
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಅ.13): ಕಾಫಿನಾಡಲ್ಲಿ ಕಾಡಾನೆ-ಮಾನವ ಸಂಘರ್ಷಕ್ಕೆ ದಶಕಗಳ ಇತಿಹಾಸವಿದೆ. ಆನೆ ಹಾವಳಿಗೆ ಬ್ರೇಕ್ ಹಾಕ್ಬೇಕು ಅಂದ್ರೆ ಆನೆ ಬಿಡಾರವೊಂದೇ ಅನಿವಾರ್ಯ ಎಂಬ ಆಗ್ರಹದ ಕೂಗು ಇತ್ತು. ಇದೀಗ ಸರ್ಕಾರ ಕಾಫಿನಾಡಲ್ಲೂ ಆನೆ ಶಿಬಿರ ತೆರೆಯೋ ಚಿಂತನೆಯಲ್ಲಿದ್ದು, 18 ಸಮೃದ್ಧ ಜಾಗಗಳನ್ನ ಗುರುತಿಸಿದೆ. ಫೈನಲಿ ಭದ್ರಾ ಅಭಯಾರಣ್ಯವೇ ಬೆಸ್ಟ್ ಪ್ಲೇಸ್ ಅನ್ನೋ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಆದ್ರೆ, ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಆದ್ರೆ, ಆನೆಗಳಿಗೆಂದೇ ಇರೋ ಮುತ್ತೋಡಿಯಲ್ಲೇಕೆ ಆನೆ ಶಿಬಿರ. ಮೂಡಿಗೆರೆಯಲ್ಲಿ ಆನೆ ಹಾವಳಿ ಹೆಚ್ಚಿರೋದು. ಅದು ಸರ್ಕಲ್ ಪ್ರದೇಶ. ಅಲ್ಲೇ ಮಾಡಿ ಅಂತ ಮುತ್ತೋಡಿ ಆನೆ ಶಿಬಿರಕ್ಕೆ ಪರಿಸರವಾದಿಗಳ ತೀವ್ರ ವಿರೋಧವಿದೆ..
ಭದ್ರಾ ಅಭಯಾರಣ್ಯವೇ ಬೆಸ್ಟ್ ಪ್ಲೇಸ್ ಅನ್ನೋ ತೀರ್ಮಾನಕ್ಕೆ ಸರ್ಕಾರ ?
ಕಾಫಿನಾಡು ಚಿಕ್ಕಮಗಳೂರಲ್ಲಿ ಆನೆ ಕಾಟಕ್ಕೆ ದಶಕಗಳ ಇತಿಹಾಸವಿದೆ. ಜಿಲ್ಲೆಯ ಪ್ರಮುಖ ಸಮಸ್ಯೆಗಳಲ್ಲಿ ಇದು ಒಂದು. ಕಾಫಿನಾಡ ದಶಧಿಕ್ಕುಗಳಲ್ಲೂ ಆನೆ ಹಾವಳಿ ಇದೆ. ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ಹಾಸನದ ಸಕಲೇಶಪುರದಿಂದ ಒಂದು ತಂಡ ಎಂಟ್ರಿಯಾದ್ರೆ. ಭದ್ರಾ ಅರಣ್ಯದಿಂದ ಮತ್ತೊಂದು ಟೀಂ ಬರುತ್ವೆ. ಮೂಡಿಗೆರೆ ತಾಲೂಕಿನ ಸಾರಗೋಡು ಮೀಸಲು ಅರಣ್ಯದಿಂದ ಮತ್ತೊಂದು ಹಿಂಡು ನಾಡಿನತ್ತ ಮುಖ ಮಾಡ್ತಿದೆ. ಕಾಫಿ-ಅಡಿಕೆ-ಮೆಣಸು, ಹೊಲ-ಗದ್ದೆಗಳಲ್ಲಿ ದಾಂದಲೆ ಮಾಡುತ್ತಿವೆ. ಆನೆ ಕಾಟಕ್ಕೆ ಕಾಫಿನಾಡಿನ ಜನ ಕಂಗಾಲಾಗಿದ್ದಾರೆ. ಕೃಷಿ ಭೂಮಿಯನ್ನ ನಾಶ ಮಾಡ್ತಿದ್ದು ಪಟಾಕಿ ಸಿಡಿಸಿ ಓಡಿಸೋ ಕೆಲಸವಷ್ಟೆ ನಡೆಯುತ್ತಿದೆ. ಪಟಾಕಿಗಿಂತ ಆನೆಗಳನ್ನ ಸೆರೆ ಹಿಡಿದು ಆನೆ ಶಿಬಿರದಲ್ಲಿಟ್ರೆ ಕಾಡಾನೆ ಭೀತಿಯಿಂದ ತಪ್ಪಿಸಬಹುದು ಎಂಬ ಅಗ್ರಹವೂ ಇತ್ತು. ಸರ್ಕಾರ ಇದೀಗ, ಜಿಲ್ಲೆಯ 18 ಕಡೆಗಳಲ್ಲಿ ಆನೆ ಶಿಬಿರ ಮಾಡೋಕೆ ಜಾಗ ಗುರುತಿಸಿದ್ದು, ಸರ್ಕಾರದ ಮಟ್ಟದಲ್ಲಿ ಅಂತಿಮವಾಗಿ ಮುತ್ತೋಡಿ ಅಭಯಾರಣ್ಯವೇ ಫೈನಲ್ ಎಂಬಂತಾಗಿದೆ. ಆದ್ರೆ, ಮುತ್ತೋಡಿ ಅರಣ್ಯ ವಲಯದಲ್ಲಿ ಆನೆ ಶಿಬಿರ ಮಾಡೋದಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕಾಫಿನಾಡಲ್ಲಿ ಅಪರೂಪದ ಹಾವು 'Bamboo pit viper' ಪತ್ತೆ, ಹಾವಿನ ವಿಶೇಷ ಏನು ಗೊತ್ತಾ?
ಆನೆಗಳಿಗೆಂದೇ ಇರೋ ಮುತ್ತೋಡಿಯಲ್ಲೇಕೆ ಆನೆ ಶಿಬಿರ :
ಇನ್ನು ಮುತ್ತೋಡಿಯಲ್ಲಿ ಆನೆ ಶಿಬಿರಕ್ಕೆ ವಿರೋಧ ಏಕೆಂದ್ರೆ, ಭದ್ರಾ ಹುಲಿ ಸಂರಕ್ಷಿತ ಅರಣ್ಯ ಸುಮಾರು 460 ಚದರ ಕಿಲೋ ಮೀಟರ್ ಇದೆ. ಇಲ್ಲಿ ಕಾಡಾನೆಗಳು ಇವೆ. ಇದರ ಮಧ್ಯೆ ಆನೆ ಶಿಬಿರ ಮಾಡಿದ್ರೆ ಪ್ರತ್ಯೇಕ ಜಾಗ ಮೀಸಲಿಡಬೇಕು. ಅದಕ್ಕೆ ಅಂತಾನೇ ಮಾವುತರನ್ನ ಇಡಬೇಕು. ಜೊತೆಗೆ ಹಲವರ ನೇಮಕವಾಗಬೇಕು. ಸಾಲದಕ್ಕೆ ಆನೆಗಳಿಗೆ ಆಹಾರವನ್ನು ಭದ್ರಾ ಅರಣ್ಯದಿಂದಲೇ ನೀಡಬೇಕು. ಈ ಜಾಗವೂ ಪ್ರವಾಸಿ ತಾಣವಾಗುತ್ತೆ. ಆಗ ಕಾಡಿನ ಸೌಂದರ್ಯ ಕ್ರಮೇಣ ನಶಿಸಿಹೋಗುತ್ತೆ. ಹೀಗಾಗಿ ಕಾಡಿನ ನಡುವೆ ಆನೆಗಳು ಸ್ವಚ್ಚಂದವಾಗಿ ಇರುವಾಗ ಇಲ್ಲಿ ಆನೆ ಶಿಬಿರ ಏಕೆ ಅಂತ ಪರಿಸರವಾದಿಗಳ ಪ್ರಶ್ನೆ. ಮೂಡಿಗೆರೆಯಲ್ಲಿ ಆನೆ ಹಾವಳಿ ಹೆಚ್ಚಿದೆ. ಮೂಡಿಗೆರೆಯ ಬೈರಾಪುರ ಗ್ರಾಮದಲ್ಲಿ ಆನೆ ಶಿಬಿರ ಮಾಡಿದ್ರೆ ಚಿಕ್ಕಮಗಳೂರು, ಸಖಲೇಶಪುರ, ಮೂಡಿಗೆರೆ ಎಲ್ಲಾ ಭಾಗಕ್ಕೂ ಅನುಕೂಲವಾಗಲಿದೆ ಅನ್ನೋದು ಪರಿಸರವಾದಿಗಳ ಮಾತು.
ಒಟ್ಟಾರೆ, ಪ್ರತಿ ಬಾರಿ ಆನೆ ದಾಳಿ ನಡೆದಾಗಲು ಜನ ಆನೆ ಕಾಟಕ್ಕೆ ಬೇಸತ್ತು ಆನೆಯನ್ನ ಸೆರೆ ಹಿಡೀರಿ ಅಂತಾರೆ. ಓಡಿಸ್ರಿ ಅಂತಾರೆ. ಆದ್ರೆ, ಸೆರೆ ಹಿಡಿಯೋಕೆ ಶಿಬಿರದಿಂದ ಸಾಕಿದ ಆನೆಗಳೇ ಬರಬೇಕು. ಅದು ಸರ್ಕಾರಕ್ಕೆ ಖರ್ಚು. ಆದ್ರೆ, ಇಲ್ಲೇ ಶಿಬಿರ ಇದ್ರೆ ಒಳ್ಳೆದು. ಆದ್ರೆ, ಎಲ್ಲಿ ಇರಬೇಕು ಅನ್ನೋದನ್ನ ತಜ್ಞರು ತೀರ್ಮಾನಿಸಬೇಕು. ಇದರ ನಡುವೇ ಸರ್ಕಾರವೇನೂ ಆನೆ ಶಿಬಿರವನ್ನ ಮುತ್ತೋಡಿ ಅಭಯಾರಣ್ಯದಲ್ಲಿ ಮಾಡೋ ಪ್ರಸ್ತಾವನೆ ಕಲಿಸಿದೆ. ಇದರ ಮಧ್ಯೆ ಆನೆ ಶಿಬಿರ ಮೂಡಿಗೆರೆಗೆ ಹೋಗ್ಲಿ ಅನ್ನೋ ಮಾತು ಇದೆ. ಚಿಕ್ಕಮಗಳೂರಿಗೆ ಬೇಡ್ವೇ ಬೇಡ, ಕಾಡಾನೆಗಳು ಬರದಂತೆ ಕ್ರಮವಹಿಸಿ ಅನ್ನೋರು ಇದ್ದಾರೆ. ಆದ್ರೆ, ಸರ್ಕಾರ ಏನ್ ಮಾಡುತ್ತೋ ಕಾದುನೋಡ್ಬೇಕು.