'ಊಟ, ತಿಂಡಿ ಇಲ್ಲದೆ ಕಣ್ಣು ಮಂಜಾಗ್ತಿದೆ': ಖಾಲಿ ಹೊಟ್ಟೆಯಲ್ಲೇ ಬಸ್ ಚಾಲನೆ

Suvarna News   | Asianet News
Published : May 21, 2020, 02:31 PM IST
'ಊಟ, ತಿಂಡಿ ಇಲ್ಲದೆ ಕಣ್ಣು ಮಂಜಾಗ್ತಿದೆ': ಖಾಲಿ ಹೊಟ್ಟೆಯಲ್ಲೇ ಬಸ್ ಚಾಲನೆ

ಸಾರಾಂಶ

ಊಟ, ತಿಂಡಿ ಇಲ್ಲದೇ ಬಸ್ ಚಾಲನೆ ವೇಳೆ ಕಣ್ಣು ಮಂಜಾಗುತ್ತಿದೆ ಎಂದು ಬಸ್‌ ಚಾಲಕರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಬರಿ ಹೊಟ್ಟೆಯಲ್ಲೇ ಬಸ್ ಚಲಾಯಿಸುವ ಕಷ್ಟವನ್ನು ಚಾಲಕರು ಅನುಭವಿಸುವಂತಾಗಿದೆ.

ಮಂಗಳೂರು(ಮೇ 21): ಊಟ, ತಿಂಡಿ ಇಲ್ಲದೇ ಬಸ್ ಚಾಲನೆ ವೇಳೆ ಕಣ್ಣು ಮಂಜಾಗುತ್ತಿದೆ ಎಂದು ಬಸ್‌ ಚಾಲಕರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಬರಿ ಹೊಟ್ಟೆಯಲ್ಲೇ ಬಸ್ ಚಲಾಯಿಸುವ ಕಷ್ಟವನ್ನು ಚಾಲಕರು ಅನುಭವಿಸುವಂತಾಗಿದೆ.

ಊಟ, ತಿಂಡಿ ಇಲ್ಲದೇ ಬಸ್ ಚಾಲನೆ ವೇಳೆ ಕಣ್ಣು ಮಂಜಾಗುತ್ತಿದೆ ಎಂದು ಮಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಅಳಲು ತೋಡಿಕೊಂಡಿದ್ದಾರೆ. ಏಳೆಂಟು ಗಂಟೆ ದೂರದ ಪ್ರಯಾಣದ ವೇಳೆ ಎಲ್ಲೂ ಊಟ, ತಿಂಡಿ ಸಿಗದೆ ಚಾಲಕರು ಕಂಗಾಲಾಗಿದ್ದಾರೆ.

ಕೊಪ್ಪಳ: ಪತ್ನಿ ಸಾವನ್ನಪ್ಪಿದ ಸುದ್ದಿ ಕೇಳಿ ಪತಿ ಸಾವು, ಸಾವಿನಲ್ಲೂ ಒಂದಾದ ಅಜ್ಜ, ಅಜ್ಜಿ..!

ಮಂಗಳೂರು-ಬೆಂಗಳೂರು ಮಧ್ಯೆ ಖಾಲಿ ಹೊಟ್ಟೆಯಲ್ಲೇ ಬಸ್ ಚಾಲನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಬಿ.ಪಿ, ಶುಗರ್ ಇದ್ದ ಚಾಲಕರಿಗೆ ಪ್ರಯಾಣದ ವೇಳೆ ಏನಾದರೂ ತಿನ್ನಲೇ ಬೇಕಾಗಿದ್ದರೂ ಹೊಟೇಲ್‌ಗಳು ಬಂದ್ ಆಗಿರುವುದರಿಂದ ತಿನ್ನಲು ಏನೂ ಸಿಗುತ್ತಿಲ್ಲ.

ಬೆಳ್ಳಂಬೆಳಗ್ಗೆ ಬಸ್ ನಿಲ್ದಾಣಕ್ಕೆ ಬಂದು ರಾತ್ರಿ ಏಳರ ಒಳಗೆ ಪ್ರಯಾಣಿಕರನ್ನ ತಲುಪಿಸಬೇಕಿದೆ. ದಾರಿ ಮಧ್ಯೆ ಹಲವು ಕಡೆ ಡಿಪೋಗಳಿದ್ದರೂ ಊಟ, ತಿಂಡಿಗೆ ವ್ಯವಸ್ಥೆ ಮಾಡಿಲ್ಲ. ಕೆಲವೊಮ್ಮೆ ಏನೂ ತಿನ್ನದೇ ಬಸ್ ಚಾಲನೆ ವೇಳೆ ನಿದ್ದೆ ಬರೋದು, ಕಣ್ಣು ಮಂಜಾಗುತ್ತಿದೆ ಎಂದಿದ್ದಾರೆ.

ಲಾಕ್‌ಡೌನ್‌: ಹಸಿದರ ಹೊಟ್ಟೆ ತುಂಬಿಸಿದ ಮುನಿರಾಬಾದ್‌ ಪೊಲೀಸ್‌ ಠಾಣೆ, ನಿತ್ಯ ದಾಸೋಹ

ಕೇವಲ ಎರಡೇ ದಿನ ಬಸ್ ಓಡಿಸಿ ಆಹಾರವಿಲ್ಲದೇ ಸಾಕಾಗಿದೆ. ಮಂಗಳೂರು ಬಸ್ ನಿಲ್ದಾಣದಲ್ಲಿ ಕುಡಿಯೋಕೆ ಸರಿಯಾದ ನೀರಿನ ವ್ಯವಸ್ಥೆಯೂ ಇಲ್ಲ. ಇಲ್ಲಿ ಬಸ್ ನಿಲ್ದಾಣದ ಹೊಟೇಲ್ ಕೂಡ ತೆರೆದಿಲ್ಲ, ಹೊರಗೆ ತುಂಬಾ ರೇಟ್ ಜಾಸ್ತಿ. ಬೆಳಗ್ಗೆ ಎಲ್ಲಾದರೂ ತಿಂದ್ರೆ ಮತ್ತೆ ಎಂಡ್ ಪಾಯಿಂಟ್‌ನಲ್ಲೇ ತಿನ್ನಬೇಕು ಎಂದಿದ್ದಾರೆ.

ದಯವಿಟ್ಟು ನಮಗೆ ಊಟ, ತಿಂಡಿ, ನೀರಿನ ವ್ಯವಸ್ಥೆ ಸರ್ಕಾರ ಮಾಡಬೇಕು. ನಾವು ಸುರಕ್ಷಿತವಾಗಿದ್ದರಷ್ಟೇ ಪ್ರಯಾಣಿಕರು ಸುರಕ್ಷಿತವಾಗಿರುತ್ತಾರೆ. ಆದರೆ ನಮಗೆ ಊಟ, ತಿಂಡಿ ಇಲ್ಲದೇ ಬಸ್ ಚಾಲನೆ ಕಷ್ಟವಾಗ್ತಿದೆ ಎಂದಿದ್ದಾರೆ.

PREV
click me!

Recommended Stories

ಎಚ್‌ಎಎಲ್ ನಿರ್ಮಿತ ನಾಗರಿಕ ಬಳಕೆಯ ಧ್ರುವ ಹೆಲಿಕಾಪ್ಟರ್ ಹಾರಾಟ ಯಶಸ್ವಿ; ಏನಿದರ ವಿಶೇಷತೆ?
ಜ.4ಕ್ಕೆ ಪ್ರಕೃತಿ ಪ್ರತಿಬಂಬಿಸುವ 23ನೇ ಚಿತ್ರಸಂತೆ