ಕಾಡಾನೆ ಸಾವು: ವ್ಯಕ್ತಿ ಬಂಧನ

By Web DeskFirst Published 12, Sep 2018, 9:09 PM IST
Highlights

ಡಿಆರ್ ಎಫ್‌ಓ ನಿಂಗಪ್ಪ ಮತ್ತು ಸಿಬ್ಬಂದಿಯವರು ತಾಲೂಕು ಹೆಡಿಯಾಲ ಎಸ್‌ಟಿಪಿಎಫ್ ಅವರು ಜಂಟಿ ಕಾರ್ಯಾಚರಣೆ ನಡೆಸಿ ದೊಡ್ಡಬರಗಿ ಗ್ರಾಮದ ಗೋಪಾಲ ಬಿನ್ ರಾಮಸಂಜು ನಾಯ್ಡು ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಎಚ್.ಡಿ. ಕೋಟೆ(ಸೆ.12): ಹೆಡಿಯಾಲ ವಲಯ ಪ್ರದೇಶದಲ್ಲಿ ಆ. 12ರಂದು ಕಾಡು ಆನೆಯೊಂದು ಮೃತಪಟ್ಟಿದ್ದು, ಈ ಸಂಬಂಧವಾಗಿ ವ್ಯಕ್ತಿಯೊಬ್ಬನ್ನು ಬಂಧಿಸಿದ್ದಾರೆ. ಡಿಆರ್ ಎಫ್‌ಓ ನಿಂಗಪ್ಪ ಮತ್ತು ಸಿಬ್ಬಂದಿಯವರು ತಾಲೂಕು ಹೆಡಿಯಾಲ ಎಸ್‌ಟಿಪಿಎಫ್ ಅವರು ಜಂಟಿ ಕಾರ್ಯಾಚರಣೆ ನಡೆಸಿ ದೊಡ್ಡಬರಗಿ ಗ್ರಾಮದ ಗೋಪಾಲ ಬಿನ್ ರಾಮಸಂಜು ನಾಯ್ಡು ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಹುಲಿ ದಾಳಿಗೆ ಹಸು ಬಲಿ
ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಸಿದ್ದಾಪುರ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ಜರುಗಿದೆ. ಗ್ರಾಮದ ಶಿವು ಎಂಬುವವರ ಹಸುವನ್ನು ಹುಲಿ ತಿಂದಿದ್ದು, ಕಳೆದ ದಿನಗಳಿಂದ ಈ ಭಾಗದಲ್ಲಿ ಹುಲಿಯು ಪ್ರತ್ಯೇಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯಿಂದ ಹುಲಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಅಂತರಸಂತೆ ಎಸಿಎಫ್ ತಿಳಿಸಿದ್ದಾರೆ.

(ಸಾಂದರ್ಭಿಕ ಚಿತ್ರ)

Last Updated 19, Sep 2018, 9:24 AM IST