
ಬೆಂಗಳೂರು [ಡಿ.17]: ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್ ದೊರೆಸ್ವಾಮಿ ಅವರಿಗೆ ಪತ್ನಿ ವಿಯೋಗವಾಗಿದೆ.
ಶತಾಯುಷಿಯಾದ ದೊರೆಸ್ವಾಮಿ ಅವರ ಪತ್ನಿ ಕಮಲಮ್ಮ [89] ಇಂದು ಬೆಳಗ್ಗೆ 11.15ಕ್ಕೆ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಕಮಲಮ್ಮ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ನಿಧನರಾಗಿದ್ದಾರೆ.
ದೊರೆಸ್ವಾಮಿಯೊಂದಿಗೆ ಕತ್ತಲ ಕೊನೆಯಿಂದ ಬೆಳಕಿನ ಮನೆಯೆಡೆಗೆ...
ಅವರ ಪಾರ್ಥೀವ ಶರೀರವನ್ನು ದಾನ ಮಾಡಲು ದೊರೆಸ್ವಾಮಿ ಕುಟುಂಬ ನಿರ್ಧಾರ ಮಾಡಿದ್ದು, ಕಿಮ್ಸ್ ಆಸ್ಪತ್ರೆಗೆ ನೀಡಲಾಗುತ್ತಿದೆ.
ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅವರು ಶತಾಯುಷಿಗಳಾಗಿದ್ದು, ಅವರ ಪತ್ನಿ ಇದೀಗ ಅವರನ್ನು ಅಗಲಿದ್ದಾರೆ.