ಮಹಾಮಾರಿ ಕೊರೋನಾ ಭೀತಿ: ಲಾಲ್‌ಬಾಗ್‌ ಪ್ರವೇಶಕ್ಕೆ ನೋ ಎಂಟ್ರಿ

By Kannadaprabha NewsFirst Published Mar 21, 2020, 8:00 AM IST
Highlights

ಲಾಲ್‌ಬಾಗ್‌ಗೆ ವಾಯು ವಿಹಾರಿಗಳು ಮತ್ತು ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ|ಕೊರೋನಾ ವೈರಸ್‌ ಹರಡದಂತೆ ಮುನ್ನೆಚ್ಚರಿಕೆ ಕ್ರಮ|. ಸರ್ಕಾರದ ಮುಂದಿನ ಆದೇಶದವರೆಗೆ ಲಾಲ್‌ಬಾಗ್‌ಗೆ ಪ್ರವೇಶ ನಿಷೇಧ|

ಬೆಂಗಳೂರು[ಮಾ.21]: ಕೊರೋನಾ ವೈರಸ್‌ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಸ್ಯಕಾಶಿ ಲಾಲ್‌ಬಾಗ್‌ನ ಶನಿವಾರದಿಂದ ವಾಯು ವಿಹಾರಿಗಳು ಮತ್ತು ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ಲಾಲ್‌ಬಾಗ್‌ಗೆ ವೀಕ್ಷಕರಿಗೆ, ವಾಯು ವಿಹಾರಿಗಳ ಪ್ರವೇಶವನ್ನು ನಿಷೇಧಿಸಿ ಅದೇಶಿಸಲಾಗಿದೆ.

'ಭಾನುವಾರ ಇಡೀ ದೇಶಕ್ಕೇ ಮದ್ದು ಸಿಂಪಡಿಸ್ತಾರಂತೆ ಮೋದಿ'..!

ಶುಕ್ರವಾರ ಮಧ್ಯರಾತ್ರಿಯ ವೇಳೆಗೆ ಲಾಲ್‌ಬಾಗ್‌ನ ಎಲ್ಲ ಪ್ರವೇಶ ದ್ವಾರಗಳನ್ನು ಮುಚ್ಚಲಾಗುವುದು. ಈ ಸಂಬಂಧ ಸೂಚನಾ ಫಲಕಗಳನ್ನು ದ್ವಾರಗಳಲ್ಲಿ ಅಳವಡಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಬಿ.ವೆಂಕಟೇಶ್‌ ತಿಳಿಸಿದ್ದಾರೆ. 

ಕೊರೋನಾ: ರಾಜ್ಯದ ಮೊದಲ ವ್ಯಕ್ತಿ ಗುಣಮುಖ, ಡಿಸ್ಚಾರ್ಜ್!

ಲಾಲ್‌ಬಾಗ್‌ಗೆ ನಿತ್ಯ ಸುಮಾರು 7-10 ಸಾವಿರ ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಲಾಲ್‌ ಬಾಗ್‌ ಪ್ರವೇಶವನ್ನು ರದ್ದು ಪಡಿಸುವಂತೆ ಶುಕ್ರವಾರ ರಾತ್ರಿ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದರಿಂದ ತಕ್ಷಣ ಕಾರ್ಯಪ್ರವೃತ್ತರಾಗಿದ್ದೇವೆ. ಸರ್ಕಾರದ ಮುಂದಿನ ಆದೇಶದವರೆಗೆ ಲಾಲ್‌ಬಾಗ್‌ಗೆ ಪ್ರವೇಶವನ್ನು ನಿಷೇಧಿಸಲಾಗುವುದು ಎಂದು ಅವರು ವಿವರಿಸಿದ್ದಾರೆ. 
 

click me!