Chikkaballapur: ಬೇಸಿಗೆ ಆರಂಭದ ಬೆನ್ನಲೇ ಹಾಲು ಉತ್ಪಾದನೆ ಕುಸಿತ

Published : Apr 13, 2022, 06:39 PM IST
Chikkaballapur: ಬೇಸಿಗೆ ಆರಂಭದ ಬೆನ್ನಲೇ ಹಾಲು ಉತ್ಪಾದನೆ ಕುಸಿತ

ಸಾರಾಂಶ

ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಲಕ್ಷಾಂತರ ರೈತಾಪಿ ಜನರ ಬದುಕಿಗೆ ಆಧಾರವಾಗಿರುವ ಹೈನೋಮದ್ಯಕ್ಕೆ ಈಗ ಬೇಸಿಗೆಯ ಗರ ಬಡಿದಿದ್ದು ಬಿಸಿಲಿನ ಪರಿಣಾಮ ಎರಡು ಜಿಲ್ಲೆಗಳಲ್ಲಿ ನಿತ್ಯ ಗಣನೀಯ ಪ್ರಮಾಣದಲ್ಲಿ ಹಾಲು ಉತ್ಪಾದನೆ ಕುಸಿಯುವ ಮೂಲಕ ರೈತರಿಗೆ ಆರ್ಥಿಕ ಹೊಡೆತ ಬೀಳುವಂತಾಗಿದೆ. 

ವಿಶೇಷ ವರದಿ

ಚಿಕ್ಕಬಳ್ಳಾಪುರ (ಏ.13): ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಲಕ್ಷಾಂತರ ರೈತಾಪಿ (Farmers) ಜನರ ಬದುಕಿಗೆ ಆಧಾರವಾಗಿರುವ ಹೈನೋಮದ್ಯಕ್ಕೆ ಈಗ ಬೇಸಿಗೆಯ ಗರ ಬಡಿದಿದ್ದು ಬಿಸಿಲಿನ (Summer) ಪರಿಣಾಮ ಎರಡು ಜಿಲ್ಲೆಗಳಲ್ಲಿ ನಿತ್ಯ ಗಣನೀಯ ಪ್ರಮಾಣದಲ್ಲಿ ಹಾಲು (Milk) ಉತ್ಪಾದನೆ ಕುಸಿಯುವ ಮೂಲಕ ರೈತರಿಗೆ ಆರ್ಥಿಕ ಹೊಡೆತ ಬೀಳುವಂತಾಗಿದೆ. ಎರಡು ಜಿಲ್ಲೆಗಳಲ್ಲಿ ದಿನನಿತ್ಯ 11 ರಿಂದ 12 ಲಕ್ಷ ಲೀಟರ್‌ ಹಾಲು ಉತ್ಪಾದನೆ ಆಗುತ್ತಿತ್ತು. ಆದರೆ ಕೆಲವು ವಾರಗಳಿಂದ ಎರಡು ಜಿಲ್ಲೆಗಳಲ್ಲಿ ಸರಾಸರಿ ಉತ್ಪಾದನೆಯಲ್ಲಿ ಬರೋಬ್ಬರಿ 2 ಲಕ್ಷ ಲೀಟರ್‌ನಷ್ಟು ಹಾಲು ಉತ್ಪಾದನೆ ಕಡಿಮೆ ಆಗಿರುವುದು ಎದ್ದು ಕಾಣುತ್ತಿದೆ.

ರಾಸುಗಳ ವ್ಯಾಪಾಕ ಮಾರಾಟ: ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹಾಲು ಉತ್ಪಾದನೆ ಕಂಡರೂ ಲಕ್ಷ ಲೀಟರ್‌ಗಟ್ಟಲೇ ಕುಸಿಯುವುದಿಲ್ಲ. ಆದರೆ ಬೇಸಿಗೆಯಲ್ಲಿ ಹಸುಗಳ ಸಾಕುವ ಹಾಗೂ ನಿರ್ವಹಣೆ ಸಮಸ್ಯೆಗೆ ರೈತರು ತಮ್ಮ ರಾಸುಗಳನ್ನು ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಮಾರಾಟ ಮಾಡುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಹಾಲು ಉತ್ಪಾದನೆ ಕುಸಿತಕ್ಕೆ ಕಾರಣವಾಗಿದ್ದು ಕೋಚಿಮುಲ್‌ನ್ನು ಚಿಂತೆಗೀಡು ಮಾಡಿದೆ. ದಿನದಿಂದ ದಿನಕ್ಕೆ ಹೈನೋದ್ಯಮ ಕೂಡ ಲಾಭದಾಯಕವಲ್ಲ ಎನ್ನುವ ಸ್ಥಿತಿಗೆ ಏರಿಕೆ ಆಗುತ್ತಿರುವ ಪಶು ಆಹಾರ, ಸಮರ್ಪಕವಾಗಿ ಗುಣಮಟ್ಟದ ಕೊರತೆ, ಉತ್ತಮ ಬೆಲೆ ಸಿಗದ ಬಗ್ಗೆ ಬೇಸರಗೊಂಡ ರೈತರು ಹೈನೋದ್ಯಮದಿಂದ ದೂರ ಸರಿಯುತ್ತಿರುವ ಕಾರಣಕ್ಕೆ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ 2 ಲಕ್ಷ ಲೀಟರ್‌ನಷ್ಟುಹಾಲು ಉತ್ಪಾದನೆ ಕುಸಿತ ಕಂಡಿರುವುದು ಕಂಡು ಬಂದಿದೆ.

Chikkaballapur: ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಸಿ ಲವರ್​ ಜತೆ ನಿರ್ಜನ ಪ್ರದೇಶಕ್ಕೆ ತೆರಳಿದ ಹುಡುಗಿಗೆ ಕಾದಿತ್ತು ಶಾಕ್..​!

ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಕನಿಷ್ಠ 11 ಲಕ್ಷ ಲೀಟರ್‌ ಪ್ರತಿನಿತ್ಯ ಉತ್ಪಾದನೆ ಆಗಬೇಕಿತ್ತು. ಆದರೆ ಸದ್ಯ 8.50 ರಿಂದ 9 ಲಕ್ಷ ಲೀಟರ್‌ ಮಾತ್ರ ನಿತ್ಯ ಉತ್ಪಾದನೆ ಆಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಸರಾಸರಿ 1 ಲಕ್ಷ ಲೀಟರ್‌ ಹಾಗೂ ಚಿಕ್ಕಬಳ್ಳಾಪುರದಲ್ಲಿ 1 ಲಕ್ಷ ಲೀಟರ್‌ ಹಾಲು ಕುಸಿತ ಕಂಡಿದ್ದು ಸದ್ಯ ನಿತ್ಯ ಎರಡು ಜಿಲ್ಲೆಗಳಿಂದ ಮಾರುಕಟ್ಟೆಗೆ 9 ಲಕ್ಷ ಲೀಟರ್‌ ಹಾಲು ಮಾತ್ರ ಒಕ್ಕೂಟಕ್ಕೆ ಬರುತ್ತಿದೆ. ಕೋಲಾರದಿಂದ ಒಟ್ಟು 5 ರಿಂದ 5.30 ಲಕ್ಷ ಲೀಟರ್‌ ಹಾಲು ಬರುತ್ತಿದ್ದರೆ ಚಿಕ್ಕಬಳ್ಳಾಪುರದಿಂದ 4 ರಿಂದ 4.50 ಲಕ್ಷ ಲೀಟರ್‌ ಹಾಲು ಮಾತ್ರ ಸರಬರಾಜು ಆಗುತ್ತಿದೆ.

ಉತ್ಪಾದನೆ ಕುಸಿದಾಗ ದರ ಹೆಚ್ಚಿಸಿದ್ರು!: ಕೊರೋನಾ ನೆಪವೊಡ್ಡಿ ಒಕ್ಕೂಟಕ್ಕೆ ಆರ್ಥಿಕ ನಷ್ಠ ಉಂಟಾಗಿದೆಯೆಂದು ಹೇಳಿ ಕೋಚಿಮುಲ್‌ ಒಕ್ಕೂಟ 28 ರು, ಇದ್ದ ಪ್ರತಿ ಲೀಟರ್‌ ಹಾಲಿನ ಬೆಲೆಯನ್ನು 24ಕ್ಕೆ ಇಳಿಸಿದರು. ಆದರೆ ಈಗ ಹಾಲಿನ ಉತ್ಪಾದನೆ ಕುಸಿತ ಕಂಡ ತಕ್ಷಣ ಪ್ರತಿ ಲೀಟರ್‌ ಹಾಲಿಗೆ 3 ರು, ದರ ಹೆಚ್ಚಿಸಿದೆ. ಸದ್ಯ ಪ್ರತಿ ಲೀಟರ್‌ಗೆ ಸರ್ಕಾರದ 5 ರು, ಪ್ರೋತ್ಸಾಹ ದರ ಸೇರಿ ಒಟ್ಟು 32 ರು, ಸಿಗುತ್ತಿದೆ. ಆದರೆ ಹೆಚ್ಚು ಹಾಲು ಕೊಡುವಾಗ ರೈತರಿಗೆ ದರ ಕಡಿಮೆ ಮಾಡಿದ್ದ ಒಕ್ಕೂಟ ಈಗ ಕಡಿಮೆ ಹಾಲು ನೀಡುವಾಗ ದರ ಹೆಚ್ಚಳ ಮಾಡಿದ್ದು, ಪಶು ಆಹಾರ ಸೇರಿದಂತೆ ಹಸುಗಳ ನಿರ್ವಹಣಾ ವೆಚ್ಚ ದಿನೇ ದಿನೇ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಹೈನೋದ್ಯಮ ರೈತರಿಗೆ ದುಬಾರಿ ಎನ್ನುವ ಮಾತು ಕೇಳಿ ಬರುತ್ತಿದೆ.

ಏಪ್ರಿಲ್‌ನಿಂದ ಪಡಿತರ ಗೋಧಿ ಸಿಗಲ್ಲ: ಕೇಂದ್ರದ 5 ಕೆ ಜಿ ಅಕ್ಕಿಗೂ ಕೊಕ್ಕೆ!

ಹಾಲಿನ ದರ ಹೆಚ್ಚಳ ಇಲ್ಲ: ಸದ್ಯ ಹಾಲಿನ ದರ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ. ಹಾಗಾಗಿ ಹಾಲಿನ ದರವನ್ನು ಹೆಚ್ಚಳ ಮಾಡುವುದಿಲ್ಲ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳ ಮಾಡುವ ಪ್ರಸ್ತಾಪ ಇಲ್ಲ. ಆಯಾ ಹಾಲು ಒಕ್ಕೂಟದವರು ಲಾಭಾಂಶದಲ್ಲಿ ರೈತರಿಗೆ ಕೊಡಬಹುದು. ಇದರಲ್ಲಿ ಸರ್ಕಾರ ಮಧ್ಯ ಪ್ರವೇಶಿಸುವುದಿಲ್ಲ ಎಂದು ತಿಳಿಸಿದರು.

PREV
Read more Articles on
click me!

Recommended Stories

ಅಪಘಾತಕ್ಕೀಡಾದ ಕುಟುಂಬಕ್ಕೆ ಪರಿಹಾರ ನೀಡುವಲ್ಲೂ ಪೊಲಿಟಿಕ್ಸ್! ಸಚಿವ ಜಮೀರ್ ಭೇಟಿ ರದ್ದಾಗಲು ರಾಜಕೀಯ ಕಾರಣವೇ?
Hubballi-Ankola National Highway ಅತಿಕ್ರಮಣದ ಪರಿಣಾಮ, ಮೃತ್ಯಕೂಪವಾದ ಹುಬ್ಬಳ್ಳಿ ಅಂಕೋಲಾ ಹೆದ್ದಾರಿ!