ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಕರಾವಳಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಇತ್ತ ಮೂಡುಬಿದಿರೆಯಲ್ಲಿ ಗರ್ಭಿಣಿ ಮಗುವಿಗೆ ಜನ್ಮ ನೀಡುತ್ತಿದ್ದಂತೆ ಅತ್ತ ಆಕೆಯ ಪತಿ ಮುಂಬೈಯಲ್ಲಿ ಇಹಲೋಕದ ಪಯಣ ಮುಗಿಸಿರುವ ಹೃದಯ ವಿದ್ರಾವಕ ಸನ್ನಿವೇಶ ನಡೆದಿದೆ.
ಮೂಡುಬಿದಿರೆ(ಮೇ 22): ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಕರಾವಳಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಇತ್ತ ಮೂಡುಬಿದಿರೆಯಲ್ಲಿ ಗರ್ಭಿಣಿ ಮಗುವಿಗೆ ಜನ್ಮ ನೀಡುತ್ತಿದ್ದಂತೆ ಅತ್ತ ಆಕೆಯ ಪತಿ ಮುಂಬೈಯಲ್ಲಿ ಇಹಲೋಕದ ಪಯಣ ಮುಗಿಸಿರುವ ಹೃದಯ ವಿದ್ರಾವಕ ಸನ್ನಿವೇಶ ನಡೆದಿದೆ.
ಮೂಡುಬಿದಿರೆ ಮೂಲದ ವ್ಯಕ್ತಿಯೊಬ್ಬರು ಮುಂಬೈನಲ್ಲಿ ಕೆಲಸದಲ್ಲಿದ್ದರು. ಅವರಿಗೆ ಕೊರೋನಾ ಸೋಂಕು ಕಂಡುಬಂದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.
ದೇಶದಲ್ಲಿ ದಾಖಲೆಯ 5 700 ಜನರಿಗೆ ಕೊರೋನಾ ಸೋಂಕು..!
ವಿಪರ್ಯಾಸವೆಂದರೆ ಅದೇ ದಿನ ಆ ವ್ಯಕ್ತಿಯ ಪತ್ನಿ ಮಗುವಿಗೆ ಜನ್ಮ ನೀಡಿದ್ದು, ಮಗು ಕಣ್ತೆರೆಯುವ ಮುನ್ನವೇ ವಿಧಿ ಮಗುವಿನ ತಂದೆಯನ್ನು ಬಲಿ ಪಡೆದಿದೆ. ಮೃತರ ಪತ್ನಿ ತಮ್ಮ ನಿವಾಸ ಮೂಡುಬಿದಿರೆಯಲ್ಲಿ ವಾಸವಾಗಿದ್ದಾರೆ. ಅವರ ಪತಿ ಕೊರೋನಾದಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅಂತಿಮವಾಗಿ ಪತಿಯ ಮುಖ ನೋಡುವ ಅವಕಾಶವೂ ಕೂಡ ಅವರಿಗೆ ಇಲ್ಲದಂತಾಗಿದೆ.