ಕೊರೋನಾ ಆತಂಕ: ಸರ್ಕಾರಿ ಆದೇಶಕ್ಕೆ ಕಿಮ್ಮತೇ ಇಲ್ವಾ? ಮಾಲ್‌ ಓಪನ್

Kannadaprabha News   | Asianet News
Published : Mar 21, 2020, 08:18 AM ISTUpdated : Mar 21, 2020, 08:20 AM IST
ಕೊರೋನಾ ಆತಂಕ: ಸರ್ಕಾರಿ ಆದೇಶಕ್ಕೆ ಕಿಮ್ಮತೇ ಇಲ್ವಾ? ಮಾಲ್‌ ಓಪನ್

ಸಾರಾಂಶ

ಸರ್ಕಾರಿ ಆದೇಶ ಉಲ್ಲಂಘಿಸಿ ತೆರೆದಿದ್ದ ಮಾಲ್‌|ಮಾಲ್‌ನ ಆಡಳಿತ ಮಂಡಳಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಆತಂಕದಲ್ಲಿಯೇ ಕೆಲಸಕ್ಕೆ ಆಗಮಿಸಿದ್ದ ಮಾಲ್ ಸಿಬ್ಬಂದಿ|

ಬೆಂಗಳೂರು[ಮಾ. 21]: ಸರ್ಕಾರ ಹಾಗೂ ಬಿಬಿಎಂಪಿಯ ಆದೇಶ ಗಾಳಿಗೆ ತೂರಿ ಕತ್ರಿಗುಪ್ಪೆಯ ಮಾಲ್‌ವೊಂದು ವ್ಯಾಪಾರ ನಡೆಸಿದ್ದು ವಿವಾದಕ್ಕೆ ಕಾರಣವಾಗಿದೆ. ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರ ಶಾಪಿಂಗ್‌ ಮಾಲ್‌ ಬಂದ್‌ಗೆ ಆದೇಶಿಸಿದೆ. ಆದರೆ, ಈ ಆದೇಶವನ್ನು ಗಾಳಿಗೆ ತೂರಿ ಕತ್ರಿಗುಪ್ಪೆಯ ಮಾಲ್‌ವೊಂದು ಶುಕ್ರವಾರ ವ್ಯಾಪಾರ ನಡೆಸಿದೆ.

ಕೊರೋ​ನಾ​ತಂಕ: 15 ನಿಮಿ​ಷ​ಕ್ಕಿಂತ ಹೆಚ್ಚು ಹೊತ್ತು ನಮಾಜ್ ಮಾಡುವಂತಿಲ್ಲ

ಇನ್ನು ಮುಖ್ಯಮಂತ್ರಿಯ ಸೂಚನೆಯ ಮೇರೆಗೆ ಬಿಬಿಎಂಪಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ತೊಂದರೆ ಉಂಟಾಗಲಿದೆ ಎಂಬ ಕಾರಣಕ್ಕೆ ಸೂಪರ್‌ ಮಾರ್ಕೆಟ್‌ಗಳನ್ನು ತೆರೆಯುವುದಕ್ಕೆ ಅವಕಾಶ ನೀಡಿತ್ತು. ಇದನ್ನು ದುರ್ಬಳಕೆ ಮಾಡಿಕೊಂಡಿದೆ. ಹವಾನಿಯಂತ್ರಿತ ಕೊಠಡಿಯಲ್ಲಿ ಹೆಚ್ಚು ಕೊರೋನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರಲಿದೆ ಎಂದು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಸಾಕಷ್ಟು ಜಾಗೃತಿ ಮೂಡಿಸದರೂ ಈ ಯಾವುದಕ್ಕೂ ಕ್ಯಾರೇ ಎನ್ನದೇ ಎಸಿ ಹಾಕಿಕೊಂಡು ಮಳಿಗೆ ತೆರೆದಿತ್ತು. 

ಮಹಾಮಾರಿ ಕೊರೋನಾ ಭೀತಿ: ಲಾಲ್‌ಬಾಗ್‌ ಪ್ರವೇಶಕ್ಕೆ ನೋ ಎಂಟ್ರಿ

ಇನ್ನು ಮಾಲ್‌ನ ಆಡಳಿತ ಮಂಡಳಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಆತಂಕದಲ್ಲಿ ಮಾಲ್‌ನ ಸಿಬ್ಬಂದಿ ಕೆಲಸಕ್ಕೆ ಆಗಮಿಸಿದ್ದರು. ಈ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ಮಾಲ್‌ ಬಂದ್‌ ಮಾಡಿದೆ.
 

PREV
click me!

Recommended Stories

ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!