ಪತ್ನಿ ಜೊತೆಗೆ ಹಾಸನಕ್ಕೆ ಹೋದ ಕೆಪಿಸಿಸಿ ಅಧ್ಯಕ್ಷರು

Suvarna News   | Asianet News
Published : Nov 16, 2020, 11:44 AM ISTUpdated : Nov 16, 2020, 12:00 PM IST
ಪತ್ನಿ ಜೊತೆಗೆ ಹಾಸನಕ್ಕೆ ಹೋದ ಕೆಪಿಸಿಸಿ ಅಧ್ಯಕ್ಷರು

ಸಾರಾಂಶ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪತ್ನಿ ಉಷಾ ಜೊತೆಗೆ ಹಾಸನಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚೆಗಷ್ಟೇ ಉಪ ಚುನಾವಣೆ ಗೆಲುವಿಗಾಗಿ ಸತತ ಯತ್ನ ಮಾಡಿದ್ದರು. 

ಹಾಸನ (ನ.16): ಇಂದು ಪ್ರಸಿದ್ಧ  ಹಾಸನಾಂಬೆ ದೇಗುಲದ ವಾರ್ಷಿತ ಉತ್ಸವದ ಕೊನೆ ದಿನವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೇವಿನ ದರ್ಶನ ಪಡೆದಿದ್ದಾರೆ.

 ಪತ್ನಿ ಉಷಾ ಜೊತೆಗೆ ಹಾಸನಕ್ಕೆ  ಆಗಮಿಸಿದ ಡಿಕೆ ಶಿವಕುಮಾರ್ ಹಾಸನಾಂಬೆ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಹಾಸನಾಂಬ ಉತ್ಸವದ ಕಡೆದಿನ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. 

ಬೈ ಎಲೆಕ್ಷನ್ ಸೋಲಿನ ಬಳಿಕ ವಿಶೇಷ ಸ್ಥಳಕ್ಕೆ ಡಿಕೆ ಶಿವಕುಮಾರ್ ಭೇಟಿ

ಇಂದು  ಹಾಸನಾಂಬೆ ಉತ್ಸವಕ್ಕೆ ಅಂತಿಮ ದಿನವಾಗಿದ್ದು ಜಿಲ್ಲಾಡಳಿತದ ಸೂಚನೆ ಮೇಲೆರೆ ಇಂದು 12 ಗಂಟೆ ಸುಮಾರಿಗೆ ದೇಗುಲದ ಬಾಗಿಲು ಬಂದ್ ಮಾಡಲಾಗುತ್ತದೆ.

ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲನ್ನು ನವೆಂಬರ್ 5 ರಂದು ತೆರೆಯಲಾಗಿತ್ತು.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ