ಚುನಾವಣೆಯನ್ನು ಮುಂದೂಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿತ್ತು.

ಸರಕಾರಿ ಆದೇಶಕ್ಕೆ ಬೆಲೆ ಕೊಡದ ವಿವಿ: ಕಾನೂನುಬದ್ಧ ವಾದ!

ಆದರೆ, ಸರ್ಕಾರದ ಈ ತರಾತುರಿಯ ಆದೇಶಕ್ಕೂ ಮತ್ತು ಸಚಿವರ ರಾಜಕೀಯ ಒತ್ತಡಕ್ಕೂ ಮಂಗಳೂರು ವಿಶ್ವವಿದ್ಯಾಲಯ ಮಣಿಯಲಿಲ್ಲ. ಸೆಪ್ಟೆಂಬರ್ 10 ರಂದು ಸರ್ಕಾರಿ ಆದೇಶ ಬರುವುದಕ್ಕಿಂತ ಮುಂಚಿತವಾಗಿಯೇ ಮಂಗಳೂರು ವಿವಿ ಕಾಲೇಜಿನ ಚುನಾವಣಾ ವೇಳಾಪಟ್ಟಿ ಘೋಷಣೆಯಾಗಿತ್ತು. ನಿಯಮಾವಳಿಗಳ ಪ್ರಕಾರ ಒಮ್ಮೆ ಚುನಾವಣೆ ಪ್ರಕ್ರಿಯೆ ಆರಂಭಗೊಂಡ ಮೇಲೆ ಮಧ್ಯದಲ್ಲಿ ಬಂದ ಹೊಸ ಆದೇಶಗಳನ್ನು ಅನ್ವಯಿಸಲು ಬರುವುದಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿ ನಾಯಕರು ಪ್ರಬಲವಾಗಿ ವಾದಿಸಿದರು. ಸರ್ಕಾರದ ಕಡೆಯಿಂದ ಎಷ್ಟೇ ಒತ್ತಡ ಬಂದರೂ, ವಿಶ್ವವಿದ್ಯಾಲಯವು ನಿಗದಿತ ವೇಳಾಪಟ್ಟಿಯಂತೆಯೇ ಪರೋಕ್ಷ ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿತು.

ಎಬಿವಿಪಿ ಭರ್ಜರಿ ಜಯಭೇರಿ ಹಾಗೂ ವಿಜಯೋತ್ಸವ!

ಪರೋಕ್ಷ ಮತದಾನದ ಮೂಲಕ ನಡೆದ ಈ ರೋಚಕ ಚುನಾವಣೆಯಲ್ಲಿ ಎಬಿವಿಪಿ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿ ಬೀಗಿದ್ದಾರೆ. ಸರ್ಕಾರದ ಹಸ್ತಕ್ಷೇಪ ಮತ್ತು ಕಟ್ಟುನಿಟ್ಟಿನ ಆದೇಶದ ನಡುವೆಯೂ ಎಬಿವಿಪಿ ತನ್ನ ಪದಾಧಿಕಾರಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಎಬಿವಿಪಿಯಿಂದ ಸಂಭ್ರಮ!

ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಮಂಗಳೂರಿನ ಹಂಪನಕಟ್ಟೆಯ ಕಾಲೇಜು ಆವರಣದಲ್ಲಿ ಎಬಿವಿಪಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ವಿಜಯೋತ್ಸವ ಆಚರಿಸಿದರು. ಭಗವಾ ಧ್ವಜ ಹಿಡಿದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ವಿಜಯದ ಸಂಭ್ರಮ ಆಚರಿಸಿದರು. ತರಾತುರಿಯಲ್ಲಿ ಆದೇಶ ಹೊರಡಿಸಿ ಕಾಲೇಜು ಚುನಾವಣೆಯಲ್ಲಿ ರಾಜಕೀಯ ಮಾಡಲು ಹೊರಟ ಕಾಂಗ್ರೆಸ್ ಸರ್ಕಾರಕ್ಕೆ ವಿದ್ಯಾರ್ಥಿ ಶಕ್ತಿ ತಕ್ಕ ಉತ್ತರ ನೀಡಿದೆ ಎಂದು ಎಬಿವಿಪಿ ನಾಯಕರು ಹರಿಹಾಯ್ದಿದ್ದಾರೆ. ಒಟ್ಟಿನಲ್ಲಿ, ಮಂಗಳೂರು ವಿವಿ ಕಾಲೇಜು ಚುನಾವಣೆ ಈಗ ರಾಜ್ಯಮಟ್ಟದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ತಂದಿಟ್ಟಿದೆ.

PREV
Read more Articles on
click me!

Recommended Stories

ಆಫ್ರಿಕಾದಲ್ಲಿ ಇನ್ನೂ ವಹಿವಾಟು ಶುರುವಾಗಿಲ್ಲ, ವಿದೇಶಿ ಹೂಡಿಕೆ, ₹2 ಕೋಟಿ ಹಣದ ರಹಸ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ
ಬೆಂಗಳೂರು: ಕಡಿಮೆ ಬೆಲೆಗೆ ಸಿಗುತ್ತೆ ಅಂತ ಈ ಔಷಧಿ ತಗೊಳ್ತಿದ್ದೀರಾ? ಬಯಲಾಯ್ತು ದಂಧೆ, ಕ್ಯಾನ್ಸರ್ ಮಾತ್ರೆಗಳೇ ನಕಲಿ!