ಗ್ರಾ.ಪಂ ಮಾಜಿ ಸದಸ್ಯನ ಪೈಶಾಚಿ ಕೃತ್ಯ : ಈ ಉದ್ದೇಶಕ್ಕೆ ಪೀಡಿಸಿ ಗರ್ಭಿಣಿ ಹೆಂಡ್ತಿನಾ ಕೊಂದೇ ಬಿಟ್ಟ

Kannadaprabha News   | Asianet News
Published : Nov 16, 2020, 12:04 PM ISTUpdated : Nov 16, 2020, 12:47 PM IST
ಗ್ರಾ.ಪಂ ಮಾಜಿ ಸದಸ್ಯನ ಪೈಶಾಚಿ ಕೃತ್ಯ : ಈ ಉದ್ದೇಶಕ್ಕೆ ಪೀಡಿಸಿ ಗರ್ಭಿಣಿ ಹೆಂಡ್ತಿನಾ ಕೊಂದೇ ಬಿಟ್ಟ

ಸಾರಾಂಶ

ಗ್ರಾಮ ಪಂಚಾಯತ್ ಮಾಜಿ ಸದಸ್ಯನ ಪೈಶಾಚಿಕ ಕೃತ್ಯ ಪೀಡಿಸಿ ಪೀಡಿಸಿ ಗರ್ಭಿಣಿಯಾಗಿದ್ದ ಹೆಂಡತಿಯನ್ನೇ ಕೊಂದು ಬಿಟ್ಟ ಪಾಪಿ ಪತಿ 

ಟಿ.ನರಸೀಪುರ (ನ.16): ಗ್ರಾಪಂ ಮಾಜಿ ಸದಸ್ಯನೊಬ್ಬ ಸೀಮೆ ಎಣ್ಣೆ ಸುರಿದು ತನ್ನ ಪತ್ನಿಯನ್ನು ಬೆಂಕಿ ಹೆಚ್ಚಿ ಕೊಲೆ ಮಾಡಿರುವ ಘಟನೆ ಬನ್ನೂರ ಸಮೀಪದ ದೊಡ್ಡ ಮುಲಗೂಡು ಗ್ರಾಮದಲ್ಲಿ ನಡೆದಿದೆ. 

ಮತ್ತೊಮ್ಮೆ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ಹೊಂದಿದ್ದ ಆರೋಪಿ ಹಣಕ್ಕಾಗಿ ಪೀಡಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಗ್ರಾಮದ ಶಾಂತಮ್ಮ (22) ಕೊಲೆಗೀಡಾದವರು. ಗ್ರಾಪಂ ಮಾಜಿ ಸದಸ್ಯ ರಮೇಶ್‌ ಕೊಲೆ ಮಾಡಿದ ಆರೋಪಿ.

ಪ್ರಿಯತಮನೆ ಫ್ರೆಂಡ್ ಜೊತೆ ಬಂದು ರೇಪ್ ಮಾಡಿ ಸುಟ್ಟು ಹಾಕಿದ : ಗೆಜ್ಜೆ ಹೇಳಿತು ಗುರುತು

ನಂಜನಗೂಡಿನ ಅಶೋಕಪುರಂ ನಿವಾಸಿ ಕಾಳಿಂಗ ಸ್ವಾಮಿ ಎಂಬವರ ಪುತ್ರಿ ಶಾಂತಮ್ಮ (22) ಅವರನ್ನು ದೊಡ್ಡಮುಲಗೂಡು ಗ್ರಾಪಂ ಮಾಜಿ ಸದಸ್ಯ ರಮೇಶ್‌ಗೆ 2 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ವೇಳೆ 50 ಸಾವಿರ, 60 ಗ್ರಾಂ. ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. 

ರಮೇಶ ಮತ್ತೆ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಲು ತವರು ಮನೆಯಿಂದ .5 ಲಕ್ಷ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದ ಎಂದು ಕಾಳಿಂಗಸ್ವಾಮಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!
ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?