ದನದ ಕೊಟ್ಟಿಗೆಯಲ್ಲೇ ಕ್ವಾರಂಟೈನ್‌ ಆಗಿ ಕೊರೋನಾ ಗೆದ್ದ!

By Kannadaprabha News  |  First Published May 25, 2021, 9:28 AM IST
  • ಕೊಟ್ಟಿಗೆಯಲ್ಲೇ ಕ್ವಾರಂಟೈನ್ ಆಗಿ ಕೊರೋನಾ ಗೆದ್ದ ವ್ಯಕ್ತಿ
  • ಮನೆಯಲ್ಲಿ ಸೂಕ್ತ ಜಾಗವಿಲ್ಲದ ಕಾರಣ ಕೊಟ್ಟಿಗೆಯಲ್ಲಿ 14 ದಿನ ಕಳೆದ
  • ಮನೆಯಿಂದ ಸಕಲ ಸೌಲಭ್ಯಗಳು ಕ್ವಾರಂಟೈನ್ ಅದ ವ್ಯಕ್ತಿಗೆ ರವಾನೆ

 ಸಿರಿಗೆರೆ (ಮೇ.25):  ಕೊರೋನಾ ಪಾಸಿಟಿವ್‌ ರಿಪೋರ್ಟ್‌ ಬಂದಿದ್ದ ವ್ಯಕ್ತಿಯೊಬ್ಬ 14 ದಿನ ದನದ ಕೊಟ್ಟಿಗೆಯಲ್ಲೇ ಕ್ವಾರಂಟೈನ್‌ ಆಗಿ ಕೊರೋನಾ ಗೆದ್ದಿದ್ದಾನೆ. 

ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ನಿವಾಸಿ ಪ್ರಭು ಅವರು ಮೇ 10ರಂದು ಪರೀಕ್ಷೆಗಾಗಿ ಗಂಟಲ ದ್ರವ ಕೊಟ್ಟಿದ್ದರು. ರಿಪೋರ್ಟ್‌ ಬಂದಾಗ ಪಾಸಿಟಿವ್‌ ಧೃಡಪಟ್ಟಿತ್ತು. ಪ್ರಭು ಮನೆಯಲ್ಲಿ ಕ್ವಾರಂಟೈನ್‌ ಆಗಲು ಸೌಲಭ್ಯಗಳಿಲಿಲ್ಲ. 

Latest Videos

undefined

ಬ್ಲ್ಯಾಕ್ ಫಂಗಸ್ ಎಚ್ಚರಿಕೆ ಹೇಗೆ? ಕಣ್ಣಿನ ಮೇಲೆ ಪರಿಣಾಮ; ಡಾ. ಭುಜಂಗ ಶೆಟ್ಟಿ ವಿವರಣೆ ..

ಹೀಗಾಗಿ ಊರ ಹೊರಗೆ ಪ್ರಭು ನಿರ್ಮಿಸಿದ್ದ ದನದ ಕೊಟ್ಟಿಗೆಯಲ್ಲಿ ಕ್ವಾರಂಟೈನ್‌ ಆಗಲು ನಿರ್ಧರಿಸಿದರು. ಮನೆಯಿಂದ ತಿಂಡಿ, ಊಟ, ಸ್ನಾನಕ್ಕೆ ಬಿಸಿ ನೀರನ್ನು ಒದಗಿಸಲಾಗುತ್ತಿತ್ತು. ಗಟ್ಟಿಮನಸ್ಸು ಮಾಡಿ 14 ದಿನ ಕ್ವಾರಂಟೈನ್‌ ಆಗಿ ಕೊರೋನಾ ಗೆದ್ದಿದ್ದು, ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಮತ್ತೆ ಪರೀಕ್ಷೆಗೆ ಒಳಪಟ್ಟು ವರದಿ ನೆಗೆಟಿವ್‌ ಬಂದರೂ, ನಾಲ್ಕಾರು ದಿನ ಕೊಟ್ಟಿಗೆಯಲ್ಲಿಯೇ ಕಾಲ ಕಳೆದು ನಂತರ ಮನೆ ಸೇರಿಕೊಳ್ಳುವೆ ಎನ್ನುತ್ತಾರೆ ಪ್ರಭು.

ತರಳಬಾಳು ಶ್ರೀಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕರೆ ಮಾಡಿ ಕ್ಷೇಮ ಸಮಾಚಾರ ವಿಚಾರಿಸಿದ್ದಾರಲ್ಲದೆ, ಹೆಚ್ಚಿನ ಚಿಕಿತ್ಸೆ ಬೇಕಾದರೆ ತಮ್ಮ ಗಮನಕ್ಕೆ ತರಬೇಕೆಂದು ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!