Mandya : ಕರೀಘಟ್ಟದಲ್ಲಿ ರೈತ ಮುಖಂಡರಿಂದ ಶ್ರಮದಾನ

By Kannadaprabha News  |  First Published Oct 9, 2023, 9:00 AM IST

ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹುಟ್ಟುಹಬ್ಬದ ಅಂಗವಾಗಿ ತಾಲೂಕು ರೈತ ಸಂಘದ ಮುಖಂಡರು ಪ್ರವಾಸಿ ತಾಣ ಕರೀಘಟ್ಟದ ತಪಲಿನಲ್ಲಿ ಗಿಡ ನೆಟ್ಟು ಶ್ರಮಧಾನ ನಡೆಸಿ ಆಚರಣೆ ಮಾಡಿದರು.


ಶ್ರೀರಂಗಪಟ್ಟಣ: ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹುಟ್ಟುಹಬ್ಬದ ಅಂಗವಾಗಿ ತಾಲೂಕು ರೈತ ಸಂಘದ ಮುಖಂಡರು ಪ್ರವಾಸಿ ತಾಣ ಕರೀಘಟ್ಟದ ತಪಲಿನಲ್ಲಿ ಗಿಡ ನೆಟ್ಟು ಶ್ರಮಧಾನ ನಡೆಸಿ ಆಚರಣೆ ಮಾಡಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ ನೇತೃತ್ವದಲ್ಲಿ ಹಲವು ಭಾಗವಹಿಸಿದ್ದರು. ಮುಂಜಾನೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕರೀಘಟ್ಟ ಬೆಟ್ಟಕ್ಕೆ ಆಗಮಿಸಿ ಸಾಂಕೇತಿಕವಾಗಿ ಗಿಡ ನೆಟ್ಟು ನೀರೆರೆದರು.

Latest Videos

undefined

ನಂತರ ಕಳೆದ 2 ವರ್ಷಗಳ ಹಿಂದೆ ತಮ್ಮ ಹುಟ್ಟುಹಬ್ಬದ ನೆನಪಿಗಾಗಿ ನೆಟ್ಟಿದ್ದ ನೂರಾರು ಗಿಡಗಳಿಗೆ ರೈತ ಸಂಘದ ಕಾರ್ಯಕರ್ತರು ಕೆಂಪೂಗೌಡರ ನೇತತ್ವದಲ್ಲಿ ನೀರುಣಿಸಿದರು. ಟ್ಯಾಂಕರ್ ಮೂಲಕ ನೀರನ್ನು ಪ್ರತಿ ಗಿಡಗಳಿಗೆ ಪಾತಿ ಮಾಡಿ ಒಣ ಹುಲ್ಲುತೆಗೆದು ಗಿಡಗಳ ಬುಡಕ್ಕೆ ನೀರುಣಿಸಿದರು.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನಗೌಡ, ಅಚ್ಚುತ, ಮಂಜುನಾಥ, ಗುರುರಾಜ್ , ರಘು, ಸಾಂಗ್ಲಿಯಾನ, ದೀಪಕ, ಶಂಭುಗೌಡ, ಬಾಲರಾಜ, ವಿಜಯಕುಮಾರ್, ಪರಿಸರರಮೇಶ, ದೀಪಕ, ಯಶವಂತ, ಚೇತನ, ನಾಗೇಂದ್ರಣ್ಣ, ಇತರೆ ರೈತ ಸಂಘದ ನೂರಾರು ಕಾರ್ಯಕರ್ತರು ಇದ್ದರು.

ಕಾವೇರಿ ವಿವಾದ ಎಚ್ಚರಿಕೆ 

ಪಾಂಡವಪುರ (ಸೆ.14): ಕಾವೇರಿ ನೀರು ನಿರ್ವಹಣಾ ಸಮಿತಿ ತೀರ್ಪಿಗೆ ಮಣಿದು ಸರ್ಕಾರ ತಮಿಳುನಾಡಿಗೆ ನೀರು ಹರಿಸಿದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ ನೀಡಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂದಾಜು 30 ಲಕ್ಷ ರು. ವೆಚ್ಚದ ಐಸೋಲೇಷನ್ ವಾರ್ಡ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನಿತ್ಯ 5 ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತೀರ್ಪು ನೀಡಿರುವುದು ಆಘಾತಕಾರಿಯಾಗಿದೆ ಎಂದರು.

ಈ ರೀರಿಯ ತೀರ್ಪನ್ನು ರಾಜ್ಯ ಜನರು ನಿರೀಕ್ಷೆ ಮಾಡಿರಲಿಲ್ಲ. ಸುರ್ಪ್ರಿಂ ಕೋರ್ಟ್ ಹಾಗೂ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಅವರು ರಾಜ್ಯದ ವಸ್ತುಸ್ಥಿತಿ ಅವಲೋಕನ ಮಾಡಿ ನಂತರ ತೀರ್ಪು ನೀಡಬೇಕು. ಅದನ್ನು ಬಿಟ್ಟು ರಾಜ್ಯದಕ್ಕೆ ಕುಡಿಲು ನೀರಿಲ್ಲದ ಸಂದರ್ಭದಲ್ಲಿ ಪದೇ ಪದೇ ನೀರು ಹರಿಸುವಂತೆ ಆದೇಶ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿದೆ. ಸರ್ವಪಕ್ಷದ ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು. ಅದಾಗ್ಯು ನೀರು ಹರಿಸಿದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನೋಡೋದು ತಪ್ಪು: ಯದುವೀರ್‌ ಒಡೆಯರ್‌

ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡುವಂತೆ ಸುರ್ಪ್ರಿಂ ಕೋರ್ಟ್ ಆದೇಶವಿದೆ. ಸದ್ಯ ಅಣೆಕಟ್ಟೆಯಲ್ಲಿ ಕೇವಲ ೨೧ ಟಿಎಂಸಿ ನೀಡಿದೆ. ಇದಲ್ಲಿ 5-6 ಟಿಎಂಸಿ ನೀರು ಡೆಡ್‌ ಸ್ಟೋರೇಜ್. ಉಳಿದ ನೀರು ಮಂಡ್ಯ, ಮೈಸೂರು ಮತ್ತು ಬೆಂಗಳೂರಿಗೆ ಕುಡಿವ ನೀರಿಗೂ ಸಾಲುವುದಿಲ್ಲ. ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿ ನೀರಿದೆ. ಜತೆಗೆ ಅವರು ಬೆಳೆ ಬೆಳೆಯಲು ನೀರು ಕೇಳುತ್ತಿದ್ದಾರೆ. ಜತೆಗೆ ತಮಿಳುನಾಡಿನಲ್ಲಿ ಇದೀಗ ಮುಂಗಾರ ಆರಂಭಗೊಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿರುವುದು ಸರಿಯಲ್ಲ ಆಕ್ರೋಶ ಹೊರಹಾಕಿದರು.

ಕಾವೇರಿ ನೀರಿನ ವಿಚಾರವಾಗಿ ಹೋರಾಟದ ಸ್ವರೂಪವನ್ನು ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಹೋರಾಟ, ಪ್ರತಿಭಟನೆಗಳು ನಡೆಯುತ್ತಿದ್ದರೂ ತೀರ್ಪುಗಳು ವಿರುದ್ಧವಾಗೇ ಬರುತ್ತಿವೆ. ಪಕ್ಷದ ಹಿರಿಯರು, ಮುಖಂಡರೊಂದಿಗೆ ಕುಳಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಮಂಡ್ಯ ಬಂದ್‌ಗೂ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

click me!