ತುಮಕೂರು: ಕಾಲಿನಿಂದ ದೇವರ ವಿಗ್ರಹ ತುಳಿದು ವಿಕೃತಿ ಮೆರೆದವನ ಬಂಧನ

Kannadaprabha News   | Asianet News
Published : Sep 22, 2021, 10:43 AM ISTUpdated : Sep 22, 2021, 10:53 AM IST
ತುಮಕೂರು: ಕಾಲಿನಿಂದ ದೇವರ ವಿಗ್ರಹ ತುಳಿದು ವಿಕೃತಿ ಮೆರೆದವನ ಬಂಧನ

ಸಾರಾಂಶ

*   ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆ *   ದಬ್ಬೇಘಟ್ಟ ಗ್ರಾಮದ ಶ್ರೀಕಾಂತ ಬಂಧಿತ ಯುವಕ  *   ಸುತ್ತಮುತ್ತಲ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ

ಮಧುಗಿರಿ(ಸೆ.22):  ಯುವಕನೊಬ್ಬ ದೇವಸ್ಥಾನವೊಂದರ ಮೂಲವಿಗ್ರಹಕ್ಕೆ ಚಪ್ಪಲಿ ಕಾಲಿನಿಂದ ತುಳಿದು ವಿಕೃತವಾಗಿ ವರ್ತಿಸಿ ಆ ವಿಡಿಯೋ ಹರಿಬಿಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. 

ಇಲ್ಲಿನ ಬೆಟ್ಟದ ಮೇಲಿನ ಕೋಟೆಕಲ್ಲಪ್ಪ ದೇವಸ್ಥಾನ ಪ್ರವೇಶಿಸಿದ್ದ ದಬ್ಬೇಘಟ್ಟ ಗ್ರಾಮದ ಶ್ರೀಕಾಂತ(23) ಎಂಬ ಯುವಕ ಈ ಕೃತ್ಯ ಎಸಗಿದ್ದು ಸುತ್ತಮುತ್ತಲ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. 

ತುಮಕೂರು; ದೇವರ ಮೂರ್ತಿ ಮೇಲೆ ಚಪ್ಪಲಿ ಕಾಲಿಟ್ಟು ಯುವಕನ ವಿಕೃತಿ

ಆರೋಪಿ ಶ್ರೀಕಾಂತನನ್ನು ಪೊಲೀಸರು ಬಂಧಿಸಲಾಗಿದ್ದು ಆತ ಮಾನಸಿಕ ಅಸ್ವಸ್ಥ ಎನ್ನಲಾಗಿದೆ.
 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ