ರಂಗನತಿಟ್ಟು ಪಕ್ಷಿಧಾಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ: ರಾಮ್ಸರ್ ಪಟ್ಟಿಗೆ ಸೇರ್ಪಡೆ

By Govindaraj SFirst Published Aug 5, 2022, 2:04 PM IST
Highlights

ಅಂತಾರಾಷ್ಟ್ರೀಯ ರಾಮ್ಸರ್ ವೆಟ್‌ಲ್ಯಾಂಡ್ ಸೈಟ್ (ಚೌಗುಪ್ರದೇಶ) ಪಟ್ಟಿಗೆ ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮ ಸೇರ್ಪಡೆಗೊಂಡಿದೆ. ಪಕ್ಷಿಕಾಶಿ ಎಂದೇ ವಿಶ್ವ ಪ್ರಸಿದ್ಧಿ ಪಡೆದಿರುವ ರಂಗನತಿಟ್ಟು ಪಕ್ಷಿಧಾಮ ಕರ್ನಾಟಕದ ಏಕೈಕ ತಾಣವಾಗಿ ರಾಮ್ಸರ್ ವೆಟ್‌ಲ್ಯಾಂಡ್ ಸೈಟ್ ಪಟ್ಟಿಗೆ ಸೇರ್ಪಡೆಯಾಗಿದೆ. 

ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ

ಮಂಡ್ಯ (ಆ.05): ಅಂತಾರಾಷ್ಟ್ರೀಯ ರಾಮ್ಸರ್ ವೆಟ್‌ಲ್ಯಾಂಡ್ ಸೈಟ್ (ಚೌಗುಪ್ರದೇಶ) ಪಟ್ಟಿಗೆ ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮ ಸೇರ್ಪಡೆಗೊಂಡಿದೆ. ಪಕ್ಷಿಕಾಶಿ ಎಂದೇ ವಿಶ್ವ ಪ್ರಸಿದ್ಧಿ ಪಡೆದಿರುವ ರಂಗನತಿಟ್ಟು ಪಕ್ಷಿಧಾಮ ಕರ್ನಾಟಕದ ಏಕೈಕ ತಾಣವಾಗಿ ರಾಮ್ಸರ್ ವೆಟ್‌ಲ್ಯಾಂಡ್ ಸೈಟ್ ಪಟ್ಟಿಗೆ ಸೇರ್ಪಡೆಯಾಗಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದೆ. ಸತತ 10 ವರ್ಷಗಳ ಅರಣ್ಯ ಇಲಾಖೆಯ ಪರಿಶ್ರಮದಿಂದ ರಂಗನತಿಟ್ಟು ಪಕ್ಷಿಧಾಮಕ್ಕೆ ವಿಶ್ವ ಭೂಪಟದಲ್ಲಿ ಮಾನ್ಯತೆ ಸಿಕ್ಕಂತಾಗಿದೆ. ದೇಶದಲ್ಲಿ ಈಗಾಗಲೇ 64 ರಾಮ‌್ಸರ್ ಸೈಟ್ (ಚೌಗು ಪ್ರದೇಶ)ಗಳನ್ನು ಗುರುತಿಸಲಾಗಿದೆ.

ನೀರು ಹಕ್ಕಿಗಳು ವಾಸಿಸುವ ಚೌಗು ಪ್ರದೇಶಗಳ ಸುಸ್ಥಿರತೆ ಹಾಗೂ ಅದರ ಸಂರಕ್ಷಣೆಗೆ ರಾಮ್ಸರ್ ತಾಣಗಳನ್ನು ಗುರುತಿಸಿ ಘೋಷಣೆ ಮಾಡಲು ಈ ಮೊದಲೇ ಒತ್ತಾಯಿಸಲಾಗಿತ್ತು. ಅಂತೆಯೆ, ರಂಗನತಿಟ್ಟು ಪಕ್ಷಿಧಾಮ ಕುರಿತು ಅಧ್ಯಯನ ನಡೆಸಿ ವೈಜ್ಞಾನಿಕವಾಗಿ ಇಲ್ಲಿನ ಪ್ರಾಣಿ, ಪಕ್ಷಿ, ಜಲಚರಗಳು, ಸಸ್ಯ ಪ್ರಭೇದಗಳ ಪ್ರತ್ಯೇಕ ಪಟ್ಟಿ ತಯಾರಿಸಿ ವರದಿ ಸಲ್ಲಿಸಲಾಗಿತ್ತು. ರಾಜ್ಯ ಸರ್ಕಾರ ಕೇಂದ್ರ ಕಚೇರಿ ಮೂಲಕ ರಾಮ್ಸರ್ ಸಂಸ್ಥೆಗೆ ಸಂಪೂರ್ಣ ವರದಿ ನೀಡಿತ್ತು. ಆಬಳಿಕ ವಿಜ್ಞಾನಿಗಳು ರಂಗನತಿಟ್ಟುಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದರು.

Rain Effect ಕರ್ನಾಟಕದಲ್ಲಿ ಭಾರೀ ಮಳೆ: ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ

ರಂಗನತಿಟ್ಟು ಪಕ್ಷಿಧಾಮದಲ್ಲಿ ಸ್ಪಾಟ್‌ ಬಿಲ್ ಪೆಲಿಕಾನ್ ಪ್ರಭೇದದ ಹಕ್ಕಿಗಳು ಶಾಶ್ವತ ನೆಲೆ ಕಂಡುಕೊಂಡಿವೆ. ಇದರೊಂದಿಗೆ, ಹಲವು ವಿದೇಶಿ ಪಕ್ಷಿಗಳಾದ ಯುರೇಶಿಯನ್ ಸ್ಪೂನ್ ಬಿಲ್, ಪೆಯಿಂಟೆಡ್ ಸ್ಟೋರ್ಕ್, ನೈಟ್ ಹೇರಾನ್, ಓಪನ್ ಬಿಲ್ ಸ್ಟೋರ್ಕ್, ಬ್ಲಾಕ್ ಹಡೆಡ್ ವೈಟ್ ಹೈಬೀಸ್, ಕಾರ್ಮೊರೆಂಟ್ ಹಾಗೂ ಸರಿಸೃಪಗಳಾದ ಮಾರ್ಷ್ ತಳಿಯ ಮೊಸಳೆಗಳ ಸಂತತಿ, ಮಾಫಿರ್ ತಳಿಯ ಮೀನುಗಳು ಕಾವೇರಿ ನದಿಯಲ್ಲಿವೆ.

ಆಡಳಿತ ನಡೆಸುವವರಿಗೆ ನಾಲ್ವಡಿ ದಾರಿದೀಪ: ಸಂತೋಷ್‌ ಹೆಗ್ಡೆ

ಅಂತಾರಾಷ್ಟ್ರೀಯ ಚೌಗು ಪ್ರದೇಶದ ಸಂರಕ್ಷಣೆ ಸಲುವಾಗಿ 1971ರಲ್ಲಿ ಇರಾನ್‌ನ ರಾಮ್ಸರ್‌ನಲ್ಲಿ ಯುನೆಸ್ಕೋ ವತಿಯಿಂದ ಸಮ್ಮೇಳನ ಆಯೋಜಿಸಲಾಗಿತ್ತು. 1975ರಲ್ಲಿ ಸ್ಥಳ ಗುರುತಿಸುವ ಪ್ರಕ್ರಿಯೆ ಆರಂಭವಾಗಿ ಭಾರತ 1982ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿತು.ಇದೀಗ ರಂಗನತಿಟ್ಟು ಪಕ್ಷಿಧಾಮ ರಾಮ್ಸರ್ ತಾಣದ ಪಟ್ಟಿಗೆ ಸೇರ್ಪಡೆ ಆಗುವ ಮೂಲಕ ರಂಗನತಿಟ್ಟು ಪಕ್ಷಿಧಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಹೆಚ್ಚಿನ ಅನುದಾನ ಗಳಿಸುವ ನಿರೀಕ್ಷೆಯಲ್ಲಿದೆ. ಆ ಮೂಲಕ ಇಲ್ಲಿನ ನದಿ, ದ್ವೀಪಗಳು, ಸ್ವಚ್ಛತೆ, ಅಭಿವೃದ್ಧಿ ವಿಷಯದಲ್ಲಿ ವಿದೇಶಿ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ.

click me!