ದಸರಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ವಂಚನೆ

By Kannadaprabha News  |  First Published Oct 9, 2023, 8:49 AM IST

ಮೈಸೂರು ದಸರಾ ಮತ್ತು ಶ್ರೀರಂಗಪಟ್ಟಣ ದಸರಾ 2023- 24ನೇ ಸಾಲಿನಲ್ಲಿ ನಡೆಯುತ್ತಿರುವ ದಸರಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಅವಕಾಶ ಸಿಗುತ್ತಿಲ್ಲ ಎಂದು ಮೈಸೂರು ಪ್ರಾಂತ್ಯದ ಸ್ಥಳೀಯ ಕಲಾವಿದರು ಮತ್ತು ತಂತ್ರಜ್ಞರು ಆರೋಪಿಸಿದ್ದಾರೆ.


 ಮೈಸೂರು :  ಮೈಸೂರು ದಸರಾ ಮತ್ತು ಶ್ರೀರಂಗಪಟ್ಟಣ ದಸರಾ 2023- 24ನೇ ಸಾಲಿನಲ್ಲಿ ನಡೆಯುತ್ತಿರುವ ದಸರಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಅವಕಾಶ ಸಿಗುತ್ತಿಲ್ಲ ಎಂದು ಮೈಸೂರು ಪ್ರಾಂತ್ಯದ ಸ್ಥಳೀಯ ಕಲಾವಿದರು ಮತ್ತು ತಂತ್ರಜ್ಞರು ಆರೋಪಿಸಿದ್ದಾರೆ.

ಈ ಬಾರಿ ದಸರಾದಲ್ಲಿ ಸ್ಥಳೀಯ ಕಲಾವಿದರು ಮತ್ತು ತಂತ್ರಜ್ಞರಿಗೆ ಅವಕಾಶ ವಂಚಿಸಿ, ಹಲವು ದೊಡ್ಡ ಕಾರ್ಯಕ್ರಮಗಲನ್ನು ಒಳ ಪಿತೂರಿ ಮಾಡಿಕೊಂಡು ನೇರವಾಗಿ ಡಿಎನ್‌ಎ ಎಂಬ ಇವೆಂಟ್‌ಮೇನೇಜ್‌ ಮೆಂಟ್‌ ಗೆ ಕೊಡಲು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ನಮಗೆ ಅವಕಾಶ ಕೊಡಿ ಎಂದು ಕೇಳಲು ಜಿಲ್ಲಾಡಳಿತದ ಅಧಿಕಾರಿಗನ್ನು ಕೇಳಿದರೆ ಡಿಎನ್‌ಎ ಅವರನ್ನು ಕೇಳಿ ಎಂದು ಆ ಸಂಸ್ಥೆಯ ಪ್ರತಿನಿಧಿಗಳಂತೆ ವರ್ತಿಸುವುದಾಗಿ ಅವರು ಆರೋಪಿಸಿದ್ದಾರ.

Tap to resize

Latest Videos

ಮೈಸೂರು ದಸರಾದ ಮುಖ್ಯ ಕಾರ್ಯಕ್ರಮಗಳಾದ ಪಂಜಿನ ಕವಾಯಿತು, ಯುವ ದಸರಾ ಮತ್ತು ಶ್ರೀರಂಗಪಟ್ಟಣ ದಸರಾಗಳಲ್ಲಿ ಟೆಂಡರ್‌ಪ್ರಕ್ರಿಯೆಯಲ್ಲಿ ಕಲಾವಿದರು ಪಾಲ್ಗೊಂಡು ಎಲ್‌ಬಂದಿದ್ದರೂ ಅದನ್ನು ಪರಿಗಣಿಸಿದೆ.

ಚಲನ ಚಿತ್ರೋತ್ಸವ

  ಮೈಸೂರು : ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಚಲನಚಿತ್ರೋತ್ಸವ ಉಪ ಸಮಿತಿ ವತಿಯಿಂದ ಅ.16 ರಿಂದ 22 ರವರೆಗೆ ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಹಾಗೂ ಡಿಆರ್ ಸಿ ಪರದೆಗಳಲ್ಲಿ ಚಲನಚಿತ್ರಗಳ ಪ್ರದರ್ಶನ ಹಮ್ಮಿಕೊಂಡಿದ್ದು, ಈ ಸಂಬಂಧ ಅ.9ರ ಬೆಳಗ್ಗೆ 10.30 ರಿಂದ ಸಂಜೆ 4.30 ರವರೆಗೆ ನಗರದ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಸಿನಿಮಾ ಪ್ರಿಯರಿಗೆ ಚಲನಚಿತ್ರೋತ್ಸವ ಪ್ರದರ್ಶನದ ಪಾಸ್ ವಿತರಿಸಲಾಗುವುದು.

ವ ಪಾಸ್ ದರ ಸಾಮಾನ್ಯರಿಗೆ 500 ರೂ. ಗಳಾಗಿದ್ದು, ವಿದ್ಯಾರ್ಥಿಗಳಿಗೆ 300 ರೂ. ಆಗಿರುತ್ತವೆ. ಈ ಪಾಸ್ ಏಳು ದಿನಗಳವರೆಗೂ ಚಾಲ್ತಿಯಲ್ಲಿರುತ್ತದೆ. ಪಾಸ್ ಪಡೆದುಕೊಳ್ಳಲು ಆಧಾರ್ ಕಾರ್ಡ್ ಪ್ರತಿಯನ್ನು ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಶ್ರೇಯಸ್ ಮೊ. 74115 64510 ಸಂಪರ್ಕಿಸಬಹುದು ಎಂದು ಚಲನಚಿತ್ರೋತ್ಸವ ಉಪ ಸಮಿತಿಯ ವಿಶೇಷಾಧಿಕಾರಿ ಎಂ.ಕೆ. ಸವಿತಾ ತಿಳಿಸಿದ್ದಾರೆ.

ಜಿಲ್ಲಾಡಳಿತವು 4ಜಿ ಮೂಲಕ ನೇರವಾಗಿ ಡಿಎನ್‌ಎ ಈವೆಂಟ್‌ಮ್ಯಾನೇಜ್‌ಮೆಂಟ್‌ವರೆಗೆ ಕೊಡುತ್ತಿರುವುದರಿಂದ ಮೈಸೂರು, ಶ್ರೀರಂಗಪಟ್ಟಣ ದಸರಾದಲ್ಲಿ ಪಾಲ್ಗೊಳ್ಳಬೇಕಿದ್ದ ಸುಮಾರು 400 ರಿಂದ 500 ಕಲಾವಿದರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ದೂರಿದ್ದಾರೆ.

click me!