ಬೆಂಗಳೂರಿನ ಬನಶಂಕರಿ ಪ್ರದೇಶದಲ್ಲಿ ಮನೆ ಮುಂದೆ ಚಿರತೆ ಪ್ರತ್ಯಕ್ಷ, ನಗರದಲ್ಲಿ ಹೆಚ್ಚಿದ ಆತಂಕ

Published : Sep 11, 2026, 01:27 PM IST
Leopard Sighting in Banashankari

ಸಾರಾಂಶ

ಬೆಂಗಳೂರಿನಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡ ಜನರ ಆತಂಕ ಹೆಚ್ಚಿಸಿದೆ. ಈ ಬಾರಿ ಬನಶಂಕರಿ 6ನೇ ಸ್ಟೇಜ್‌ನಲ್ಲಿ ಚಿರತೆ ಕಾಣಿಸಿಕೊಂಡಿದೆ. ಸಿಸಿಟಿವಿಯಲ್ಲಿ ಚಿರತೆ ದೃಶ್ಯಗಳು ದಾಖಲಾಗಿದೆ. ಮನೆ ಮುಂದೆ, ರಸ್ತೆಯಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸೆರೆಯಾಗಿದೆ.

ಬೆಂಗಳೂರು (ಸೆ.11) ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಈಗಾಗಲೇ ಬೆಂಗಳೂರಿನ ಕೆಲೆವೆಡೆ ಚಿರತೆ ಕಾಣಿಸಿಕೊಂಡು ಆತಂಕ ಹೆಚ್ಚಿಸಿದೆ. ಕೆಲ ದಿನಗಳಿಂದ ನೆಮ್ಮದಿಯಿಂದ ಜನರಿಗೆ ಇದೀಗ ಮತ್ತೆ ಚಿರತೆ ಹಾವಳಿ ಶುರುವಾಗಿದೆ. ಈ ಬಾರಿ ಬೆಂಗಳೂರಿನ ಬನಶಂಕರಿಯ 6ನೇ ಸ್ಟೇಜ್‌ನಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಕೇಶವ್ ಎಂಬುವವರ ಮನೆ ಮುಂದೆ ಚಿರತೆ ಓಡಾಡುತ್ತಿರುವುದು ಪತ್ತೆಯಾಗಿದೆ. ಕೇಶವ್ ಮನೆ ಮುಂದೆ ಹಾಕಿರುವ ಸಿಸಿಟಿವಿಯಲ್ಲಿ ಚಿರತೆ ದೃಶ್ಯಗಳು ಸೆರೆಯಾಗಿದೆ. ಮನೆ ಮುಂಭಾಗ, ರಸ್ತೆಯಲ್ಲಿ ರಾಜಾರೋಷವಾಗಿ ಚಿರತೆ ಓಡಾಡುತ್ತಿದೆ. ಈ ಕುರಿತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಮನೆ ಮುಂದೆ ಕಾಣಿಸಿಕೊಂಡ ಚಿರತೆ

ಬನಶಂಕರಿ 6ನೇ ಸ್ಟೇಜ್‌ನಲ್ಲಿ ನಿನ್ನೆ (ಸೆ.10) ಮುಂಜಾನೆ ಚಿರತೆ ಕಾಣಿಸಿಕೊಂಡಿದೆ. ಕೇಶವ್ ಅನ್ನೋ ನಿವಾಸಿಯ ಮನೆ ಮುಂದೆ ಚಿರತೆ ಓಡಾಡಿದೆ. ನಾಯಿ ಬೊಗಳಿದ ಕಾರಣ ಚಿರತೆ ಸ್ಥಳದಿಂದ ಓಡಿ ಹೋಗಿದೆ. ಬೆಳಗಿನ ಜಾವ ಚಿರತೆ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ. ಮನೆ ಸುತ್ತು ಮುತ್ತ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಹೀಗಾಗಿ ಸಿಸಿಟಿವಿ ಪರಿಶೀಲಿಸಿದಾಗ ಚಿರತೆ ಪ್ರತ್ಯಕ್ಷವಾಗಿರುವುದು ಖಚಿತವಾಗಿದೆ.

ಎರಡು ವರ್ಷದ ಗಂಡು ಚಿರತೆ

ಬನಶಂಕರಿ 6ನೇ ಸ್ಟೇಜ್‌ನಲ್ಲಿ ಕಾಣಿಸಿಕೊಂಡ ಚಿರತೆ 2 ವರ್ಷದ ಗಂಡು ಚಿರತೆ ಎಂದು ಅರಣ್ಯ ಇಲಾಖೆ ಹೇಳಿದೆ. ಕೇಶವ್ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಸಿಸಿಟಿವಿ ಪರಿಶೀಲಿಸಿದ್ದಾರೆ. ಇತ್ತ ಕೇಶವ್ ಈ ಕುರಿತು ಆತಂಕ ಹೊರಹಾಕಿದ್ದು, ಚಿರತೆ ಮನೆ ಮುಂದೆ ಬರುತ್ತಿದೆ ಎಂದರೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಅರಣ್ಯಾಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಅರಣ್ಯದಂಚಿನ ಪ್ರದೇಶವಾಗಿರುವ ಕಾರಣ ಚಿರತೆ ಬರುತ್ತಿದೆ.ಹೀಗಾಗಿ ಟ್ರೆಂಟ್ ಹಾಕಿ, ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ಬರದಂತೆ ತಡೆಯಲು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಮಾಡಬೇಕು ಎಂದು ಕೇಶವ್ ಆಗ್ರಹಿಸಿದ್ದಾರೆ.

ಚಿರತೆ ಪ್ರತ್ಯಕ್ಷ ಎಂದರೆ ಮಕ್ಕಳು ಹೆಚ್ಚು ಜಾಗೃತೆ ವಹಿಸಬೇಕು. ಚಿರತೆಗಳು ಮಕ್ಕಳನ್ನು ಟಾರ್ಗೆಟ್ ಮಾಡಲಿದೆ. ಇದೀಗ ಮನೆಯಿಂದ ಹೊರಗೆ ಕಾಲಿಡಲು ಭಯಪಡುವ ಪರಿಸ್ಥಿತಿ ಇದೆ ಎಂದು ಕೇಶವ್ ಹೇಳಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು-ಮಂಗಳೂರು ವಂದೇ ಭಾರತ್ 2ನೇ ಟ್ರಯಲ್ ರನ್ ಯಶಸ್ವಿ: ಪುತ್ತೂರಲ್ಲಿ ನಿಲ್ಲದೆ ನಿರಾಸೆ ಮೂಡಿಸಿದ ರೈಲು!
ದೇವನಹಳ್ಳಿ MSME ತಂತ್ರಜ್ಞಾನ ಕೇಂದ್ರದಿಂದ 10 ಸಾವಿರ ಮಂದಿಗೆ ಆಧುನಿಕ ಕೌಶಲ್ಯ ತರಬೇತಿ