ಮಂಡ್ಯ: ಕಾವೇರಿಯಲ್ಲಿ‌ ಈಜಲು ಹೋಗಿ ಕೊಚ್ಚಿ‌ ಹೋದ ಬೆಂಗಳೂರಿನ ಯುವಕ: ಹುಡುಕಲು‌ ನದಿಗೆ ಇಳಿದಿದ್ದ ಸ್ಥಳೀಯ ಸಾವು

Published : May 15, 2022, 09:48 PM ISTUpdated : May 15, 2022, 09:49 PM IST
ಮಂಡ್ಯ: ಕಾವೇರಿಯಲ್ಲಿ‌ ಈಜಲು ಹೋಗಿ ಕೊಚ್ಚಿ‌ ಹೋದ ಬೆಂಗಳೂರಿನ ಯುವಕ: ಹುಡುಕಲು‌ ನದಿಗೆ ಇಳಿದಿದ್ದ ಸ್ಥಳೀಯ ಸಾವು

ಸಾರಾಂಶ

*ಕಾವೇರಿ ನದಿಯಲ್ಲಿ‌ ಈಜಲು ಹೋಗಿ ಕೊಚ್ಚಿ‌ ಹೋದ ಯುವಕ. *ಯುವಕನನ್ನು ಹುಡಕಲು‌ ಹೋಗಿ ಸ್ಥಳೀಯ ನೋರ್ವ ಸಾವು. *ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಘಟನೆ

ಮಂಡ್ಯ (ಮೇ 15): ಕಾವೇರಿ ನದಿಯಲ್ಲಿ‌ ಈಜಲು ಹೋಗಿ ಕೊಚ್ಚಿ‌ ಹೋದ ಯುವಕನನ್ನು ಹುಡಕಲು‌ ಹೋಗಿದ್ದ ಸ್ಥಳೀಯನೋರ್ವ ಸಾವಿಗೀಡಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ನಡೆದಿದೆ. ಬೆಂಗಳೂರಿನ (Bengaluru) ಕೆಆರ್‌ಪುರಂ ನಿವಾಸಿ ಮಿಥುನ್ ಚಕ್ರವರ್ತಿ (19) ನೀರಿನಲ್ಲಿ ಕೊಚ್ಚಿ ಹೋದ ಯುವಕ. ಮಿಥುನ್ ಚಕ್ರವರ್ತಿ ಹುಡುಕಲು ಹೋಗಿ ಮುತ್ತತ್ತಿಯ ನಿವಾಸಿ ಮುತ್ತುರಾಜ್ (40) ಮೃತ. 

ಕುಟುಂಬ ಸಮೇತ ಮುತ್ತತ್ತಿಗೆ ಪ್ರವಾಸಕ್ಕೆ ಬಂದಿದ್ದ.ಮಿಥುನ್ ಕುಟುಂಬಸ್ಥರ ಜೊತೆ ಕಾವೇರಿ ನದಿಗೆ ಇಳಿದಿದ್ದ. ಈ ವೇಳೆ ಇದ್ದಕ್ಕಿದ್ದಂತೆ  ಮಿಥುನ್ ನದಿಯ ಸುಳಿಗೆ ಸಿಲುಕಿದ್ದು,ಕುಟುಂಬಸ್ಥರ ಮುಂದೆಯೇ ಕೊಚ್ಚಿ ಹೋಗಿದ್ದಾನೆ. ನಂತರ ಮಿಥುನ್ ದೇಹ ಹುಡುಕಲು ಮುತ್ತುರಾಜ್ ನದಿಗೆ ಇಳಿದಿದ್ದರು. ಈ ವೇಳೆ ಮುತ್ತುರಾಜ್ ಕೂಡ ನದಿಯ ಸುಳಿಗೆ ಸಿಲುಕಿ ಸಾವಿಗೀಡಾಗಿದ್ದಾರೆ. 

ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಿಂದ ಮುತ್ತುರಾಜ್ ಶವ ಮೇಲೆ ಹೊರ ತೆಗೆದಿದ್ದು, ಮಿಥುನ್ ಚಕ್ರವರ್ತಿ‌ಗಾಗಿ ಹುಡುಕಾಟ ಮುಂದುವರೆದಿದೆ. 
ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಇದನ್ನೂ ಓದಿ: ಸಂಭ್ರಮದ ರಥೋತ್ಸವದ ನಡುವೆ ಅವಘಡ, ರಥದ ಚಕ್ರಕ್ಕೆ ಸಿಲುಕಿ ಓರ್ವ ಸಾವು

ಈಜುವ ಬೆಟ್ಟಿಂಗ್ ಕಟ್ಟಿ ಇಹಲೋಕ ತ್ಯಜಿಸಿದ ಆಸಾಮಿ: ಕುಡಿದ ಮತ್ತಿನಲ್ಲಿ ಜಿದ್ದಿಗೆ ಬಿದ್ದ ಆಸಾಮಿಯೊಬ್ಬ ಹೆಣವಾಗಿದ್ದಾನೆ. ಹೆಸರು ಪ್ರಕಾಶ್ ಮೋರೆ ಅಂತ ವಯಸ್ಸು ಕೇವಲ 45. ನಿನ್ನೆ ಊರ ಹೊರಗೆ ಗೆಳೆಯರಾದ ಗಣಪತಿ ಧನವಡೆ, ಸಂತೋಷ ಕಂಬಾರ,ಬಾಹುಸಾಬ್ ಸಿಂಧೆ, ಬಸವರಾಜ ನಾಟಿಕಾರ ಅನ್ನೋ ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಿದ್ದಾನೆ. ಕೇವಲ ಪಾರ್ಟಿಯಲ್ಲ, ಎಲ್ಲರು ಸೇರಿ ಗುಂಡು ಪಾರ್ಟಿ ಮಾಡಿದ್ದಾರೆ. 

ಕುಡಿದ ಮತ್ತಿನಲ್ಲೆ ಸ್ನೇಹಿತರಲ್ಲಿ ಬೆಟ್ಟಿಂಗ್ ಶುರುವಾಗಿದೆ. ಯಾರು ಕೆರೆಯನ್ನ ಈಜಿ ಪಾರಾಗುತ್ತಾರೋ ಅವರು ಬೆಟ್ಟಿಂಗ್ ನಲ್ಲಿ ಗೆದ್ದಂತೆ ಅಂತಾ ಜಿದ್ದು ಕಟ್ಟಿದ್ದಾರೆ. ಜಿದ್ದಿಗೆ ಬಿದ್ದ ಈ ಕುಡುಕ ಆಸಾಮಿ ಕೆರೆಗೆ ಹಾರಿದ್ದಾನೆ. ಈಜುತ್ತಾ ನಡುಮಧ್ಯೆ ಹೋಗಿ ನಾಪತ್ತೆಯಾಗಿದ್ದಾನಂತೆ. ಹೀಗಂತೆ ಆತನ ಸ್ನೇಹಿತರು ಕುಟುಂಬಸ್ಥರಿಗೆ ತಿಳಸಿದ್ದಾರೆ.

ಇದನ್ನೂ ಓದಿ: ಬುದ್ಧಿ ಹೇಳಿದಕ್ಕೆ ಹೆತ್ತ ಅಪ್ಪನ ಹೆಣ ಉರುಳಿಸಿದ ಪಾಪಿ ಪುತ್ರ..!

ಪ್ರಕಾಶನ ಜಿದ್ದಿಗೆ ಹೆಂಡತಿ, ಮಕ್ಕಳು ಅನಾಥ: ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದ ನಿವಾಸಿಯಾದ ಪ್ರಕಾಶ್‌ಗೆ  ಓರ್ವ ಪತ್ನಿ, ಇಬ್ಬರು ಹೆಣ್ಣು, ಇಬ್ಬರು ಗಂಡು ಮಕ್ಕಳಿದ್ದಾರೆ. ಕುಡಿತ ಚಟಕ್ಕೆ ಬಿದ್ದಿದ್ದ ಪ್ರಕಾಶ ಗೆಳೆಯರ ಜೊತೆಗೆ ನಶೆಯಲ್ಲಿ ಪಾರ್ಟಿ ಅಂತ ಹೋಗಿ ಜೀವ ಕಳೆದುಕೊಂಡಿದ್ದಾನೆ. ಕೇವಲ ಪಾರ್ಟಿ ಮಾಡಿ ಸುಮ್ಮನೆ ಮನೆಗೆ ಬಂದಿದರೆ ಈಗ ಗತಿಯಾಗ್ತಿರಲಿಲ್ಲ. ಬದಲಿಗೆ ಪ್ರಕಾಶ ಜಿದ್ದು, ಬೆಟ್ಟಿಂಗ್ ಅಂತಾ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಹೆಂಡತಿ, ಮಕ್ಕಳನ್ನ ಅನಾಥ ಮಾಡಿದ್ದಾನೆ.

PREV
Read more Articles on
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ