ಮಗನ ಪರ ಬ್ಯಾಟ್‌ ಬೀಸಿ ಮತ್ತೆ ಅಕ್ರಮ ಗಣಿ ವಿರುದ್ಧ ಗುಡುಗಿದ ಸುಮಲತಾ

By Suvarna NewsFirst Published Jul 13, 2021, 8:12 PM IST
Highlights

* ದರ್ಶನ್ ಪರ ಬ್ಯಾಟ್ ಬೀಸಿದ ಸುಮಲತಾ
* ಅಕ್ರಮ ಗಣಿಗಾರಿಕೆ ಲಾಜಿಕಲ್ ಎಂಡ್ ಆಗಬೇಕು
* ಬೆದರಿಕೆಗೆಲ್ಲ ಹೆದರಿಕೊಳ್ಳುವ ಚಾನ್ಸೇ ಇಲ್ಲ
* ಸಮಗ್ರ ತನಿಖೆ ಮಾಡಿಸುತ್ತೇವೆ

ಬೆಂಗಳೂರು(ಜು.  13) ಮಗನ ಪರವಾಗಿ ಸಂಸದೆ ಸುಮಲತಾ ನಿಂತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಲ್ಲಿ 25 ಕೋಟಿ ಲೋನ್ ದೋಖಾ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಡಿದ್ದಾರೆ.

ಕಳೆದ ವಾರ ದರ್ಶನ್ ನಮ್ಮ ಮನೆಗೆ ಬಂದಿದ್ದರು. ಈ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದರು. ಯಾರೋ ಮೋಸ ಮಾಡ್ತಿದ್ದಾರೆ ಅಂತ ನನಗೆ ಹೇಳಿದ್ರು. ಮೋಸ ನಡೆದಿದ್ದರೆ ಖಂಡಿತ ನ್ಯಾಯ ಸಿಗಬೇಕು. ನ್ಯಾಯ ದರ್ಶನ್ ಪರ ಇದೆ. ನಾನು ದರ್ಶನ್ ಪರವೇ ಇರುತ್ತೇನೆ. ಉಮಾಪತಿ ಯಾರು ಅಂತ ನನಗೆ ಗೊತ್ತಿಲ್ಲ. ನಾನು ಯಾವತ್ತು ಅವ್ರನ್ನ ಮೀಟ್ ಮಾಡಿಲ್ಲ. ಆ ಬಗ್ಗೆ ನಾನು ಮಾತಾಡೋಕೆ ಇಷ್ಟ ಇಲ್ಲ. ಪ್ರಕರಣ ಸಂಪೂರ್ಣ ವಿವರ ದರ್ಶನ್ ಹೇಳಿರಲಿಲ್ಲ. ಆದ್ರೆ ಮೋಸ ಆಗಿದೆ ಅಂತ ನನ್ನ ಬಳಿ ಹೇಳಿದ್ದರು ಎಂದಿದ್ದಾರೆ.

ನಾಳೆ ಕೆ.ಆರ್.ಎಸ್, ಬೇಬಿ ಬೆಟ್ಟಕ್ಕೆ ಹೋಗ್ತೀನಿ. ನಾಳೆ ಕೆ.ಆರ್.ಎಸ್ ಡ್ಯಾಂ ಅಧಿಕಾರಿಗಳ ಜತೆ ಸಭೆ ಮಾಡಿ ಕೆ.ಆರ್.ಎಸ್ ಗೆ ಭೇಟಿ ಕೊಡ್ತೀನಿ. ಜಿಲ್ಲಾಡಳಿತ ಜೊತೆ ಬೇಬಿ ಬೆಟ್ಟಕ್ಕೂ ಭೇಟಿ ಕೊಟ್ಟು ಪರಿಶೀಲನೆ ಮಾಡ್ತೀನಿ. ನಿನ್ನೆ ಸಚಿವರು ಕೂಡಾ 3 ತಿಂಗಳಿಂದ ಗಣಿಗಾರಿಕೆ ನಡೆಯುತ್ತಿಲ್ಲ ಅಂತ ಹೇಳಿದ್ದಾರೆ. ಆದ್ರೂ ನಾನೇ ಮುಂದಿನ ವಾರ ಬರೋದಾಗಿ ತಿಳಿಸಿದ್ದಾರೆ. ನಾನು ಬಂದಾಗ ಗಣಿಗಾರಿಕೆ ನಡೆಯುತ್ತಿದ್ದರೆ ಕ್ರಮ ತೆಗೆದುಕೊಳ್ಳೋದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಮಂಡ್ಯ ಹಾಲು ಉತ್ಪಾದಕ ಸಂಘದ ಹಗರಣದ ಬಗ್ಗೆ ರೈತರು ಪ್ರತಿಭಟನೆ ಮಾಡ್ತಿದ್ದಾರೆ. ಆ ಪ್ರತಿಭಟನೆಗೆ ಬೆಂಬಲ ಸೂಚಿಸಲು ಹೋಗ್ತಿದ್ದೇನೆ. ಮೈಶುಗರ್ ಕಾರ್ಖಾನೆ ಪ್ರಾರಂಭ ವಿಚಾರಕ್ಕೆ ಸಂಬಂಧಿಸಿ ನಿನ್ನೆ ನಾನು ಸಚಿವ ಎಂಟಿಬಿ ನಾಗರಾಜ್ ಅವರ ಜೊತೆ ಮಾತಾಡಿದ್ದೇನೆ. ಇವತ್ತು ಅವ್ರು ಮತ್ತಷ್ಟು ಅಪ್ ಡೇಟ್ ಕೊಡ್ತೀನಿ ಅಂತ ಹೇಳಿದ್ದಾರೆ ಎಂದು ತಿಳಿಸಿದರು.

ಅಕ್ರಮ ಗಣಿಗಾರಿಕೆ ಲಾಜಿಕಲ್ ಎಂಡ್ ಆಗಲೇಬೇಕು. ರೈತರಿಗೆ ನ್ಯಾಯ ಒದಗಿಸಿಕೊಡಬೇಕಾದದ್ದು ಸರ್ಕಾರದ ಆದ್ಯತೆ ಆಗಿರಬೇಕು. ಅದೇ ಇದಕ್ಕೆ ಲಾಜಿಕಲ್ ಎಂಡ್. ಈ ಬಗ್ಗೆ ಹೋರಾಟ ನಿರಂತರ  ಎಂದು ತಿಳಿಸಿದರು.

ವಂಚನೆಯ ಇಂಚಿಂಚು ಮಾಹಿತಿ ತೆರೆದಿಟ್ಟ ದರ್ಶನ್

ರಾಕ್ ಲೈನ್ ವೆಂಕಟೇಶ್ ಜೊತೆ ಇರೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ  ಸಂಸದೆ ಸುಮಲತಾ ಆಕ್ರೋಶ ವ್ಯಕ್ತಪಡಿಸಿದರು. ಇದು ಕೀಳು ಮಟ್ಟದ ಪ್ರವೃತ್ತಿ. ಸಾರ್ವಜನಿಕ ಜೀವನದಲ್ಲಿ ನಾವು 40 ವರ್ಷಗಳಿಂದ ನಾವೆಲ್ಲ ಸಿನಿಮಾ ಕ್ಷೇತ್ರದಲ್ಲಿ ಇದ್ದೇವೆ. ಇಂತಹ ಒಂದು ಫೋಟೋ ಅಲ್ಲ, ಸಾವಿರಾರು ಲಕ್ಷಾಂತರ ಫೋಟೋಗಳು ಇವೆ. ನಾವು ಸಿನಿಮಾಗಳಲ್ಲಿ ಮಾಡಿರೋ ಡ್ಯಾನ್ಸ್, ವಿಡಿಯೋ ಎಲ್ಲವೂ ಇದೆ. ಅದೆಲ್ಲವನ್ನು ಅವ್ರು ಎಡಿಟ್ ಮಾಡಿ ಹಾಕಲಿ. ಅದನ್ನ ಹಾಕಿದ್ರೆ ಅವ್ರಿಗೆ ಎಂರ್ಟಟೈನ್ಮೆಂಟ್ ಸಿಗುತ್ತದೆ ಎಂದು ವ್ಯಂಗ್ಯವಾಗಿ ಕಿಡಿಕಾರಿದರು.

ಜೆಡಿಎಸ್ ಹಿಂದಿನ ರಾಜಕೀಯ ಜೀವನ ನೀವು ರಿವೈಂಡ್ ಮಾಡಿ ನೋಡಿ. ರಾಜಕೀಯ ಜೀವನದಲ್ಲಿ ಇದೇ ರೀತಿ ನಡೆದುಕೊಂಡು ಬಂದಿದ್ದಾರೆ. ನನ್ನ ಎಲೆಕ್ಷನ್ ಸಮಯದಲ್ಲಿ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ರು. ಅವರ ಮಾತುಗಳಿಗೆ ನಾವು ಹೆದರಿ, ಬಗ್ಗಿಲ್ಲ ಅಂದ್ರೆ ಈ ರೀತಿಯ ವರ್ತನೆ ನೀವು ಯಾವಾಗಲೂ ಕಾಣಬಹುದು. ನಾನು ಯಾವುದೇ ಕಾರಣಕ್ಕೂ ಹೆದರೋದಿಲ್ಲ. ಹೀಗೆ ಅವ್ರು ಮಾಡ್ತಿರೋದ್ರೀಂದ ನನಗೆ ಇನ್ನಷ್ಟು ಶಕ್ತಿ ಬರುತ್ತೆ. ನಾನು ಹೆದರೋ ಚಾನ್ಸೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮ ಗಣಿಗಾರಿಕೆ ವಿರುದ್ಧ ಸುಮಾ ಸಮರ

ಮಂಡ್ಯ ಅಕ್ರಮ ಗಣಿಗಾರಿಕೆ ಕಂಡು ಹಿಡಿಯಲು ಒಂದು ವ್ಯವಸ್ಥೆ ಇದೆ. ಹೇಗೆ ಮಾಡಬಹುದು ಅಂತ ಪ್ರೋಸೆಸ್ ಗಳು ಇವೆ. ಅದನ್ನ ಸರಿಯಾಗಿ ಮಾಡದೇ ಹೋದ್ರೆ ಹೈಯರ್ ಲೆವೆಲ್ ತನಿಖೆಗೆ ಆಗ್ರಹ ಮಾಡ್ತೀನ. ಇಲ್ಲಿ ಅನೇಕ ಒತ್ತಡಗಳು ಇರಬಹುದು. ಆದ್ರೆ ಸೆಂಟ್ರಲ್ ಏಜೆನ್ಸಿಗಳನ್ನ ಕರೆದುಕೊಂಡು ಬಂದು ತನಿಖೆ ಮಾಡಿದಾಗ ಅದು ಸರಿಯಾದ ರೀತಿಯಲ್ಲಿ ನಡೆಯಲು ಅವಕಾಶ ಇರುತ್ತೆ. ಆದ್ರೆ ನೋಡೋರಿಗೆ ಅಲ್ಲಿ ಹೇಗೆ ಅಕ್ರಮ ನಡೆಯುತ್ತಿದೆ ಅಂತ ಕಣ್ಣಿಗೆ ಕಾಣುತ್ತೆ. ಸ್ಥಳೀಯರನ್ನ ಮಾತಾಡಿಸಿ ಅನ್ನೋ ಮನವಿ ಮಾಡಿದ್ದೇನೆ. ಸಚಿವರು ಅದನ್ನ ಮಾಡ್ತೀನಿ ಅಂತ ಹೇಳಿದ್ದಾರೆ. ಮಂಡ್ಯದಲ್ಲಿ ನಡೆಯುತ್ತಿರೊ ಅಕ್ರಮ ಇಡೀ ರಾಜ್ಯದ ಜನ ನೋಡಬೇಕು ಅನ್ನೋದು ನನ್ನ ಆಗ್ರಹ ಎಂದರು.

ಅಕ್ರಮ ಗಣಿಗಾರಿಕೆ ಬಗ್ಗೆ ಮಾತಾಡಿದಾಗಿನಿಂದ ನಾನು, ನನ್ನ ಜೊತೆ ಇರೋರು ಟಾರ್ಗೆಟ್ ಆಗ್ತಿದ್ದಾರೆ. ನನ್ನ ಎಲೆಕ್ಷನ್ ಸಮಯದಲ್ಲೂ ಹೀಗೆ ನಡೆಯಿತು. ದರ್ಶನ್, ಯಶ್, ರಾಕ್ ಲೈನ್ ಬಗ್ಗೆ ಹೇಗೆ ಟಾರ್ಗೆಟ್ ಮಾಡ್ತಿದ್ದರು ನೀವೆ ನೋಡಿದ್ರಿ. ಇದು‌ ನಮಗೆ ಹೊಸದೇನು ಅಲ್ಲ. ಅವತ್ತೇ ನಾನು ಹೆದರಿಕೊಂಡಿಲ್ಲ. ಇವತ್ತು ನಾನು ಯಾಕೆ ಹೆದರಿಕೊಳ್ಳಲಿ ಎಂದು ವಿರೋಧಿಗಳಿಗೆ ಸುಮಲತಾ ಟಾಂಗ್ ನೀಡಿದರು.

 

 

click me!