Life imprisonment : ಅತ್ಯಾಚಾರ ನಡೆಸಿ ವೃದ್ಧೆ ಕೊಲೆ ಮಾಡಿದ್ದವನಿಗೆ ಜೀವಾವಧಿ ಸಜೆ

Kannadaprabha News   | Asianet News
Published : Dec 25, 2021, 10:02 AM ISTUpdated : Dec 25, 2021, 10:41 AM IST
Life imprisonment : ಅತ್ಯಾಚಾರ ನಡೆಸಿ ವೃದ್ಧೆ ಕೊಲೆ ಮಾಡಿದ್ದವನಿಗೆ ಜೀವಾವಧಿ ಸಜೆ

ಸಾರಾಂಶ

 ಅತ್ಯಾಚಾರ ನಡೆಸಿ ವೃದ್ಧೆ ಕೊಲೆ ಮಾಡಿದ್ದವನಿಗೆ ಜೀವಾವಧಿ ಸಜೆ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಜೀವಾವಧಿ ಸಜೆ

 ಮೈಸೂರು (ಡಿ.25):  ವೃದ್ಧೆಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದವನಿಗೆ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು (Court) ಜೀವಾವಧಿ ಸಜೆ ವಿಧಿಸಿದೆ.  ತಮಿಳುನಾಡು (Tamilnadu) ಈರೋಡ್‌ ಜಿಲ್ಲೆಯ ಸತ್ಯಮಂಗಲದ ಎಂ. ಕೋಮರಪಾಳ್ಯದ ಕೂಲಿ ಕೆಲಸಗಾರ ಲಕ್ಷೀನಾರಾಯಣ ಮೂರ್ತಿ (38) ಶಿಕ್ಷೆಗೊಳಗಾದವನು.

ಈತ 2018ರ ಸೆ.2 ರಂದು ಮೈಸೂರು ನಗರದ ಮಂಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಆರ್‌ಎಂಸಿ ಹಿಂಭಾಗದ ಮನೆಗೆ ನುಗ್ಗಿ, ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. ಪ್ರತಿನಿತ್ಯ ಸಂಜೆ ಆ ವೃದ್ಧೆಯ ಮನೆಗೆ ಹೋಗುತ್ತಿದ್ದ ಪ್ರದೀಪ್‌ಕುಮಾರ್‌ ಎಂದಿನಂತೆ ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಮಂಡಿ ಠಾಣೆ ಇನ್‌ಸ್ಪೆಕ್ಟರ್‌ ಅನ್ಸರ್‌ ಅಲಿ ಅವರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿಸಲ್ಲಿಸಿದ್ದರು. 

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಯಶವಂತ ಕುಮಾರ್‌ ಅವರು, ಆರೋಪ ಸಾಬೀತು ಗಿದೆ ಎಂದು ತೀರ್ಪು ನೀಡಿ, ಕಠಿಣ ಜೀವಾವಧಿ ಸಜೆ ಹಾಗೂ 20 ಸಾವಿರ ರು. ದಂಡ ವಿಧಿಸಿದ್ದಾರೆ. ಪ್ರಾಸಿಕ್ಯೂಷನ್‌ ಪರ ಸರ್ಕಾರಿ ಅಭಿಯೋಜಕರಾದ ಕೆ. ನಾಗರಾಜ ವಾದಿಸಿದ್ದರು.

ಅತ್ತಿಗೆಯನ್ನು  ರೇಪ್‌ ಮಾಡಿ ಕೊಲೆ  :  ಬಿಹಾರದ (Bihar)ಮುಜಾಫರ್‌ಪುರ ಜಿಲ್ಲೆಯಲ್ಲಿ 32 ವರ್ಷದ ವ್ಯಕ್ತಿಯೊಬ್ಬ ತನ್ನ(sister-in-law) ಅತ್ತಿಗೆಯನ್ನು (Murder) ಕೊಲೆಗೈದಿದ್ದಾನೆ.  ಆಕೆ ಸಾಯುವುದಕ್ಕೂ ಮುನ್ನ ಮತ್ತು ಸತ್ತ ನಂತರ ಆಕೆ ಮೇಲೆ ಅತ್ಯಾಚಾರ (Rape) ಎಸಗಿದ್ದಾನೆ.

ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ ಎಂದು ಮುಜಾಫರ್‌ಪುರ (ಪೂರ್ವ) ಉಪ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಪಾಂಡೆ ತಿಳಿಸಿದ್ದಾರೆ. ಆರೋಪಿ ಅತ್ಯಾಚಾರ ಎಸಗಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. 

ಅತ್ಯಾಚಾರ ಎಸಗಿದ ನಂತರ ಸಂತ್ರಸ್ತೆಯನ್ನು (Victim) ಗ್ರೈಂಡರ್ ಗೆ ಬಳಸುತ್ತಿದ್ದ ಕಲ್ಲಿನಿಂದ  ಜಜ್ಜಿ ಕೊಂದಿದ್ದಾನೆ. ಆಕೆ ಸತ್ತ ಮೇಲೆಯೂ ತನ್ನ ಕಾಮ ತೃಷೆ ತೀರಿಸಿಕೊಂಡಿದ್ದಾನೆ.

ಕ್ರೂರಿಯ ದಾಳಿ ಕಾರಣಕ್ಕೆ ಸಂತ್ರಸ್ತೆಯ ಮುಖ ಮತ್ತು ತಲೆ ಜಜ್ಜಿಹೋಗಿದ್ದು ಆಕೆಯ ದಂತಪಂಕ್ತಿ ಛಿದ್ರಛಿದ್ರವಾಗಿದೆ. ಮನೆಯಲ್ಲಿನ ಜಾನುವಾರುಗಳನ್ನು ನೋಡಿಕೊಂಡು ಸಂತ್ರಸ್ತೆ ಒಂಟಿಯಾಗಿ ಜೀವನ ನಡೆಸುತ್ತಿದ್ದಳು. 

ಆಕೆಯ ಸಹೋದರಿ ತನ್ನ ಮಗುವಿನ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಮಹಿಳೆಯ ಕುಟುಂಬವು ದರ್ಭಾಂಗಾಕ್ಕೆ ತೆರಳಿತ್ತು.  ಕೃತ್ಯ ಎಸಗಿರುವುದನ್ನು ಪಾಪಿ ಒಪ್ಪಿಕೊಂಡಿದ್ದಾನೆ. .ತನಗೆ ಅವಮಾನ ಮಾಡಿದ್ದಕ್ಕಾಗಿ  ಸೇಡಿ ತೀರಿಸಿಕೊಳ್ಳಲು ಇಂಥ ಕೃತ್ಯ ಮಾಡಿದೆ ಎಂದು ಹೇಳಿದ್ದಾನೆ. ಪ್ರಕರಣವೊಂದರಲ್ಲಿ ಸಂತ್ರಸ್ತೆ ಕುಟುಂಬಸ್ಥರ ಎದುರಿನಲ್ಲಿ ಈತನ ಕೆನ್ನೆಗೆ ಬಾರಿಸಿದ್ದರು.  ಆರೋಫಿ ಮತ್ತು ಆತನ ಹೆಂಡತಿಯ ನಡುವೆ ವಿವಾದ ಎದ್ದು ಪಂಚಾಯಿತಿ ಮೆಟ್ಟಿಲು ಏರಿತ್ತು.

ಆರೋಪಿಯನ್ನು ವಶಕ್ಕೆ ಪಡೆದಿದ್ದು ಆತನ ಮೊಬೈಲ್ ಮತ್ತು ದೋಚಿದ್ದ ಕೆಲ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಜಯಂತ್ ಕುಮಾರ್ ತಿಳಿಸಿದ್ದಾರೆ.

ಕೆಲಸ ಕೊಡಿಸುತ್ತೇನೆ ಎಂದು ಹೋಟೆಲ್ ಗೆ ಕರೆದ:   ಗುಜರಾತ್‌ನ (Gujarat) ಸೂರತ್‌ನಲ್ಲಿ 35 ವರ್ಷದ ವಿವಾಹಿತ ಮಹಿಳೆಯ ಮೇಲೆ 23 ವರ್ಷದ ಯುವಕನೊಬ್ಬ ಆಕೆಗೆ ಕೆಲಸ ಕೊಡಿಸುವ ನೆಪದಲ್ಲಿ ಹಲವು ಬಾರಿ (Rape) ಅತ್ಯಾಚಾರವೆಸಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.  ಮಹಿಳೆ ನೀಡಿದ ದೂರಿನ ಮೇರೆಗೆ ಸಾರ್ಥನಾ ಪೊಲೀಸರು ಆರೋಪಿ ನಿಲೇಶ್ ಲಾಥಿಯಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಮಹಿಳೆ ತಮ್ಮ ಪತಿ ಮತ್ತು ಮಗುವಿನೊಂದಿಗೆ ವಾಸಿಸುತ್ತಿದ್ದರು.  ಒಂದು ವರ್ಷದ ಹಿಂದೆ ಮೋಟಾ ವರಚ ನಿವಾಸಿ ಲಾಥಿಯಾನ ಪರಿಚಯವಾಗಿತ್ತು. ಆಕೆಗೆ ಕೆಲಸ ಕೊಡಿಸುವುದಾಗಿ ಭರವಸೆ ಆರೋಪಿ ಭರವಸೆ ನೀಡಿದ್ದ.  ಸಮಯಾವಕಾಶ ಬಳಸಿಕೊಂಡು ಆಕೆಯನ್ನು ಹೋಟೆಲ್ ಗೆ  ಕರೆಸಿ ಅತ್ಯಾಚಾರವೆಸಗಿದ್ದ. ಈ ವೇಳೆ ಮಹಿಳೆಯ ಬೆತ್ತಲೆ ಪೋಟೋಗಳನ್ನು ತೆಗೆದುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

PREV
Read more Articles on
click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ: ಎಚ್.ಡಿ.ಕುಮಾರಸ್ವಾಮಿ