ಚಾಮರಾಜನಗರ: ನಾಡ ಬಂದೂಕು ತಯಾರಿಸುತ್ತಿದ್ದ ವ್ಯಕ್ತಿ ಬಂಧನ

By Kannadaprabha News  |  First Published Nov 23, 2019, 12:34 PM IST

ಜಿಲ್ಲಾ ಅಪರಾಧ ತನಿಖಾ ದಳದ ಪೊಲೀಸರು ತಾಲೂಕಿನ ಬನ್ನಿತಾಳಪುರದಲ್ಲಿ ದಾಳಿ ನಡೆಸಿ ನಾಡ ಬಂದೂಕು ತಯಾರಿಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಗುಂಡ್ಲುಪೇಟೆ​ ತಾಲೂಕಿನ ಬನ್ನಿತಾಳಪುರ ಗ್ರಾಮದ ಗೋಪಶೆಟ್ಟಿ(38) ಬಂಧಿಸಿ ಆತನ ಮನೆಯಲ್ಲಿ ತಯಾರಿಸುತ್ತಿದ್ದ 2 ನಳಿಕೆ ನಾಡ ಬಂದೂಕ ಹಾಗೂ ಇತರೆ ಪರಿಕರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.


ಚಾಮರಾಜನಗರ(ನ.23): ಜಿಲ್ಲಾ ಅಪರಾಧ ತನಿಖಾ ದಳದ ಪೊಲೀಸರು ತಾಲೂಕಿನ ಬನ್ನಿತಾಳಪುರದಲ್ಲಿ ದಾಳಿ ನಡೆಸಿ ನಾಡ ಬಂದೂಕು ತಯಾರಿಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಗುಂಡ್ಲುಪೇಟೆ​ ತಾಲೂಕಿನ ಬನ್ನಿತಾಳಪುರ ಗ್ರಾಮದ ಗೋಪಶೆಟ್ಟಿ(38) ಬಂಧಿಸಿ ಆತನ ಮನೆಯಲ್ಲಿ ತಯಾರಿಸುತ್ತಿದ್ದ 2 ನಳಿಕೆ ನಾಡ ಬಂದೂಕ ಹಾಗೂ ಇತರೆ ಪರಿಕರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Tap to resize

Latest Videos

undefined

ಅನುದಾನ ಕೇಳಿದ್ರೆ ಫೈನಾನ್ಸ್ ಮಿನಿಸ್ಟರಾ ಅಂತಾರೆ: ಸಿದ್ದುಗೆ ಸೋಮಶೇಖರ್ ಟಾಂಗ್

ಜಿಲ್ಲಾ ಅಪರಾಧ ತನಿಖಾ ದಳದ ಸರ್ಕಲ್‌ ಇನ್ಸ್‌ಪೆಕ್ಟರ್‌ ಮಹದೇವಶೆಟ್ಟಿ, ಎಎಸ್‌ಐ ಚಂದ್ರಶೇಖರ್‌, ಮುಖ್ಯಪೇದೆ ಎಚ್‌.ಡಿ.ಸ್ವಾಮಿ, ಪೇದೆಗಳಾದ ಮಾದೇಶ, ಸಿದ್ದಮಲ್ಲಶೆಟ್ಟಿ, ಜಗದೀಶ್‌, ಮಹೇಶ್‌ ದಾಳಿ ನಡೆಸಿದ್ದಾರೆ.

ಜಿಲ್ಲಾ ಅಪರಾಧ ತನಿಖಾ ದಳದ ಪೊಲೀಸರು ಆರೋಪಿ ಸಮೇತ ವಶಪಡಿಸಿಕೊಂಡ ಮಾಲುಗಳನ್ನು ಗುಂಡ್ಲುಪೇಟೆ ಠಾಣೆಗೆ ಒಪ್ಪಿಸಿದರು. ಬಳಿಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆ. ಆರ್. ಪೇಟೆ: ಮತದಾರರ ಸೆಳೆಯಲು ಕಾಂಗ್ರೆಸ್ 'ಜಾದೂ' ಪ್ರಯೋಗ..!

click me!