ರಾಮನಗರ: ಜೂಜಾಟ ವೇಳೆ ದಾಳಿ, ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿದ್ದ ವ್ಯಕ್ತಿ ಸಾವು

By Kannadaprabha News  |  First Published Oct 13, 2023, 12:06 PM IST

ತಿಗಳರ ಹೊಸಹಳ್ಳಿ ಹಾಗೂ ಅಕ್ಕ-ಪಕ್ಕದ ಗ್ರಾಮಗಳಿಂದ ಕೆಲ ಯುವಕರ ಗುಂಪೊಂದು ಟಿ.ಹೊಸಹಳ್ಳಿ‌ಯಲ್ಲಿ ಜೂಜಾಟ ಆಡುತ್ತಿದ್ದ ವೇಳೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು, ಆಗ ಅಲ್ಲಿಂದ ತಪ್ಪಿಸಿಕೊಂಡು ಹೋಗುವ ವೇಳೆ ಇಬ್ಬರು ಸೆರೆ ಸಿಕ್ಕಿದ್ದು ಉಳಿದವರು ಪರಾರಿಯಾಗಿದ್ದರು. 


ಕನಕಪುರ(ಅ.13):  ಜೂಜಾಟ ವೇಳೆ ಪೊಲೀಸರು ದಾಳಿ ನಡೆಸಿದಾಗ ಸ್ಥಳದಿಂದ ತಪ್ಪಿಸಿಕೊಳ್ಳಲು ಹೋಗಿ ವ್ಯಕ್ತಿಯೊಬ್ಬ ಆಯತಪ್ಪಿ ಅರ್ಕಾವತಿ ನದಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. 

ತಾಲೂಕಿನ ತಿಗಳರ ಹೊಸಹಳ್ಳಿಯ ಮರಿಸ್ವಾಮಿ (30)ಮೃತ ವ್ಯಕ್ತಿ. ಮಂಗಳವಾರ ರಾತ್ರಿ ತಿಗಳರ ಹೊಸಹಳ್ಳಿ ಹಾಗೂ ಅಕ್ಕ-ಪಕ್ಕದ ಗ್ರಾಮಗಳಿಂದ ಕೆಲ ಯುವಕರ ಗುಂಪೊಂದು ಟಿ.ಹೊಸಹಳ್ಳಿ‌ಯಲ್ಲಿ ಜೂಜಾಟ ಆಡುತ್ತಿದ್ದ ವೇಳೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು, ಆಗ ಅಲ್ಲಿಂದ ತಪ್ಪಿಸಿಕೊಂಡು ಹೋಗುವ ವೇಳೆ ಇಬ್ಬರು ಸೆರೆ ಸಿಕ್ಕಿದ್ದು ಉಳಿದವರು ಪರಾರಿಯಾಗಿದ್ದರು. 

Tap to resize

Latest Videos

ರಾಮನಗರ ಜಿಲ್ಲೆಯಲ್ಲಿ ಬೆಳೆ ಹಾನಿ: 274.22 ಕೋಟಿ ನಷ್ಟ

ಈ ವೇಳೆ ಮರಿಸ್ವಾಮಿ ಕಾಲು ಜಾರಿ ಅರ್ಕಾವತಿ ನದಿಗೆ ಬಿದ್ದಿದ್ದ. ಮನೆಗೆ ಬಾರದ ಮರಿಸ್ವಾಮಿ ಬಗ್ಗೆ ಆತನ ಕುಟುಂಬದವರು ಸ್ನೇಹಿತರನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ದೊರೆತಿರಲಿಲ್ಲ. ಆದರೆ ಗುರುವಾರ ಬೆಳಗ್ಗೆ ನದಿಯಲ್ಲಿ ಶವಪತ್ತೆಯಾಗಿದ್ದು ಆತನ ಸಾವಿನ ವಿಷಯ ಬಯಲಾಗಿದೆ.

click me!