ಕ್ಷಮಿಸಿದ್ರೂ ತಿದ್ದಿಕೊಳ್ಳಲಿಲ್ಲ: ಇನಿಯನ ಜೊತೆಗಿನ ಪಲ್ಲಂಗದಾಟಕ್ಕಾಗಿ ಪತಿಗೆ ಚಟ್ಟ ಕಟ್ಟಿದ ಹೆಂಡ್ತಿ

Published : Mar 11, 2026, 02:20 PM IST
Mandya Murder

ಸಾರಾಂಶ

ಶ್ರೀರಂಗಪಟ್ಟಣದ ಸಿಡಿಎಸ್ ನಾಲೆಯಲ್ಲಿ ಪತ್ತೆಯಾಗಿದ್ದ ಅರ್ಚಕ ಸಿದ್ದಲಿಂಗಪ್ಪನ ಶವದ ಪ್ರಕರಣವು ಕೊಲೆ ಎಂದು ಸಾಬೀತಾಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು, ಪತ್ನಿ ಶಾಲಿನಿ ತನ್ನ ಪ್ರಿಯಕರ ಹರೀಶ್ ಜೊತೆ ಸೇರಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. 

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದ ಬಳಿಯ ಸಿಡಿಎಸ್ ನಾಲೆಯಲ್ಲಿ ಅರ್ಚಕನ ಶವ ಮತ್ತು ಬೈಕ್ ಪತ್ತೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು ಅರ್ಚಕನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನ ಬಂಧಿಸಿದ್ದಾರೆ. ಮರಳಗಾಲ ಗ್ರಾಮದ ನಿವಾಸಿಯಾಗಿರುವ ಅರ್ಚಕ ಸಿದ್ದಲಿಂಗಪ್ಪ (46), ಮೇ 6ರಂದು ಕೆ.ಶೆಟ್ಟಹಳ್ಳಿ ಬಳಿಯ ದೇವಾಲಯದಲ್ಲಿ ಪೂಜೆಗೆ ತೆರಳಿದ್ದರು. ರಾತ್ರಿ ಮನೆಗೆ ಬರದಿದ್ದಾಗ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಮರಳಗಾಲದ ಬಳಿಯ ಸಿಡಿಎಸ್ ನಾಲೆ ದಡದ ಮೇಲೆ ಅರ್ಚಕ ಸಿದ್ದಲಿಂಗಪ್ಪ ಧರಿಸುತ್ತಿದ್ದ ಚಪ್ಪಲಿ ಸಿಕ್ಕಿತ್ತು ಮತ್ತು ರಕ್ತದ ಕಲೆಗಳು ಕಾಣಿಸಿದ್ದವು.

ತನಿಖೆಯಲ್ಲಿ ಆಕೆಯ ಪಲ್ಲಂಗದಾಟ

ಮರುದಿನ ಬೆಳಗ್ಗೆ ಪೊಲೀಸರು ಪರಿಶೀಲನೆ ನಡೆಸಿದಾಗ ನಾಲೆಯಲ್ಲಿ ಸಿದ್ದಲಿಂಗಪ್ಪ ಶವ ಮತ್ತು ಅವರ ಬೈಕ್ ಸಿಕ್ಕಿತ್ತು. ಆರಂಭದಲ್ಲಿ ಅಪಘಾತವಾಗಿ ನಾಲೆಗೆ ಬಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿತ್ತು. ಆದ್ರೆ ಪೊಲೀಸರಿಗೆ ಮಾತ್ರ ಇದೊಂದು ಪಕ್ಕಾ ಮರ್ಡರ್ ಎಂಬ ಅನುಮಾನ ಬಂದಿತ್ತು. ಅನುಮಾನದ ಮೇಲೆ ಅರ್ಚಕನ ಪತ್ನಿ ಶಾಲಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ಪಲ್ಲಂಗದಾಟ ಬೆಳಕಿಗೆ ಬಂದಿದೆ.

ಮರಳಗಾಲ ಗ್ರಾಮದ ನಿವಾಸಿಯಾಗಿರುವ ಹರೀಶ್ ಎಂಬಾತನೊಂದಿಗೆ ಶಾಲಿನಿಗೆ ಅಕ್ರಮ ಸಂಬಂಧವಿತ್ತು. ಮನೆಯಲ್ಲಿ ಗಂಡ, ಮುದ್ದಾದ ಇಬ್ಬರು ಮಕ್ಕಳಿದ್ರೂ ಚಂಚಲೆ ಶಾಲಿನಿ ಮನಸ್ಸು ಮಾತ್ರ ಹರೀಶ್‌ನ ಮೇಲಿತ್ತು. ಸುಮಾರು ಒಂದೂವರೆ ವರ್ಷದ ಹಿಂದೆ ಹರೀಶ್‌ನ ಜೊತೆಯಲ್ಲಿರುವಾಗಲೇ ಪತ್ನಿ ಶಾಲಿನಿಯನ್ನು ಗಂಡ ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದರು. ಮಕ್ಕಳಿಗಾಗಿ ಶಾಲಿನಿ ತಪ್ಪು ಕ್ಷಮಿಸಿ, ಆತನಿಂದ ದೂರವಿರುವಂತೆ ಹೇಳಿದ್ದರು.

ಗಂಡನ ಕೊಲೆಗೆ ಖತರ್ನಾಕ್ ಪ್ಲಾನ್

ತಪ್ಪು ತಿದ್ದಿಕೊಳ್ಳದ ಶಾಲಿನಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನು ಮುಗಿಸಲು ಖತರ್ನಾಕ್ ಪ್ಲಾನ್ ಮಾಡಿದ್ದಳು. ಮೇ 6ರ ಶುಕ್ರವಾರ ಗಂಡ ಪೂಜೆ ತೆರಳುತ್ತಿದ್ದಂತೆ ಪ್ರಿಯಕರ ಹರೀಶ್‌ನಿಗೆ ಶಾಲಿನಿ ವಿಷಯ ತಿಳಿಸಿದ್ದಳು. ಸಿದ್ದಲಿಂಗಪ್ಪನ ದಿನಚರಿ ತಿಳಿದುಕೊಂಡಿದ್ದ ರಾತ್ರಿ ಸುಮಾರು 9 ಗಂಟೆಗೆ ಸಿಡಿಎಸ್ ನಾಲೆ ಬಳಿ ಇಬ್ಬರು ಸ್ನೇಹಿತರೊಂದಿಗೆ ಅರ್ಚಕನನ್ನು ಅಡ್ಡಗಟ್ಟಿದ್ದಾನೆ. ಈ ವೇಳೆ ಸಿದ್ದಲಿಂಗಪ್ಪ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ನಂತರ ಶವವನ್ನು ಬೈಕ್ ಸಮೇತ ನಾಲೆಗೆ ಎಸೆದು ಪರಾರಿಯಾಗಿದ್ದರು. ಇದೀಗ ಶಾಲಿನಿ ಮತ್ತು ಹರೀಶ್ ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.

ಇದನ್ನೂ ಓದಿ: ನನ್ನ ಬ್ರೇಕಪ್‌ಗೆ ಇವರೇ ಕಾರಣ : ಅವಳಿ ಸೋದರಿಗೆ 40 ಬಾರಿ ಇರಿದು ಕೊಂದ ಟೆಕ್ಕಿಯಿಂದ ತಾಯಿ ಮೇಲೂ ಹಲ್ಲೆ

ಮಾರ್ಚ್ 7ರಂದು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಹಾಗೂ ಜಿಲ್ಲಾ ಎಸ್ಪಿ ಶೋಭಾರಾಣಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಆಗಮಿಸಿ ಸ್ಥಳ ಪರಿಶೀಲಿಸಿದ್ದರು. ಪ್ರಕರಣದ ತನಿಖೆ ಹಾಗೂ ಆರೋಪಿ ಪತ್ತೆಗಾಗಿ ತನಿಖಾಧಿಕಾರಿಗಳ ತಂಡ ರಚಿಸಿದ್ದರು. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಾಯ್, ಹೆಲೋ ಅಂತಾಳೆ, ಲಾಡ್ಜ್‌ಗೆ ಕರೀತಾಳೆ; ಸ್ನಾನ ಮಾಡಿ ಅಂತ ಬಟ್ಟೆ ಬಿಚ್ಚಿಸ್ತಾಳೆ!

PREV
Read more Articles on
click me!

Recommended Stories

ಕಪ್ಪತಗುಡ್ಡ ಗಣಿಗಾರಿಕೆಗೆ ತಡೆ ನೀಡಿ ಹೈಕೋರ್ಟ್ ಮಹತ್ವ ತೀರ್ಪು! ಏನಿದು ಪ್ರಕರಣ?
ಬೆಂಗಳೂರು: ದ್ವಿಚಕ್ರ ವಾಹನ ಕೊಡದ್ದಕ್ಕೆ ಪ್ರೇಯಸಿ ಕುಟುಂಬಕ್ಕೆ ಬೆಂಕಿ ಇಟ್ಟ ಪ್ರಕರಣ, ಚಿಕಿತ್ಸೆ ಫಲಿಸದೆ ತಾಯಿ ಸಾವು!