ಕೊರೋನಾ ಕಾಟ: 10 ವರ್ಷದ ಮಗುವಿಗೆ ಉಸಿರಾಟದ ತೊಂದರೆ, ಜಿಲ್ಲಾಧಿಕಾರಿ ಬೇಸರ

Kannadaprabha News   | Asianet News
Published : Jun 03, 2021, 02:36 PM ISTUpdated : Jun 03, 2021, 02:41 PM IST
ಕೊರೋನಾ ಕಾಟ: 10 ವರ್ಷದ ಮಗುವಿಗೆ ಉಸಿರಾಟದ ತೊಂದರೆ, ಜಿಲ್ಲಾಧಿಕಾರಿ ಬೇಸರ

ಸಾರಾಂಶ

* ಕೋವಿಡ್‌ ಸೆಂಟರ್‌ ಮತ್ತು ಐಸಿಯು ವಾರ್ಡ್‌ ಪರಿಶೀಲಿಸಿದ ಜಿಲ್ಲಾಧಿಕಾರಿ  * ಮಗುವಿಗೆ ವೆಟಿಲೇಟರ್‌ ಅವಶ್ಯವಾಗಿದ್ದು ಬಳ್ಳಾರಿಗೆ ವರ್ಗಾಯಿಸಿ ಎಂದು ಸೂಚಿಸಿದ ಡಿಸಿ * ಸಾರ್ವಜನಿಕರ ದಿವ್ಯ ನಿರ್ಲಕ್ಷ್ಯವೇ ಇಂತಹ ಅನಾಹುತಕ್ಕೆ ಕಾರಣ   

ಹಗರಿಬೊಮ್ಮನಹಳ್ಳಿ(ಜೂ.03): ಉಸಿರಾಟದ ತೊಂದರೆಯಿಂದ ಬಳಲುತಿದ್ದ 10 ವರ್ಷದ ಗಂಡು ಮಗುವಿಗೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದು ನೋಡಿದ ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ ಬೇಸರ ವ್ಯಕ್ತಪಡಿಸಿದ್ದಾರೆ.  

ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ವೇಳೆ ಕೋವಿಡ್‌ ಸೆಂಟರ್‌ ಮತ್ತು ಐಸಿಯು ವಾರ್ಡ್‌ ಪರಿಶೀಲಿಸಿದ ಅವರು, ವಿಶೇಷ ಬೆಡ್‌ನಲ್ಲಿದ್ದ ಮರಿಯಮ್ಮನಹಳ್ಳಿ ಹತ್ತಿರದ ನಾಗಲಾಪುರ ತಾಂಡದ ಮಗುವಿನ ಬಗ್ಗೆ ವಿಚಾರಿಸಿದರು. ಆ ಮಗುವಿಗೆ ಉಸಿರಾಟದ ತೊಂಡರೆಯಿಂದ ಬಳಲುತಿದ್ದು, ಸ್ಯಾಚುರೇಷನ್‌ 35 ಇರುವ ಬಗ್ಗೆ ಕೇಳಿ ಬೇಸರಗೊಂಡರು.

ಲಾಕ್‌ಡೌನ್‌ ವಿಸ್ತರಣೆಗೆ ಹೆಚ್ಚಿದ ಕೂಗು

ಅಲ್ಲೇ ಇದ್ದ ಅವರ ಪಾಲಕರನ್ನು ಕರೆದು ಕಾರಣ ಕೇಳಿದರು. ಮಗುವಿಗೆ ಈಗಾಗಲೇ ಮೂರ್ನಾಲ್ಕು ದಿನಗಳಿಂದ ಜ್ವರದಿಂದ ಬಳಲುತಿರುವ ವಿಷಯ ತಿಳಿಸಿದರಲ್ಲದೆ, ಸ್ಥಳೀಯವಾಗಿ ವೈದ್ಯರಲ್ಲಿ ತೋರಿಸಲಾಗಿತ್ತು. ಗುಣಮುಖವಾಗದ ಕಾರಣ ಬುಧವಾರ ಈ ಆಸ್ಪತ್ರೆಗೆ ಬಂದಿರುವುದಾಗಿ ತಿಳಿಸಿದರು. ಆಗ ಜಿಲ್ಲಾಧಿಕಾರಿ ಆಡಳಿತಾಧಿಕಾರಿ ಶಂಕರ್‌ನಾಯಕ ಮತ್ತು ತಾಲೂಕು ವೈದ್ಯಾಧಿಕಾರಿ ಬಳಿ ಚರ್ಚಿಸಿ ಮಗುವಿಗೆ ವೆಂಟಿಲೇಟರ್‌ ಅವಶ್ಯವಾಗಿದ್ದು ಬಳ್ಳಾರಿಗೆ ವರ್ಗಾಯಿಸಿ ಎಂದು ಸೂಚಿಸಿದ್ದಾರೆ. 

ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ದಿವ್ಯ ನಿರ್ಲಕ್ಷ್ಯವೇ ಇಂತಹ ಅನಾಹುತಕ್ಕೆ ಕಾರಣವಾಗುತ್ತಾವೆಂದು ಬೇಸರ ವ್ಯಕ್ತಪಡಿಸಿದ ಘಟನೆ ಜರುಗಿತು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮಗುವನ್ನು ಬಳ್ಳಾರಿ ಆಸ್ಪತ್ರೆಗೆ ವರ್ಗಾಯಿಸಲಾಯಿತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!
'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ