ಮದುಮಕ್ಕಳಿಗೆ ಲೇಟಾಗಿಯಾದರೂ ಸರ್ಕಾರದಿಂದ ಗುಡ್ ನ್ಯೂಸ್

ಭಾನುವಾರದ ಮದುವೆಗೆ ಸರ್ಕಾರ ಓಕೆ/ ಈಗಾಗಲೇ ನಿಗದಿಮಾಡಿಕೊಂಡವರು ಮದುವೆ ಮಾಡಿಕೊಳ್ಳಬಹುದು/ 50 ಜನರಿಗೆ ಸೀಮಿತ ಅವಕಾಶ/ ಲಾಕ್ ಡೌನ್ ನಿಯಮ ಪಾಲನೆ ಕಡ್ಡಾಯ


ಬೆಂಗಳೂರು(ಮೇ 21)  ಮದುವೆ ನಿಶ್ಚಯ ಮಾಡಿಕೊಂಡವರಿಗೆ ಸರ್ಕಾರ ಶುಭ ಸುದ್ದಿ ನೀಡಿದೆ. ಭಾನುವಾರ ನಿಗದಿ ಮಾಡಿಕೊಂಡಿದ್ದ ಮದುವೆ ನೆರವೇರಿಸಲು ಯಾವ ಅಡ್ಡಿ ಇಲ್ಲ ಎಂದು ಸರ್ಕಾರ  ಹೇಳಿದ್ದು ಕೆಲ ನಿಯಮಗಳನ್ನು ತಿಳಿಸಿದೆ

 

Latest Videos

"ದೇಶದಲ್ಲಿ ಕೊರೋನಾ ಲಾಕ್‌ಡೌನ್ ‌ಜಾರಿಯಲ್ಲಿದ್ದು ರಾಜ್ಯದಲ್ಲಿ ಬಹುವಿಧದ ರಿಯಾಯಿತಿಗಳಿದ್ದರೂ ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಿರಲಿದೆ ಎಂದು ಸರ್ಕಾರ ಹೇಳಿತ್ತು. ಆದರೆ ಇದೀಗ ಭಾನುವಾರಗಳಂದು ಮದುವೆ ಸಮಾರಂಭಗಳಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.  ಹಾಗಾಗಿ ಮದುವೆ ನಡೆಸಬಹುದು.

ಆಲಿಯಾ-ರಣವೀರ್ ಮದುವೆಗೆ ದೊಡ್ಡ ಕಂಟಕ

ಭಾನುವಾರ ಸಂಪೂರ್ಣ ನಿಷೇಧದ ದಿನ ಆಗಿರುತ್ತದೆ. ಆದರೆ ನಿಗದಿ ಮಾಡಿಕೊಂಡ ಮದುವೆ ಮಾಡಬಹುದು.  ವಿಪತ್ತು ನಿರ್ವಹಣ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್  ಆದೇಶ ಹೊರಡಿಸಿದ್ದು ವಿವಾಹ ಸಮಾರಂಭಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಅನುಮತಿಸಲಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಂಡು 50 ಮಂದಿಯ ಗರಿಷ್ಠ ಉಪಸ್ಥಿತಿಯಲ್ಲಿ ವಿವಾಹ ನೆರವೇರಿಸಬಹುದು ಎಂದು ತಿಳಿಸಿದ್ದಾರೆ.

ಭಾನುವಾರ ಸಂಪೂರ್ಣ ಲಾಕ್‌ಡೌನ್ ಆಗಿರುವ ಕಾರಣ ಇದಾಗಲೇ ವಿವಾಹ ದಿನ ನಿಗದಿಯಾಗಿದ್ದವರು ಏನು ಮಾಡಬೇಕು ಎಂದು ನಾಗರಿಕರು ಪ್ರಶ್ನೆ ಮಾಡಿದ್ದರು. ಈಗ 50 ಜನರಿಗೆ ಸೀಮಿತ ಮಾಡಿ ಮದುವೆ ಮಾಡಿಕೊಳ್ಳಬಹುದು. 

click me!