Suicide Case: ಈಶ್ವರಪ್ಪ ಅಂಥವರಲ್ಲ.. ಅಂಥವರಲ್ಲ..: ಮಖಣಾಪೂರ ಸ್ವಾಮೀಜಿ

By Govindaraj SFirst Published Apr 13, 2022, 8:32 PM IST
Highlights

ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್‌.ಈಶ್ವರಪ್ಪನವರ ಹೆಸರು ತಳಕು ಹಾಕಿಕೊಂಡಿದೆ. ಒಂದು ಕಡೆಗೆ ಪ್ರತಿಪಕ್ಷಗಳು ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸ್ತಿದ್ದಾರೆ. ಪ್ರತಿಭಟನೆಗಳನ್ನು ನಡೆಸ್ತಿದ್ದಾರೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಸ್ವಾಮೀಜಿಗಳೊಬ್ಬರು ಈಶ್ವರಪ್ಪ ಪರವಾಗಿ ಬ್ಯಾಟಿಂಗ್‌ ಮಾಡಿದ್ದಾರೆ. 

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ವಿಜಯಪುರ

ವಿಜಯಪುರ (ಏ.13): ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ (Santhosh Patil Suicide Case) ಸಚಿವ ಕೆ.ಎಸ್‌.ಈಶ್ವರಪ್ಪನವರ (KS Eshwarappa) ಹೆಸರು ತಳಕು ಹಾಕಿಕೊಂಡಿದೆ. ಒಂದು ಕಡೆಗೆ ಪ್ರತಿಪಕ್ಷಗಳು ಈಶ್ವರಪ್ಪ ರಾಜೀನಾಮೆಗೆ (Resignation) ಒತ್ತಾಯಿಸ್ತಿದ್ದಾರೆ. ಪ್ರತಿಭಟನೆಗಳನ್ನು ನಡೆಸ್ತಿದ್ದಾರೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಸ್ವಾಮೀಜಿಗಳೊಬ್ಬರು ಈಶ್ವರಪ್ಪ ಪರವಾಗಿ ಬ್ಯಾಟಿಂಗ್‌ ಮಾಡಿದ್ದಾರೆ. ಈಶ್ವರಪ್ಪ ಸಾಹೇಬರು ಅಂಥವರಲ್ಲ.. ಅಂಥವರಲ್ಲ.. ಎನ್ನುವ ಮೂಲಕ ಈಶ್ವರಪ್ಪ ಪರ ನಿಂತಿದ್ದಾರೆ.

Latest Videos

ಈಶ್ವರಪ್ಪ ಪರ ಮಖಣಾಪೂರ ಸ್ವಾಮೀಜಿ: ವಿಜಯಪುರ ಜಿಲ್ಲೆಯ ಮಖಣಾಪೂರದ ಹಾಲುಮತ ಪೀಠದ ಸೋಮೇಶ್ವರ ಸ್ವಾಮೀಜಿ (Makhanapura Someshwara Swamiji) ಈಶ್ವರಪ್ಪ ಪರ ಮಾತನಾಡಿದ್ದಾರೆ. ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸೋಮೇಶ್ವರ ಸ್ವಾಮೀಜಿಗಳು ಈಶ್ವರಪ್ಪ ಸ್ವಾಮೀಜಿಗಳು ಅಂಥವರಲ್ಲ.. ಅಂಥವರಲ್ಲ.. ಎಂದಿದ್ದಾರೆ. ಈಶ್ವರಪ್ಪ 40 ವರ್ಷಗಳ ಕಾಲ ರಾಜಕೀಯದಲ್ಲಿದ್ದವರು. ಅವರು ತಪ್ಪು ಮಾಡೋಕೆ ಸಾಧ್ಯವಿಲ್ಲ. ಇದು ಅವರ ವಿರುದ್ಧ ನಡೆದಿರೋ ವ್ಯವಸ್ಥಿಯ ಷಡ್ಯಂತ್ರ, ಇಂಥ ಷಡ್ಯಂತ್ರ ನಡೆಯುತ್ತೆ ಅನ್ನೋದನ್ನ ಕನಸುಮನಸ್ಸಿನಲ್ಲು ಅಂದುಕೊಂಡಿರಲಿಲ್ಲ ಎಂದಿದ್ದಾರೆ.

Vijayapura: ಧರ್ಮ ಸಂಘರ್ಷದ ಮಧ್ಯೆ ಇಲ್ಲಿನ ಹಿಂದೂ ದೇವರಿಗೆ ಮುಸ್ಲಿಂ ಭಕ್ತರೇ ಬೇಕು..!

ಜೀವ ಇದ್ದು ಹೋರಾಡಬೇಕಿತ್ತು: ಸಂತೋಷ ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು. ಜೀವಂತವಾಗಿದ್ದು ಹೋರಾಟ ನಡೆಸಬೇಕಿತ್ತು ಎಂದಿದ್ದಾರೆ. ಜೀವಂತವಾಗಿದ್ದರೇ ತನಗಾದ ಅನ್ಯಾಯವನ್ನ ಹೇಳಿಕೊಳ್ತಿದ್ದ, ತಪ್ಪು-ಒಪ್ಪು ಗೊತ್ತಾಗ್ತಿತ್ತು. ಸತ್ತ ವ್ಯಕ್ತಿಯ ಎದುರು ಸಾವಿರ ಪ್ರಶ್ನೆಗಳು ಎದ್ದಿವೆ. ಇದರಲ್ಲಿ ಯಾರ್ಯಾರೋ ತಮ್ಮ ಬೇಳೆ ಬೇಯಿಸಿಕೊಳ್ತಾರೆ ಎಂದು ಸ್ವಾಮೀಜಿ ಪರೋಕ್ಷವಾಗಿ ವಿಪಕ್ಷಗಳ ವಿರುದ್ಧ ಬೊಟ್ಟು ಮಾಡಿದರು.

ಆ ಜಿಲ್ಲೆಯಲ್ಯಾಕೆ ಆತ್ಮಹತ್ಯೆ? ಸ್ವಾಮೀಜಿ ಅನುಮಾನ: ಈಶ್ವರಪ್ಪ ಪರ ಮಾತನಾಡಿರೋ ಸೋಮೇಶ್ವರ ಸ್ವಾಮೀಜಿ ಸಂತೋಷ ಆತ್ಮಹತ್ಯೆಯ ಬಗ್ಗೆ ಅನುಮಾನ ವ್ಯಕ್ತ ಪಡೆಸಿದ್ದಾರೆ. ಆತ ನಮ್ಮ ನೆರೆಯ ಜಿಲ್ಲೆ ಬೆಳಗಾವಿಯ ಹುಡುಗ ಸುಡೈಡ್‌ ಮಾಡಿಕೊಳ್ಳೊದೆ ಆಗಿದ್ದರೆ ತಮ್ಮ ಜಿಲ್ಲೆಯಲ್ಲಿ ಮಾಡಿಕೊಳ್ಳಬೇಕಿತ್ತು. ಅನ್ಯ ಜಿಲ್ಲೆಯಲ್ಲಿ ಮಾಡಿಕೊಂಡಿದ್ದಾನೆ, ಕಾಗೆ ಕೂರೋದಕ್ಕು ಟೊಂಗೆ ಮುರಿಯೋದಕ್ಕು ಅನ್ನೋಹಾಗೆ ಇದು ಈಶ್ವರಪ್ಪ ತಲೆಗೆ ಬಂದಿದೆ ಎಂದಿದ್ದಾರೆ.

Soldier Died: ವರ್ಷದ ಹಿಂದೆ ಮದುವೆಯಾಗಿದ್ದ ವಿಜಯಪುರದ ಯೋಧ ಹುತಾತ್ಮ

ಸಂತೋಷ ಸಾವಿಗೆ ಹೊಸ ಟ್ವಿಸ್ಟ್‌ ಕೊಟ್ಟ ಹಾಲುಮತ ಮುಖಂಡ: ಸಂತೋಷ ಆತ್ಮಹತ್ಯೆ ಈಶ್ವರಪ್ಪ ಮೇಲೆ ಬಂದಿರೋ ಆರೋಪಕ್ಕೆ ವಿಜಯಪುರ ಜಿಲ್ಲೆಯ ಕುರುಬ ಸಮಾಯದ ಮುಖಂಡ ರಾಜು ಬಿರಾದಾರ ಹೊಸ ಟ್ವಿಸ್ಟ್‌ ನೀಡಿದ್ದಾರೆ. ಡಿಕೆಶಿ ವಿರುದ್ಧ ಷಡ್ಯಂತ್ರದ ಆರೋಪ ಮಾಡಿದ್ದಾರೆ. ಹಿಂದೆ ಈಶ್ವರಪ್ಪ ಹಾಗೂ ಡಿಕೆಶಿ ನಡುವೆ ವಾಗ್ವಾದ ವಾದಾಗ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್‌ ಮಾಧ್ಯಮಗಳ ಎದುರು ಈಶ್ವರಪ್ಪರನ್ನ ನೀಡಕೊಳ್ಳೊದಾಗಿ ಹೇಳಿದ್ದರು. ಈಶ್ವರಪ್ಪ ನಮ್ಮ ಅಪ್ಪನ ಬಗ್ಗೆ ಮಾತನಾಡಿದ್ದಾರೆ. ಈಶ್ವರಪ್ಪದು ಸೆಟ್ಲಮೆಂಡ್‌ ಮಾಡ್ತೀನಿ ಎಂದಿದ್ದರು. ಸಧ್ಯ ಈಶ್ವರಪ್ಪರ ಮೇಲೆ ಬಂದಿರೋ ಆರೋಪದ ಹಿಂದೆ ಡಿಕೆಶಿ ಷಡ್ಯಂತ್ರ ಇದೆ ಎನ್ನುವ ಅನುಮಾನ ಬರ್ತಿದೆ ಎಂದಿದ್ದಾರೆ.

click me!