Chitradurga: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 18 ಸಾವಿರ ರೂ ದಂಡ ವಿಧಿಸಿದ ಖಾಕಿ

By Govindaraj S  |  First Published Aug 5, 2022, 2:38 PM IST

ವಾಹನ ಸವಾರರು ರಸ್ತೆಯಲ್ಲಿ ಸಂಚಾರ ಮಾಡುವಾಗ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಪೊಲೀಸರು ಪದೇ ಪದೇ ಹೇಳುತ್ತಲೇ ಇರುತ್ತಾರೆ. ಆದರೂ ಬೈಕ್, ಕಾರು ಹಾಗೂ ಇನ್ನಿತರ ವಾಹನಗಳ ಸವಾರರು ಅದಕ್ಕೆ ಕಿಮ್ಮತ್ತೇ ಇಲ್ಲದಂತೆ ತಮ್ಮ ಪಾಡಿಗೆ ತಾವು ಯದ್ವಾತದ್ವ ವಾಹನಗಳನ್ನು ಸಂಚರಿಸುತ್ತಾರೆ.


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಆ.05): ವಾಹನ ಸವಾರರು ರಸ್ತೆಯಲ್ಲಿ ಸಂಚಾರ ಮಾಡುವಾಗ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಪೊಲೀಸರು ಪದೇ ಪದೇ ಹೇಳುತ್ತಲೇ ಇರುತ್ತಾರೆ. ಆದರೂ ಬೈಕ್, ಕಾರು ಹಾಗೂ ಇನ್ನಿತರ ವಾಹನಗಳ ಸವಾರರು ಅದಕ್ಕೆ ಕಿಮ್ಮತ್ತೇ ಇಲ್ಲದಂತೆ ತಮ್ಮ ಪಾಡಿಗೆ ತಾವು ಯದ್ವಾತದ್ವ ವಾಹನಗಳನ್ನು ಸಂಚರಿಸುತ್ತಾರೆ. ಇಂತಹ ಪುಂಡಾಟ ಮಾಡುವ ಖದೀಮರಿಗೆ ಕೋಟೆನಾಡಿನ ಖಾಕಿ ಪಡೆ ಬಿಗ್ ಶಾಕ್ ಕೊಟ್ಟಿದೆ. ಅದೇನಪ್ಪ ಅಂತ ಬಿಗ್ ಶಾಕ್ ಅಂತೀರಾ ಇಲ್ಲಿದೆ ನೋಡಿ ಡಿಟೈಲ್ಸ್. 

Latest Videos

undefined

ಚಿತ್ರದುರ್ಗ ನಗರದ ಪ್ರಮುಖ ವೃತ್ತವಾಗಿರೋ ಗಾಂಧಿ ವೃತ್ತದಲ್ಲಿ ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮ  ಉಲ್ಲಂಘನೆ ಮಾಡ್ತಿರೋ ವಾಹನ ಸವಾರರಿಗೆ ಫೈನ್ ಬಿಸಿ ಮುಟ್ಟಿಸ್ತಿರೋದು. ಅನೇಕ ಬಾರಿ ಚಿತ್ರದುರ್ಗದ ಪೊಲೀಸರು ವಾಹನ ಸವಾರರಿಗೆ ಎಲ್ಲರೂ ತಪ್ಪದೇ ಸಂಚಾರಿ ನಿಯಮಗಳನ್ನು ಪಾಲನೆ ಮಾಡಿ ಎಂದು ಹೇಳಿದರೂ ಕೂಡ ಜಿಲ್ಲೆಯ ಬಹುತೇಕ ಜನರು ಪಾಲನೆ ಮಾಡುವುದಿಲ್ಲ. ಇದ್ರಿಂದ ಆಕ್ರೋಶಗೊಂಡ ಕೋಟೆನಾಡಿನ ಪೊಲೀಸರು ಮುಲಾಜಿಲ್ಲದೇ ಓರ್ವ ಯುವಕನಿಗೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಬರೋಬ್ಬರಿ 18000 ಸಾವಿರ ರೂ ದಂಡ ಶುಲ್ಕವನ್ನು ವಿಧಿಸಿ ಬೈಕ್ ಸವಾರರು ಹಾಗೂ ಇನ್ನಿತರ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದ್ದಾರೆ.

Chitradurga: ರಸ್ತೆಯಲ್ಲಿ ಓಡಾಡುವ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಗಲಾಟೆ

ಏನಿದು ಪ್ರಕರಣ?: ಇದೇ ತಿಂಗಳು 3ನೇ ತಾರೀಖಿನಂದು ಚಿತ್ರದುರ್ಗ ನಗರದ ಚಿಕ್ಕಪೇಟೆ ಬಡಾವಣೆಯ ನಿವಾಸಿ ಯುವಕ ಭರತ್ ನಗರದ ಪ್ರಮುಖ ರಸ್ತೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾನೆ. ಒಂದು ಬೈಕ್‌ನಲ್ಲಿ ಮೂವರನ್ನು ಕೂರಿಸಿಕೊಂಡು ಹೋಗಿದ್ದಲ್ಲದೇ, ನೋ DL, ನೋ ಹೆಲ್ಮೆಟ್, ಹಾಗೂ ನೋ RC ಬುಕ್ ಜೊತೆಗೆ ಮೇಲಾಗಿ ಡ್ರಿಂಕ್ಸ್ ಮಾಡಿ ವಾಹನ ಚಲಾಯಿಸಿದ್ದಾನೆ. ಇದನ್ನೆಲ್ಲಾ ಪರಿಶೀಲನೆ ನಡೆಸಿದ ಚಿತ್ರದುರ್ಗ ಟ್ರಾಫಿಕ್ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೇ, ಪೊಲೀಸರೊಂದಿಗೆ ತಪ್ಪಾಗಿ ವರ್ತನೆ ಮಾಡಿದ್ದಾನೆ. ಇದನ್ನೆಲ್ಲಾ ಪರಿಗಣನೆಗೆ ತೆಗೆದುಕೊಂಡು ಪೊಲೀಸರು ಸರಿ ಸುಮಾರು 18 ಸಾವಿರ ದಂಡ ವಿಧಿಸಿ, ಚಿತ್ರದುರ್ಗದ ಜಿಲ್ಲಾ ಸತ್ರ ನಾಯ್ಯಾಲಯಕ್ಕೆ ಈ ಕೇಸನ್ನು ಒಪ್ಪಿಸಿದ್ದಾರೆ.

ಪ್ರಕರಣದ ಗಂಭೀರತೆಯನ್ನು ಪರಿಶೀಲಿಸಿದ ನ್ಯಾಯಾಧೀಶರು ಸಂಚಾರಿ ನಿಯಮ ಉಲ್ಲಂಘಿಸಿದ ಯುವಕನಿಗೆ ಸುಮಾರು 18000 ಸಾವಿರ ದಂಡ ಶುಲ್ಕ ಪಾವತಿ ಮಾಡಲೇಬೇಕು ಎಂದು ತಿಳಿಸಿದ್ದಾರೆ. ಇಲ್ಲವಾದಲ್ಲಿ ಒಂದೂವರೆ ವರ್ಷಗಳ ಕಾಲ ಜೈಲು ವಾಸವಿದೆ. ಇದರಲ್ಲಿ ಯಾವುದನ್ನು ನೀವು ಆಯ್ಕೆ ಮಾಡಿಕೊಳ್ಳುತ್ತೀರಿ ನಿಮಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ದಿಗ್ಭ್ರಮೆಗೊಂಡ ಯುವಕ ಭರತ್ ಜೈಲಿಗೆ ನಾನು ಹೋಗಲಾರೆ 18 ಸಾವಿರ ಫೈಲ್ ಕಟ್ಟುತ್ತೇನೆ ಎಂದು ದಂಡ ಪಾವತಿ ಮಾಡಿ ಮನೆಗೆ ತೆರಳಿದ್ದಾನೆ.

ರಾಹುಲ್ ಆಗಮನದ ವೇಳೆ ತಾರತಮ್ಯ :ಕಾಂಗ್ರೆಸ್ ಕಚೇರಿಗೆ ಬೀಗ ಜಡಿದು ಕಾರ್ಯಕರ್ತರ ಪ್ರತಿಭಟನೆ

ಇನ್ನೂ ಈ ಪ್ರಕರಣ ಕುರಿತು ಪೊಲೀಸರು ಹೇಳುವುದು ಏನೆಂದರೆ, ಇದರ ಮೂಲ ಉದ್ದೇಶ ಯಾವುದೇ ವಾಹನ ಸವಾರರು ತಪ್ಪದೇ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು. ಅದನ್ನು ಬಿಟ್ಟು ಕೇವಲ ಶೋಕಿಗೋಸ್ಕರ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದು ಸರಿಯಲ್ಲ. ಈ ದುಬಾರಿ ದಂಡ ಕೇವಲ ಸ್ಯಾಂಪಲ್ ಮಾತ್ರ, ಇನ್ಮುಂದೆ ಯಾವುದೇ ವಾಹನ ಸವಾರರು ನಿಯಮ ಉಲ್ಲಂಘಿಸಿದ್ದೇ ಆದ್ದಲ್ಲಿ ಯಾವುದೇ ಮುಲಾಜಿಲ್ಲದೇ ಹೆಚ್ಚಿನ ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕರಿಗೆ ಖಾಕಿ ಖಡಕ್ ಸಂದೇಶ ರವಾನಿಸಿತು.

click me!