ಸಾವಿನಲ್ಲೂ ಒಂದಾದ ವೃದ್ಧ ದಂಪತಿ| ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ನಡೆದ ಘಟನೆ| ಮಹಾಬಳೇಶ್ವರ ಸ್ವಾಮಿ ಹಾಗೂ ಪತ್ನಿ ಪ್ರಭಾವತಿ ಎಂಬುವರೇ ಸಾವಿನಲ್ಲೂ ಒಂದಾದ ದಂಪತಿಯಾಗಿದ್ದಾರೆ| ಅಜ್ಜ, ಅಜ್ಜಿಯ ಸಾವಿನಿಂದ ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ|
ಕೊಪ್ಪಳ(ಮೇ.21): ಸಾವಿನಲ್ಲೂ ವೃದ್ಧ ದಂಪತಿ ಒಂದಾದ ಘಟನೆ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಇಂದು(ಗುರುವಾರ) ನಡೆದಿದೆ. ಮಹಾಬಳೇಶ್ವರ ಸ್ವಾಮಿ ಹಾಗೂ ಪತ್ನಿ ಪ್ರಭಾವತಿ ಎಂಬುವರೇ ಸಾವಿನಲ್ಲೂ ಒಂದಾದ ದಂಪತಿಯಾಗಿದ್ದಾರೆ.
78 ವರ್ಷದ ಪತ್ನಿ ಪ್ರಭಾವತಿ ಎಂಬುವರು ನಿನ್ನೆ ತಡರಾತ್ರಿ(ಬುಧವಾರ) ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಸುದ್ದಿ ಕೇಳಿದ ಪತಿ ಮಹಾಬಳೇಶ್ವರ ಸ್ವಾಮಿ(86) ಅವರು ಕೂಡ ಇಂದು ನಿಧನಹೊಂದಿದ್ದಾರೆ.
ಲಾಕ್‌ಡೌನ್: ಹಸಿದರ ಹೊಟ್ಟೆ ತುಂಬಿಸಿದ ಮುನಿರಾಬಾದ್ ಪೊಲೀಸ್ ಠಾಣೆ, ನಿತ್ಯ ದಾಸೋಹ
ಇವರಿಬ್ಬರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಅಜ್ಜ, ಅಜ್ಜಿ ಸಾವಿನಲ್ಲೂ ಒಂದಾಗಿ ಸಾವನ್ನಪ್ಪಿದ್ದಾರೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು.