ಬೆಳ್ಳಂ ಬೆಳ್ಳಿಗ್ಗೆ ಬೆಂಗಳೂರಿನಲ್ಲಿ ‌ಮಳೆರಾಯ ಆಗಮನ: ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

By Kannadaprabha News  |  First Published Oct 9, 2023, 8:56 AM IST

ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಸಂಜೆಯಿಂದ ಆರಂಭವಾದ ಜಿಟಿ ಜಿಟಿ ಮಳೆಯು ಸೋಮವಾರ (ಅಕ್ಟೋಬರ್‌ 9) ಬೆಳಿಗ್ಗೆಯು ಮುಂದುವರೆದಿದೆ. ಈ ಮೂಲಕ ಮತ್ತೆ ಬೆಂಗಳೂರಿಗೆ ಮಳೆಗಾಲ ಕಳೆ ಮರಳಿದೆ. ರಾಜ್ಯಾದ್ಯಂತ ಅಕ್ಟೋಬರ್‌ ಮೊದಲ ವಾರದಿಂದ ಹಿಂಗಾರು ಮಳೆ ಆಗಮನವಾಗಿದೆ.


ಬೆಂಗಳೂರು (ಅ.09): ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಸಂಜೆಯಿಂದ ಆರಂಭವಾದ ಜಿಟಿ ಜಿಟಿ ಮಳೆಯು ಸೋಮವಾರ (ಅಕ್ಟೋಬರ್‌ 9) ಬೆಳಿಗ್ಗೆಯು ಮುಂದುವರೆದಿದೆ. ಈ ಮೂಲಕ ಮತ್ತೆ ಬೆಂಗಳೂರಿಗೆ ಮಳೆಗಾಲ ಕಳೆ ಮರಳಿದೆ. ರಾಜ್ಯಾದ್ಯಂತ ಅಕ್ಟೋಬರ್‌ ಮೊದಲ ವಾರದಿಂದ ಹಿಂಗಾರು ಮಳೆ ಆಗಮನವಾಗಿದೆ. ಆರಂಭದಲ್ಲಿ ಮಂದವಾಗಿದ್ದ ಮಳೆ ಸದ್ಯ ನಿಧಾನವಾಗಿ ಚುರುಕುಗೊಂಡಿದೆ. ಇನ್ನು ಬೆಂಗಳೂರಿನಲ್ಲಿ ಒಂದು ವಾರದ ಬಳಿಕ ಸೋಮವಾರ ಮಳೆಯ ಸಿಂಚನವಾಗಿದ್ದು, ನಗರದಾದ್ಯಂತ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ರಾಜಧಾನಿ ಬೆಂಗಳೂರಿನ ಕೇಂದ್ರ ಭಾಗಗಳಾದ  ಮೇಖ್ರಿ ಸರ್ಕಲ್, ಗುಟ್ಟಹಳ್ಳಿ, ಹೆಬ್ಬಾಳ,ಶಿವಾನಂದ ಸರ್ಕಲ್, ಸೇರಿದಂತೆ ಹಲವೆಡೆ ಮಳೆಯಾಗಿದೆ. 

ಮಳೆ ಎಚ್ಚರಿಕೆ ನೀಡಿದ ಭಾರತೀಯ ಹವಾಮಾನ ಇಲಾಖೆ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಳಿ ಸಹಿತ ಜೋರು ಮಳೆಯಾಗುವ ಸಾಧ್ಯತೆಯಿದ್ದು, ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಜಿಲ್ಲೆಗಳಿಗೆ ಅರ್ಲಟ್ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ‌ ಮುನ್ಸೂಚನೆ ನೀಡಿದೆ.

Tap to resize

Latest Videos

ಜ್ವರಕ್ಕೆ ಕಾರಣ ಪತ್ತೆ ಹಚ್ಚುವ ಉಪಕರಣ ಕಂಡು ಹಿಡಿದ ಯುವ ವಿಜ್ಞಾನಿ ಕೋಮಲ್‌!

ರಾಜ್ಯದ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಇಂದೂ ಮಳೆ ಸಾಧ್ಯತೆ: ಮುಂದಿನ ಎರಡು- ಮೂರು ದಿನ ರಾಜ್ಯದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ವರುಣ ಅಬ್ಬರಿಸುವ ಸಾಧ್ಯತೆ ಇದ್ದು ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ನ ಮುನ್ಸೂಚನೆ ನೀಡಲಾಗಿದೆ. ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. 

ಅ.12 ವರೆಗೆ ಕೊಡಗು, ಹಾಸನ , ಚಿಕ್ಕಬಳ್ಳಾಪುರ ಹಾಗೂ ಮಂಡ್ಯ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ನ ಮುನ್ಸೂಚನೆ ನೀಡಲಾಗಿದೆ. ಉಳಿದಂತೆ ಕರಾವಳಿಯ ಮೂರು ಜಿಲ್ಲೆಗಳು ಹಾಗೂ ದಾವಣಗೆರೆ, ಚಿತ್ರದುರ್ಗ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆ ಹೊರತು ಪಡಿಸಿ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ವಿವಿಧೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅತ್ತಿಬೆಲೆ ಪಟಾಕಿ ದುರಂತ ಸಿಐಡಿ ತನಿಖೆಗೆ, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ: ಸಿದ್ದರಾಮಯ್ಯ

ಶೃಂಗೇರಿ ಸುತ್ತಮುತ್ತ ಉತ್ತಮ ಮಳೆ: ತಾಲೂಕಿನಾದ್ಯಂತ ಭಾನುವಾರ ಸಂಜೆ ಗುಡುಗು ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ಬೆಳಗ್ಗೆಯಿಂದ ಆಗಾಗ ಮೋಡಕವಿದ ವಾತಾವರಣವಿತ್ತು. ಮಧ್ಯಾಹ್ನದ ಮೇಳೆ ದಟ್ಟ ಮೋಡಕವಿದ ವಾತಾವರಣ ಉಂಟಾಗಿ ಗುಡುಗು ಸಿಡಿಲಿನ ಆರ್ಭಟ ಆರಂಭಗೊಂಡಿತು. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದೆಲ್ಲೆಡೆ ಗುಡುಗು ಸಿಡಿಲು ಸಹಿತ ಕೆಲಹೊತ್ತು ಭಾರಿ ಮಳೆ ಸುರಿಯಿತು. ಕೆಲದಿನಗಳಿಂದ ಉಂಟಾಗಿದ್ದ ಬಿಸಿಲ ವಾತಾವರಣಕ್ಕೆ ತಂಪೆರೆದಂತಾಯಿತು. ಸಂಜೆಯವರೆಗೂ ಕೆಲವೆಡೆ ಮಳೆ ಮುಂದುವರೆದಿತ್ತು.

click me!