'ಕುಮಾರಸ್ವಾಮಿ ಅಡಿಯಾಳಾಗಿ 'ಕೈ' ಶಾಸಕರು ಕೆಲಸ ಮಾಡುವಂತಾಯ್ತು'

By Web DeskFirst Published Nov 23, 2019, 11:46 AM IST
Highlights

ಕುಮಾರಸ್ವಾಮಿ ಬಳಿ ತೀರಾ ಒತ್ತಾಯ ಮಾಡಿದಾಗ ನಾಲ್ಕು ಲಕ್ಷ ಮತದಾರರಿರುವ ದೊಡ್ಡ ಕ್ಷೇತ್ರ ಯಶವಂತಪುರಕ್ಕೆ 200 ಕೋಟಿ ಮಂಜೂರು ಮಾಡಿದ್ದರು| ಅದೇ ಜೆಡಿಎಸ್ ಶಾಸಕರು ಇರುವ ದಾಸರಹಳ್ಳಿ ,ಮಹಾಲಕ್ಷಿ ಬಡಾವಣೆಗೆ ಹೆಚ್ಚಿನ ಅನುದಾನ ಕೊಟ್ಟಿದ್ದರು| ನಾವು 77 ಕಾಂಗ್ರೆಸ್ ಶಾಸಕರು ಬೆಂಬಲಿಸಿ ಮುಖ್ಯಮಂತ್ರಿ ಮಾಡಿದ್ದಕ್ಕೆ ಕುಮಾರಸ್ವಾಮಿ ಅದನ್ನು ಪ್ಯಾಮಿಲಿ ಟ್ರಸ್ಟ್ ಮಾಡಿಕೊಂಡಿದ್ದರು ಎಂದ ಎಸ್ ಟಿ ಸೋಮಶೇಖರ್| 

ಬೆಂಗಳೂರು(ನ.23): ನಾನು ಬಿಡಿಎ ಸದಸ್ಯನಾಗಿದ್ದಾಗ ಕ್ಷೇತ್ರಕ್ಕೆ 200 ಕೋಟಿ ರು. ಅನುದಾನ ತಂದಿದ್ದೆ, ಆದರೆ ಬಿಡಿಎ ಅಧ್ಯಕ್ಷನಾದಾಗ ಒಂದೇ ಒಂದು ರೂಪಾಯಿ ಅನುದಾನ ತರಲು ಸಾಧ್ಯವಾಗಲಿಲ್ಲ. ಕೆಂಪೇಗೌಡ ಬಡಾವಣೆ ರೈತರಿಗೆ 70:30 ಅನುಪಾತದಲ್ಲಿ ನಿವೇಶನ ಪರಿಹಾರ ಕೊಡಿಸಲು ಪ್ರಯತ್ನಿಸಿದ್ರೂ ಸಾಧ್ಯವಾಗಲಿಲ್ಲ, ಅದಕ್ಕೆ ರಾಕೇಶ್ ಸಿಂಗ್ ಎಂಬ ಅಧಿಕಾರಿ ಅಡ್ಡಿ ಪಡಿಸಿದ್ದರು. ಆ ಅಧಿಕಾರಿಯ ಹಿಂದೆ ಇದ್ದಿದ್ದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಇದ್ದರು ಎಂದು ಕಾಂಗ್ರೆಸ್ ನ ಅನರ್ಹ ಎಸ್.ಟಿ.ಸೋಮಶೇಖರ್ ಅವರು ಹೇಳಿದ್ದಾರೆ. 

ಶನಿವಾರ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಬಳಿ ತೀರಾ ಒತ್ತಾಯ ಮಾಡಿದಾಗ ನಾಲ್ಕು ಲಕ್ಷ ಮತದಾರರಿರುವ ದೊಡ್ಡ ಕ್ಷೇತ್ರ ಯಶವಂತಪುರಕ್ಕೆ 200 ಕೋಟಿ ಮಂಜೂರು ಮಾಡಿದ್ದರು. ಅದೇ ಜೆಡಿಎಸ್ ಶಾಸಕರು ಇರುವ ದಾಸರಹಳ್ಳಿ ,ಮಹಾಲಕ್ಷಿ ಬಡಾವಣೆಗೆ ಹೆಚ್ಚಿನ ಅನುದಾನ ಕೊಟ್ಟಿದ್ದರು. ನಾವು 77 ಕಾಂಗ್ರೆಸ್ ಶಾಸಕರು ಬೆಂಬಲಿಸಿ ಮುಖ್ಯಮಂತ್ರಿ ಮಾಡಿದ್ದಕ್ಕೆ ಕುಮಾರಸ್ವಾಮಿ ಅದನ್ನು ಪ್ಯಾಮಿಲಿ ಟ್ರಸ್ಟ್ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಿಎಂ ಕುಮಾರಸ್ವಾಮಿ ಅವರನ್ನ ಭೇಟಿ ಮಾಡಲು ನಗರದ ವೆಸ್ಟ್ ಎಂಡ್ ಹೊಟೇಲ್ ಗೆ ಹೋದ್ರೆ ಅಲ್ಲಿನ ವಾಚ್ ಮ್ಯಾನ್ ನಮ್ಮನ್ನು ತಡೆಯುತ್ತಾರೆ. ಇವರು ಫೋನ್ ಮಾಡಿ ಕರೆಸಿಕೊಂಡ್ರೆ ಮಾತ್ರ ನಮ್ಮನ್ನು ಒಳಗೆ ಬಿಡುತ್ತಾರೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಯ್ತು, 77 ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿಯವರ ಅಡಿಯಾಳಾಗಿ ಕೆಲಸ ಮಾಡುವಂತಾಯ್ತು ಹೀಗಾಗಿ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು ಎಂದು ಹೇಳಿದ್ದಾರೆ. 
ನಾನು ರಾಜೀನಾಮೆ ನೀಡಿದ್ದಕ್ಕೆ ಕಾಂಗ್ರೆಸ್ ನಾಯಕರು ನಮಗೆ ನೊಟೀಸ್ ಕೊಡಲಿಲ್ಲ.ಯಾಕೆ ರಾಜೀನಾಮೆ ಕೊಟ್ರಿ ಎಂದು ಕರೆದು ವಿಚಾರಿಸಲಿಲ್ಲ‌. ಅಂದು ಕಾಂಗ್ರೆಸ್ ನಾಯಕರು ಕಿವಿಗೆ ಹತ್ತಿ ಇಟ್ಟುಕೊಂಡಿದ್ದರು. ನಮ್ಮ ನೋವು ಕೇಳದೆ ಅನರ್ಹಗೊಳಿಸಿದ್ದರು ಎಂದು ಹೇಳಿದ್ದಾರೆ. 

ಅಂದು ರಾಜೀನಾಮೆ ನೀಡಿದ ಮೇಲೆ ಜೆಡಿಎಸ್ ಗೆ ಹೋಗುವ ಹಾಗಿರಲಿಲ್ಕ. ಹೀಗಾಗಿ ಅನಿವಾರ್ಯವಾಗಿ ಬಿಜೆಪಿಗೆ ಹೋಗಬೇಕಾಯ್ತು. ಅಭಿವೃದ್ಧಿ ವಿಷಯವೊಂದನ್ನು ಬಿಟ್ಟು ಯಾವುದೇ ಕಾರಣಕ್ಕೂ ನಾವು ಬಿಜೆಪಿ ಸೇರಿಲ್ಲ‌. ಕ್ಷೇತ್ರದ ಅಭಿವೃದ್ಧಿ ಒಂದೇ ಒಂದು ಕಾರಣಕ್ಕೆ ಬಿಜೆಪಿಗೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ. 
 

click me!