ಸೋಂಕಿತ ಅತ್ತೆಯನ್ನು ಮನೆಗೆ ಸೇರಿಸಿಕೊಳ್ಳದ ಅಳಿಯ!

By Kannadaprabha News  |  First Published May 25, 2021, 12:23 PM IST
  • ಕೋವಿಡ್ ಸೋಂಕಿತ ಅತ್ತೆಯನ್ನು ಮನೆಗೆ ಸೇರಿಸಿಕೊಳ್ಳದ ಅಳಿಯ
  • ಅತ್ತೆಯನ್ನು ಮನೆಗೆ ಬಾರದಂತೆ ತಡೆದ  ವ್ಯಕ್ತಿ
  • ಆಸ್ಪತ್ರೆಗೆ ಸೋಂಕಿತ ವೃದ್ದೆಯನ್ನು ವಾಪಸ್ ಕಳುಹಿಸಿದ 

ಮಂಡ್ಯ (ಮೇ.25): ಕೊರೋನಾ ಸೋಂಕಿತ ಅತ್ತೆಯನ್ನು ಮನೆಗೆ ಸೇರಿಸಿಕೊಳ್ಳದೆ ಅಳಿಯನೊಬ್ಬ ಅಮಾನವೀಯತೆಯಿಂದ ವರ್ತಿಸಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅರೆಚಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ. 

ಸಿದ್ದಮ್ಮ ಅವರಿಗೆ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಆಕೆಯನ್ನು ಮದ್ದೂರು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು.

Latest Videos

undefined

ಮುತ್ತತ್ತಿಯನ್ನು ಮುಟ್ಟದ ಕೊರೋನಾ ಸೋಂಕು! ...

 ಈ ಸಮಯದಲ್ಲಿ ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಾ ಇತರೆ ರೋಗಿಗಳಿಗೆ ತೊಂದರೆ ನೀಡುತ್ತಿದ್ದರಿಂದ ಮನೆಯಲ್ಲೇ ಆರೈಕೆ ಮಾಡುವ ಸಲುವಾಗಿ ಔಷಧಗಳೊಂದಿಗೆ ಆಕೆಯನ್ನು ಆ್ಯಂಬುಲೆನ್ಸ್‌ನಲ್ಲಿ ಅಧಿಕಾರಿಗಳ ಜೊತೆ ಕಳುಹಿಸಿ ಕೊಡಲಾಗಿತ್ತು. 

ಮನೆಯ ಹತ್ತಿರ ಆ್ಯಂಬುಲೆನ್ಸ್‌ ಬರುತ್ತಿದ್ದಂತೆಯೇ ಸಿದ್ದಮ್ಮ ಅವರನ್ನು ಒಳಗೆ ಸೇರಿಸಿಕೊಳ್ಳುವುದಕ್ಕೆ ಅಳಿಯ ಮುತ್ತಯ್ಯ ಹಿಂದೇಟು ಹಾಕಿದರು. ಅಧಿಕಾರಿಗಳು ಅಳಿಯ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗದೆ ಕೊನೆಗೆ ಆಸ್ಪತ್ರೆಗೆ ಕರೆದೊಯ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!