ಮಂಗಳೂರು-ಬೆಂಗಳೂರು ರಾತ್ರಿ ರೈಲು ಬುಕ್ಕಿಂಗ್‌ ರದ್ದು

By Kannadaprabha NewsFirst Published Feb 28, 2020, 8:22 AM IST
Highlights

ಬೆಂಗಳೂರು - ಕಾರವಾರ (ಮಂಗಳೂರು ಸೆಂಟ್ರಲ್‌) ನಡುವೆ ಸಂಚರಿಸುತ್ತಿದ್ದ ಎರಡು ಎಕ್ಸ್‌ಪ್ರೆಸ್‌ ರಾತ್ರಿ ರೈಲುಗಳ ಪ್ರಯಾಣದ ಬುಕ್ಕಿಂಗ್‌ ರದ್ದುಗೊಳ್ಳಲಿದೆ. ಬೆಂಗಳೂರು ಮತ್ತು ಕಾರವಾರ ನಡುವಿನ ರೈಲು ಪ್ರಯಾಣ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ತರಲು ರೈಲ್ವೆ ಮಂಡಳಿ ಉದ್ದೇಶಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಮಂಗಳೂರು(ಫೆ.28): ಬೆಂಗಳೂರು - ಕಾರವಾರ (ಮಂಗಳೂರು ಸೆಂಟ್ರಲ್‌) ನಡುವೆ ಸಂಚರಿಸುತ್ತಿದ್ದ ಎರಡು ಎಕ್ಸ್‌ಪ್ರೆಸ್‌ ರಾತ್ರಿ ರೈಲುಗಳ ಪ್ರಯಾಣದ ಬುಕ್ಕಿಂಗ್‌ ಜೂನ್‌ 16 ರಿಂದ ರದ್ದುಗೊಳ್ಳಲಿದೆ.

ಬೆಂಗಳೂರು ಮತ್ತು ಕಾರವಾರ ನಡುವಿನ ರೈಲು ಪ್ರಯಾಣ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ತರಲು ರೈಲ್ವೆ ಮಂಡಳಿ ಉದ್ದೇಶಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

30 ಬಸ್ಕಿ ಹೊಡೆದರೆ ಫ್ರೀ ರೈಲು ಟಿಕೆಟ್; ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಮೆಚ್ಚುಗೆ!

ಬೆಂಗಳೂರಿನಲ್ಲಿ ಗುರುವಾರ ನಡೆದ ರೈಲ್ವೆ ವೇಳಾಪಟ್ಟಿಸಮಿತಿ ಸಭೆಯಲ್ಲಿ ದೆಹಲಿಯ ರೈಲ್ವೆ ಮಂಡಳಿ ಸದಸ್ಯರು ಭಾಗವಹಿಸಿದ್ದು, ಇತ್ತೀಚೆಗೆ ಘೋಷಣೆಯಾದ ಯಶವಂತಪುರ ಜಂಕ್ಷನ್‌- ವಾಸ್ಕೊ ರೈಲಿನ ಕುರಿತು ಶುಕ್ರವಾರ ನಡೆಯುವ ಮೂರನೇ ದಿನದ ಸಭೆಯಲ್ಲಿ ಒಂದು ನಿರ್ಣಯಕ್ಕೆ ಬರುವುದು ಸಾಧ್ಯವಾಗಬಹುದು ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಮಂಗಳೂರು ಸೆಂಟ್ರಲ್‌ ಮೂಲಕ ಬೆಂಗಳೂರು ಮತ್ತು ಕಾರವಾರ ನಡುವೆ ಸಂಚರಿಸುವ ರೈಲನ್ನು ಪಡೀಲ್‌ ಬೈಪಾಸ್‌ ಮಾರ್ಗ ಮೂಲಕ ಸಂಚರಿಸುವ ಇಲಾಖೆಯ ಪ್ರಯತ್ನದ ಬಗ್ಗೆ ಈ ಭಾಗದ ಎಲ್ಲ ಸಂಸದರು ಹಾಗೂ ರೈಲ್ವೆ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಕೈಗೊಳ್ಳುವ ತೀರ್ಮಾನದ ಬಗ್ಗೆ ಕಾತರ ಹೆಚ್ಚಿದೆ.

ದಕ್ಷಿಣ ಕನ್ನಡದಲ್ಲಿ ಗುಡುಗು ಸಹಿತ ಭಾರೀ ಮಳೆ

ಈಗಾಗಲೇ ಮಂಗಳೂರು ಸೆಂಟ್ರಲ್‌ ಮೂಲಕ ಸಂಚರಿಸುವ ರೈಲನ್ನು ಮಾರ್ಗ ಬದಲಿಸಲು ಅವಕಾಶ ನೀಡದಂತೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ರೈಲ್ವೆ ಮಂಡಳಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ತೀರ್ಮಾನ ಬದಲಾಗುವ ಸಾಧ್ಯತೆಯೇ ಇಲ್ಲ ಸಂಸದರ ದೆಹಲಿ ಕಚೇರಿ ಮೂಲಗಳು ತಿಳಿಸಿವೆ.

click me!