ಸರ್ಕಾರಿ ಉದ್ಯೋಗ ಸಿಗಲಿ ಎಂದು ಬಯಸುವ ಬಹಳಷ್ಟು ಜನರಿರುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡು ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ವಂಚಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಈತ ನಡೆಸಿದ್ದು ಸಾವಿರಾರು ರೂಪಾಯಿ ವಂಚನೆಯಲ್ಲ, ಕೆಲಸದ ಆಸೆ ಇಟ್ಟುಬಂದಿದ್ದವರಿಂದ 31 ಲಕ್ಷ ವಂಚಿಸಿದ್ದಾನೆ.
ಬೆಳಗಾವಿ(ಡಿ.17): ಸರ್ಕಾರಿ ಉದ್ಯೋಗ ಸಿಗಲಿ ಎಂದು ಬಯಸುವ ಬಹಳಷ್ಟು ಜನರಿರುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡು ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ವಂಚಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಸರ್ಕಾರಿ ಉದ್ಯೋಗ ಕೊಡಿಸುವುದಾಗಿ 31.5 ಲಕ್ಷ ರೂ. ವಂಚನೆ ಆರೋಪ ಕೇಳಿ ಬಂದಿದ್ದು, ನ್ಯಾಯಕ್ಕಾಗಿ ಆಗ್ರಹಿಸಿ ಬೆಳಗಾವಿ ಐಜಿಪಿ ಕಚೇರಿ ಬಳಿ ತಂದೆ, ಮಗ ಧರಣಿ ಮಾಡಿದ್ದಾರೆ. ನ್ಯಾಯ ಕೊಡಿಸದಿದ್ದರೆ ದಯಾಮರಣ ನೀಡುವಂತೆ ತಂದೆ ಮಗ ಆಗ್ರಹಿಸಿದ್ದಾರೆ.
undefined
BJPಯಿಂದ 50 ಕೋಟಿ, ಮಂತ್ರಿಗಿರಿಯ ಆಫರ್ ಬಂದಿತ್ತು ಎಂದ JDS ಶಾಸಕ
ಪಿಎಸ್ಐ, ಸಬ್ ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಧಾರವಾಡ ಜಿಲ್ಲೆ ಅಳ್ನಾವರ್ ನಿವಾಸಿ ಸಂಗಪ್ಪ ರಾಚಪ್ಪ ಉಳವಿ ಸೇರಿ ಆರು ಜನರಿಂದ ವಂಚನೆ ಆರೋಪ ಕೇಳಿ ಬಂದಿದೆ.
3 ವರ್ಷ ಹಿಂದೆ ಯಮನಪ್ಪ ಮಕ್ಕಳಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ 52.5 ಲಕ್ಷ ಹಣ ಪಡೆದ ಆರೋಪ ಕೇಳಿ ಬಂದಿದ್ದು, ಯಮನಪ್ಪರಿಂದ ಸಂಗಪ್ಪ ಉಳವಿ 52.5ಲಕ್ಷ ರೂಪಾಯಿ ಹಣ ಪಡೆದಿದ್ದರು ಎನ್ನಲಾಗಿದೆ. ಯಮನಪ್ಪ ಮಕ್ಕಳಾದ ಭರತೇಶ್, ಅನಿಲ್‌ಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ವಂಚನೆ ಮಾಡಲಾಗಿದೆ.
ಮುಧೋಳದಿಂದ ಬೆಳಗಾವಿ: ಹಸುಳೆ ಜೀವ ರಕ್ಷಣೆಗೆ ಝೀರೋ ಟ್ರಾಫಿಕ್..
ಯಮನಪ್ಪ ಮಕ್ಕಳಾದ ಭರತೇಶ್‌ಗೆ ಪಿಎಸ್ಐ, ಅನಿಲ್‌ಗೆ ಸಬ್‌ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿ, ಒಟ್ಟು 52.5 ಲಕ್ಷ ಕೊಟ್ಟಿದ್ದು 21.5 ಲಕ್ಷ ವಾಪಸ್ ನೀಡಿದ್ದು, 31 ಲಕ್ಷ ಹಣ ನೀಡಲು ಬಾಕಿ ಇದೆ. ಆದರೆ ಉಳಿದ ಹಣ ನೀಡದೆ ಸತಾಯಿಸುತ್ತಿದ್ದಾರೆ ಎಂದು ದೂರಲಾಗಿದೆ.
ಆರೋಪಿಗಳ ವಿರುದ್ಧ ಸಿಇಎನ್ ಕ್ರೈಮ್ ಬ್ರ್ಯಾಂಚ್ ಬಾಗಲಕೋಟೆಯಲ್ಲಿ ಕೇಸ್ ದಾಖಲಾಗಿದೆ. ಆದರೂ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ಕೈಗೊಳ್ಳುತ್ತಿಲ್ಲ ಎಂದು ವಂಚಿತರು ಆರೋಪಿಸಿದ್ದಾರೆ. ಬಾಗಲಕೋಟೆಯ ಪೊಲೀಸ್ ಇಲಾಖೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆಂದು ಯಮನಪ್ಪ ಬಸಪ್ಪ ಧೂಪದಾಳ, ಮಗ ಭರತೇಶ್ ಆರೋಪಿಸಿದ್ದಾರೆ.
ಅಕ್ರಮ ಸಾರಾಯಿ ಮಾರಾಟ: ಪೊಲೀಸರಿಗೆ ಮಾಹಿತಿ ನೀಡಿದ್ದ ಯುವಕನ ಬರ್ಬರ ಹತ್ಯೆ!