ವ್ಯಾಕ್ಸಿನ್ ತೆಗೆದುಕೊಂಡಿದ್ದೇವೆಂದು ನಿರ್ಲಕ್ಷ್ಯ ಮಾಡಬೇಡಿ : ಎಚ್ಚರ!

Suvarna News   | Asianet News
Published : Jun 03, 2021, 03:16 PM ISTUpdated : Jun 03, 2021, 03:30 PM IST
ವ್ಯಾಕ್ಸಿನ್ ತೆಗೆದುಕೊಂಡಿದ್ದೇವೆಂದು ನಿರ್ಲಕ್ಷ್ಯ ಮಾಡಬೇಡಿ : ಎಚ್ಚರ!

ಸಾರಾಂಶ

ಕೊರೋನಾಗೆ ವ್ಯಾಕ್ಸಿನ್ ತೆಗೆದುಕೊಂಡಿದ್ದೇವೆ ಎಂದು ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಆದಿಚುಂಚನಗಿರಿ  ಡಾ‌.ನಿರ್ಮಲಾನಂದನಾಥ ಸ್ವಾಮೀಜಿ ಎಚ್ಚರಿಕೆ  ಬಂದಿರುವ  ಕೊರೋನಾ ಎರಡನೇ ಅಲೆಗೆ ಎರಡು ತಲೆ ಇದೆ

ಮಂಡ್ಯ (ಜೂ.03): ಕೊರೋನಾಗೆ ವ್ಯಾಕ್ಸಿನ್ ತೆಗೆದುಕೊಂಡಿದ್ದೇವೆ ಎಂದು ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆದಿಚುಂಚನಗಿರಿ  ಡಾ‌.ನಿರ್ಮಲಾನಂದನಾಥ ಸ್ವಾಮೀಜಿ ಎಚ್ಚರಿಕೆ ನೀಡಿದರು. 

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿಂದು ಮಾತನಾಡಿದ ಡಾ‌.ನಿರ್ಮಲಾನಂದನಾಥ ಸ್ವಾಮೀಜಿ  ಜನರಿಗೆ ಎಚ್ಚರಿಕೆ ನೀಡಿದ ಚುಂಚಶ್ರೀ ಈಗ ಬಂದಿರುವ  ಕೊರೋನಾ ಎರಡನೇ ಅಲೆಗೆ ಎರಡು ತಲೆ ಇದೆ.  ಒಂದು ಶೀಘ್ರವಾಗಿ ಹರಡುವುದು,  ಎರಡನೇಯದ್ದು ವ್ಯಾಕ್ಸಿನ್‌ನನ್ನು ತಿಂದು ವ್ಯಾಕ್ಸಿನ್ ಪರಿಣಾಮವನ್ನು ವೈರಸ್ ಕಡಿಮೆ ಮಾಡುತ್ತದೆ.  ಸದ್ಯದ ಅಭಿಪ್ರಾಯ ವ್ಯಾಕ್ಸಿನ್ ಒಂದೇ ಪರಿಹಾರ ಎಂದರು.

ಕೋಡಿಮಠದ ಶ್ರೀಗಳಿಂದ ಸ್ಫೋಟಕ ಭವಿಷ್ಯ : ಕೊರೋನಾ ಕೊನೆಯಾಗುತ್ತಾ-ಮತ್ತೇನು ಕಾದಿದೆ ಜಗಕೆ..?

ವ್ಯಾಕ್ಸಿನ್ ತೆಗೆದುಕೊಂಡರೆ ಕೊರೋನಾದಿಂದ ಮುಕ್ತವಾಗಬಹುದು ಎನ್ನುವುದು ಎಲ್ಲರ ಅಭಿಪ್ರಾಯ. ವ್ಯಾಕ್ಸಿನ್ ತೆಗೆದುಕೊಂಡಿದ್ದೇನೆ ಎಂದು ಬೇಜವಾಬ್ದಾರಿಯಿಂದ ಓಡಾಡಿದರೆ ಅಪಾಯ ತಪ್ಪಿದ್ದಲ್ಲ. ಕೊರೊನಾ ವೈರಸ್ ಆರು ತಿಂಗಳು ವರ್ಷಕ್ಕೆ ರೂಪವನ್ನು ಬದಲು ಮಾಡಿಕೊಳ್ಳುತ್ತಿದೆ. ತನ್ನ ಒಳಗೆ ಇರುವ ಶಕ್ತಿಯನ್ನು ಸಹ ವೈರಸ್ ಹೆಚ್ಚಿಸಿಕೊಳ್ಳುತ್ತಿದೆ.  ಸದ್ಯ ಯಾವುದೇ ಔಷಧಿ ಪೂರ್ಣ ಗುಣವನ್ನು ತಂದುಕೊಡುವುದಿಲ್ಲ ಎಂದರು.

ಜನರು ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. SMS ಸೂತ್ರವನ್ನು ಕಡ್ಡಾಯವಾಗಿ ಪಾಲಿಸಬೇಕು.  ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವುದು, ನಮ್ಮನ್ನ ಶುದ್ಧವಾಗಿ ಇಟ್ಟುಕೊಳ್ಳುವುದು ಇದನ್ನು ಸದಾ ಕಾಲ ಅನುಸರಿಸಿದರೆ ಎಲ್ಲಾ ಕಾಯಿಲೆಗಳಿಗೂ ಪರಿಹಾರ.

ಸದ್ಯ ಬದುಕು ಜರ್ಜರಿತವಾಗಿದೆ.  ಎಷ್ಟೋ ಜನ ಕೆಲಸ ಇಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಮನೆಗಳಲ್ಲಿ ಬಡತನ ಕಾಡುತ್ತಿದೆ. ಹಲವಾರು ರೀತಿಯಲ್ಲಿ ಬದುಕನ್ನು ಕಿತ್ತುಕೊಂಡಿದೆ.  ಈ ವೈರಸ್ ಮುಂದುವರೆದು, ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸ್ವಾಮೀಜಿ ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ