Hassan Road : ಗ್ರಾಮಸ್ಥರ ಮೇಲಿನ ಸಿಟ್ಟಿಗೆ ಜೆಸಿಬಿ ತರಿಸಿ ರಸ್ತೆಯನ್ನೇ ಅಗೆದ ಭೂಪ!

By Kannadaprabha News  |  First Published Dec 25, 2021, 7:44 AM IST
  •  ಗ್ರಾಮಸ್ಥರ ಮೇಲಿನ ಸಿಟ್ಟಿಗೆ ಜೆಸಿಬಿ ತರಿಸಿ ರಸ್ತೆಯನ್ನೇ ಅಗೆದ ಭೂಪ!
  •  55 ವರ್ಷದ ಹಳೆಯ ರಸ್ತೆಯನ್ನು ಜೆಸಿಬಿ ಮೂಲಕ ಅಗೆದು ಜನ ಸಂಚಾರಕ್ಕೆ ಅಡ್ಡಿಪಡಿಸಿದ

 ಬೇಲೂರು(ಡಿ.25): ಗ್ರಾಮಸ್ಥರ (Village) ಮೇಲಿನ ಸಿಟ್ಟಿನಿಂದ ವ್ಯಕ್ತಿಯೊಬ್ಬ 55 ವರ್ಷದ ಹಳೆಯ ರಸ್ತೆಯನ್ನು (Road) ಜೆಸಿಬಿ ಮೂಲಕ ಅಗೆದು ಜನ ಸಂಚಾರಕ್ಕೆ ಅಡ್ಡಿಪಡಿಸಿದ ಘಟನೆ ತಾಲೂಕಿನಲ್ಲಿ ನಡೆದಿದೆ.

ಮೂದಿಗೆರೆ ಗ್ರಾಮಕ್ಕೆ ಬಂಟೇನಹಳ್ಳಿ ಹಾಗೂ ಹಾಸನ (Hassan) ರಸ್ತೆಯ ಮೂಲಕ ಎರಡು ಪ್ರವೇಶದ ರಸ್ತೆಗಳಿವೆ. ಆದರೆ ಮೂದಿಗೆರೆ ಗ್ರಾಮದ ಜನರು ಬೇಲೂರಿಗೆ ಬಂಟೇನಹಳ್ಳಿ ಮಾರ್ಗವಾಗಿ ಸಂಚಾರ ಮಾಡುತ್ತಿದ್ದಾರೆ. ಇನ್ನು ಹಾಸನದ ಕಡೆಯಿಂದ ಹೊಲ-ಗದ್ದೆಗಳಿಗೆ ಹೆಚ್ಚು ಓಡಾಟಕ್ಕೆ ಬಳಕೆ ಮಾಡುತ್ತಿದ್ದಾರೆ. ಈ ರಸ್ತೆಗೆ ಜಲ್ಲಿ ಹಾಕಿಸುವ ಮೂಲಕ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. 

Latest Videos

undefined

ಆದರೆ ಕಳೆದ ಎರಡು ದಿನದ ಹಿಂದೆ ರವಿ ಎಂಬ ವ್ಯಕ್ತಿ ಮಣ್ಣು ತುಂಬಿಸಲು ತನಗೆ ಗ್ರಾಮಸ್ಥರು (Village) ಅಡ್ಡಿಪಡಿಸಿದರು ಎಂಬ ಕಾರಣಕ್ಕೆ, ರಸ್ತೆಯನ್ನೇ ಜೆಸಿಬಿಯಿಂದ ಅಗೆಯುವ ಮೂಲಕ ಜನಸಂಚಾರಕ್ಕೆ ತೊಂದರೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್‌, ಈ ರೀತಿ ಜನರಿಗೆ ತೊಂದರೆ ಕೊಡುವುದು ತಪ್ಪು. ಕೂಡಲೇ ರಸ್ತೆ ರಿಪೇರಿ ಮಾಡಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಚಾರ್ಮಾಡಿ ಘಾಟ್ ರಸ್ತೆ ಚತುಷ್ಪತ ಮಾಡಲು ನಿರ್ಧಾರ  :  

 ಚಾರ್ಮಾಡಿ ಘಾಟ್‌ (charmadi Ghat) ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸಲು ಚಿಂತನೆ ನಡೆಸಲಾಗಿದೆ. ಅರಣ್ಯ ಇಲಾಖೆಯೊಂದಿಗೆ (Forest Department) ಚರ್ಚೆ ನಡೆಸಿ ರಾಷ್ಟ್ರೀಯ ಹೆದ್ದಾರಿಯಾಗಿ (National Highway) ಪರಿವರ್ತಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದರು. ಕೊಟ್ಟಿಗೆ ಹಾರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾರ್ಮಾಡಿ ಘಾಟಿ (Charmadi Ghat) ಪ್ರತಿವರ್ಷ ಮಳೆಗಾಲದಲ್ಲಿ (Monsoon) ಮಳೆಗೆ ಮಣ್ಣು ಕುಸಿಯುವುದು ಹಾಗೂ ಗುಡ್ಡ ಕುಸಿಯುವುದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಚಾರ್ಮಾಡಿ ಚತುಷ್ಪತಾ ರಸ್ತೆಯನ್ನಾಗಿ ಮಾಡಲು ಅಪೇಕ್ಷೆ ಇದೆ. ಇದಕ್ಕೆ ಅರಣ್ಯ ಇಲಾಖೆ ಆಕ್ಷೇಪಣೆಯೂ ಸದ್ಯದಲ್ಲೇ ಬರಬಹುದು ಎಂದರು.

ಅರಣ್ಯ ಇಲಾಖೆಯ (Forest Department) ಜೊತೆ ಮಾತುಕತೆ ನಡೆಸಿ ಸಮಸ್ಯೆ ನಿವಾರಿಸಿ ಚಾರ್ಮಾಡಿ ರಸ್ತೆ ರಾಷ್ಟ್ರೀಯ ಹೆದ್ದಾರಿಯನ್ನಾಗಿ (National Highway) ಮಾರ್ಪಡಿಸಿ ಚತುಷ್ಪತಾ ರಸ್ತೆ ಮಾಡಲು ಪ್ರಯತ್ನ ನಡೆದಿದೆ. ಮೂಲಭೂತ ಸೌಲಭ್ಯಕ್ಕೆ ಯಾವುದೇ ಅರಣ್ಯದ (Forest) ಕಾಯ್ದೆ ಅಡಚಣೆಯಾಗದಂತೆ ಸಡಿಲಗೊಳಿಸಲು ಕೇಂದ್ರ ಪರಿಸರ ಮಂತ್ರಿಗಳ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಈಗಾಗಲೇ ಕೊಟ್ಟಿಗೆಹಾರದಿಂದ ಮೂಡಿಗೆರೆ ಬೇಲೂರು (Beluru) ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು ಶೀಘ್ರದಲ್ಲಿ ಸಂಚಾರಕ್ಕೆ ಮುಕ್ತ ಗೊಳಿಸಲಾಗುತ್ತದೆ ಎಂದರು ಶೋಭಾ ಕರಂದ್ಲಾಜೆ.

ಮತಾಂತರ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ. ಅದರಲ್ಲಿರುವ ಎಲ್ಲಾ ಕಾನೂನುಗಳನ್ನು (Law) ಬಲವಾಗಿ ಜಾರಿಗೊಳಿಸಲು ನಮ್ಮ ಅಪೇಕ್ಷೆ ಇದೆ. ಕಾಂಗ್ರೆಸ್‌ (Congress) ಇದನ್ನು ವಿರೋಧಿಸುತ್ತಿದೆ. ಬೇರೆ ಧರ್ಮದವರನ್ನು ಮತಕ್ಕಾಗಿ ಓಲೈಕೆ ಮಾಡಿಕೊಂಡು ತಮ್ಮ ಬೇಳೆಯನ್ನು ಬೇಯಿಸಿಕೊಂಡು ಕುರ್ಚಿ ಗಟ್ಟಿ ಮಾಡುವ ಕೆಲಸ ಕಾಂಗ್ರೆಸ್‌ (Congress) ಮಾಡುತ್ತಿದೆ ಎಂದರು.

ಮತಾಂತರ ಎನ್ನುವುದು ಸಮಾಜಕ್ಕೆ ಮಾರಕವಾಗಿದೆ. ಅನಾರೋಗ್ಯ (Health Issues), ಬಡತನ, ಪ್ರೀತಿಯನ್ನು ದುರುಪಯೋಗ ಮಾಡಿಕೊಳ್ಳುವ ವ್ಯವಸ್ಥಿತ ಷಡ್ಯಂತ್ರ ದೇಶದಲ್ಲಿ ನಡೆಯುತ್ತಿದೆ. ಇದು ರಾಜ್ಯದಲ್ಲಿಯೂ ನಡೆಯುತ್ತಿದೆ. ಲವ್‌ ಜಿಹಾದ್‌ ಹೆಸರಿನಲ್ಲಿ ಸಾವಿರಾರು ಹೆಣ್ಣು ಮಕ್ಕಳು ಮತಾಂತರ ಆಗುತ್ತಿದ್ದಾರೆ. ಅವರಿಗೆ ನೆಲೆ ಇಲ್ಲದ ಪರಿಸ್ಥಿತಿಯನ್ನು ನಾವು ಹಲವಾರು ಪ್ರದೇಶದಲ್ಲಿ ನೋಡುತ್ತಿದ್ದೇವೆ. ಇಂತಹ ಕೆಟ್ಟವ್ಯವಸ್ಥೆಗಳು ಸಮಾಜದಲ್ಲಿ ಇರಬಾರದು. ಅದಕ್ಕಾಗಿ ಇದಕ್ಕೆ ನಿಷೇಧ ಮಾಡಬೇಕು ಎಂಬ ನಮ್ಮ ಪ್ರಯತ್ನ ನಡೆಯುತ್ತಿದೆ. ಯಾವುದೇ ಧರ್ಮದವರು ಅದೇ ಧರ್ಮದಲ್ಲಿ ಮುಂದುವರೆದರೆ ಯಾರ ಅಭ್ಯಂತರವೂ ಇಲ್ಲ ಎಂದರು.

 

click me!