ಪರಿಷತ್ ಚುನಾವಣೆ : 'ಕಾಂಗ್ರೆಸ್ ನನಗೊಂದು ಸ್ಥಾನ ಬಿಟ್ಟು ಕೊಡಲಿ'

By Suvarna NewsFirst Published Nov 11, 2021, 2:45 PM IST
Highlights
  • ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿದ್ದು, ಪಕ್ಷಗಳಲ್ಲಿ , ರಾಜಕೀಯ ಮುಖಂಡರಲ್ಲಿ ಪೈಪೋಟಿ 
  • ಕಾಂಗ್ರೆಸ್ ನವರು ಮೈಸೂರು ಭಾಗದಲ್ಲಿ ನನಗೆ ಒಂದು ಸ್ಥಾನ ಬಿಟ್ಟು ಕೊಡಬೇಕು ಎಂದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ 

ಮೈಸೂರು (ನ.11):  ವಿಧಾನ ಪರಿಷತ್ ಚುನಾವಣೆ (Karnataka MLC Election) ಸಮೀಪಿಸುತ್ತಿದ್ದು, ಪಕ್ಷಗಳಲ್ಲಿ , ರಾಜಕೀಯ (Politics) ಮುಖಂಡರಲ್ಲಿ ಪೈಪೋಟಿ ಹೆಚ್ಚಾಗಿದೆ. ಇನ್ನು ಕಾಂಗ್ರೆಸ್ (Congress) ನವರು ಮೈಸೂರು (Mysuru) ಭಾಗದಲ್ಲಿ ನನಗೆ ಒಂದು ಸ್ಥಾನ ಬಿಟ್ಟು ಕೊಡಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (vatal Nagaraj) ಹೇಳಿದರು. 

ಮೈಸೂರಿನಲ್ಲಿಂದು ಮಾತನಾಡಿದ ಅವರು ಹಿಂದಿನಿಂದಲೂ ನಾನು ಕಾಂಗ್ರೆಸ್ಗೆ ಬೆಂಬಲಿಸುತ್ತಾ ಬಂದಿದ್ದೇನೆ.  ಎಸ್.ಎಂ ಕೃಷ್ಣ (SM Krishna), ರಾಜಶೇಖರ ಮೂರ್ತಿ, ಧೃವನಾರಾಯಣ್ ಅವರಿಗೆ ಮತ ಹಾಕಿದ್ದೇನೆ  ಎಂದರು.

ಸಿದ್ದರಾಮಯ್ಯ (siddaramaiah) ಅಧಿಕಾರದಲ್ಲಿ ಇದ್ದಾಗ ನನ್ನನ್ನ ಪರಿಷತ್ ಗೆ ನಾಮನಿರ್ದೇಶನ ಮಾಡಲು ಮೈಸೂರು (mysuru) ಭಾಗದ ಜನರು ಒತ್ತಾಯ ಮಾಡಿದ್ದರು. ಹೀಗಾಗಿ  ಮೈಸೂರಿನ ಎರಡು ಸ್ಥಾನಗಳಲ್ಲಿ ನನಗೆ ಒಂದು ಸ್ಥಾನವನ್ನ ಕೊಟ್ಟು ಬೆಂಬಲಿಸಬೇಕು. ನಾನು 60 ವರ್ಷಗಳಿಂದ ಕನ್ನಡ ಪರ ಹೋರಾಟಗಾರ. ನಾನು ಕಾಂಗ್ರೆಸ್ ನಿಂದ ಟಿಕೇಟ್ ಕೇಳುವುದು ಸೂಕ್ತವಲ್ಲ ಎಂದು ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಹೇಳಿದರು. 

 ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಪ್ರತಿಭಟನೆ :   ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನಲೆ ಮೈಸೂರಿನಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಉಚಿತ ಕಡಲೆಕಾಯಿ ನೀಡುವ ಮೂಲಕ  ಪ್ರತಿಭಟನೆ (Protest) ನಡೆಸಿದರು. 

ಮೈಸೂರಿನ ಆರ್ ಗೇಟ್ ಬಳಿ  ಸಾರ್ವಜನಿಕರಿಗೆ ಉಚಿತವಾಗಿ ಕಡಲೆಕಾಯಿ ನೀಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹೋಟೆಲ್ ಊಟ ತಿಂಡಿಗಳಲ್ಲೂ ಬೆಲೆ ಏರಿಕೆಯಾಗಿದೆ  (Price). ಹೀಗಾಗಿ ಇದನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರತಿಭಟಿಸಿದರು. 

ಇನ್ನು ಬಿಟ್ ಕಾಯಿನ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಾಟಾಳ್ ನಾಗರಾಜ್ ಅಯ್ಯೋ. ನನಗೆ ಬಿಟ್ ಕಾಯನ್ ಅಂದ್ರೇನೇ ಗೊತ್ತಿಲ್ಲ. ಅದೇನಿದ್ದರೂ ದರೋಡೆಕೋರರಿಗೆ ಮಾತ್ರ ಗೊತ್ತು ಎಂದರು. 

ಬಿಟ್  ಕಾಯಿನ್ ಪ್ರಕರಣವನ್ನ ಸಿಬಿಐಗೆ ವಹಿಸಬೇಕು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು. ಯಾರೇ ಶಾಮೀಲಾಗಿದ್ದರೂ ಕ್ರಮ ಕೈಗೊಳ್ಳಬೇಕು  ಎಂದು ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಒತ್ತಾಯಿಸಿದರು.  

ವಾಟಾಳ್‌ ಮತ್ತಿತರರ ಸ್ಪರ್ಧೆ

ಮೈಸೂರು- ಚಾಮರಾಜನಗರ ಸ್ಥಳೀಯ  ಕ್ಷೇತ್ರದಿಂದ ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮಾಜಿ ಶಾಸಕ ವಾಟಾಳ್‌ ನಾಗರಾಜ್‌ ಈಗಾಗಲೇ ಘೋಷಿಸಿದ್ದಾರೆ. ಚುನಾವಣೆ ನಡೆಯುವುದಾದಲ್ಲಿ ಇನ್ನೊಂದಷ್ಟು ಮಂದಿ ಪಕ್ಷೇತರರಾಗಿ ಕಣಕ್ಕಿಳಿಯಬಹುದು.

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು

ಆರ್‌. ಧರ್ಮಸೇನ, ಕೆ. ಮರೀಗೌಡ, ಸಿ.ಎನ್‌. ಮಂಜೇಗೌಡ, ಡಾ.ಡಿ. ತಿಮ್ಮಯ್ಯ, ಮಹದೇವ್‌, ಮುನಾವರ್‌ ಪಾಷ, ಪ್ರದ್ಯುಮ್ನ ಆಲನಹಳ್ಳಿ, ಚಲುವರಾಜು

ಬಿಜೆಪಿಯಲ್ಲಿ ಎರಡು ಮತ್ತೊಂದು

ಬಿಜೆಪಿಯಲ್ಲಿ (BJP) ಎಂಡಿಎ (MDA), ಮೈಮುಲ್‌ ಹಾಗೂ ಡಿಸಿಸಿ ಬ್ಯಾಂಕ್‌ (DCC Bank) ಮಾಜಿ ಅಧ್ಯಕ್ಷರೂ ಚಾಮರಾಜನಗರ (Chamarajanagar) ಸಂಸದ ವಿ. ಶ್ರೀನಿವಾಸಪ್ರಸಾದ್‌ ಅವರ ಪರಮಾಪ್ತರಾದ ಸಿ. ಬಸವೇಗೌಡರ ಹೆಸರು ಕೇಳಿ ಬಂದಿದೆ. ಅಲ್ಲದೇ ಕಳೆದ ಬಾರಿ ಸ್ಪರ್ಧಿಸಿ, ಸೋತಿರುವ ಹಾಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್‌. ರಘು ಕೌಟಿಲ್ಯ ಅವರ ಹೆಸರಿದೆ. ಇದಲ್ಲದೇ ಇನ್ನೂ ತಾಂತ್ರಿಕವಾಗಿ ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯರಾಗಿರುವ ಸಂದೇಶ್‌ ನಾಗರಾಜ್‌ ಅವರು ಕೂಡ ಮುಖಂಡರನ್ನು ಭೇಟಿ ಮಾಡಿ, ಟಿಕೆಟ್‌ ಕೇಳುತ್ತಿದ್ದಾರೆ. ಸಂದೇಶ್‌ ಈ ಕ್ಷೇತ್ರದಿಂದ ಕಳೆದೆರಡು ಚುನಾವಣೆಗಳಲ್ಲಿ ಜೆಡಿಎಸ್‌ ಟಿಕೆಟ್‌ ಮೇಲೆ ಗೆದ್ದವರು.

ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳು

ಎನ್‌. ನರಸಿಂಹಸ್ವಾಮಿ, ವಿವೇಕಾನಂದ, ಅಭಿಷೇಕ್‌, ಬೀರಿಹುಂಡಿ ಬಸವಣ್ಣ

ಸಿ. ಬಸವೇಗೌಡ, ಆರ್‌. ರಘು ಕೌಟಿಲ್ಯ, ಸಂದೇಶ್‌ ನಾಗರಾಜ್‌

ಕ್ಷೇತ್ರದ ಇತಿಹಾಸ

1988 ರಿಂದ ಇಲ್ಲಿಯವರೆಗೆ ನಡುವೆ ಮೂರು ವರ್ಷ ಹೊರತುಪಡಿಸಿದರೆ ಐದು ಬಾರಿ ಚುನಾವಣೆ ನಡೆದಿದೆ. ಒಮ್ಮೆ ಒಂದು ಸ್ಥಾನಕ್ಕೆ ಉಪ ಚುನಾವಣೆಯೂ ನಡೆದಿದೆ.

ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಎನ್‌. ನರಸಿಂಹಮೂರ್ತಿ- ಜನತಾಪಕ್ಷದ ವಿ.ಎಚ್‌. ಗೌಡ, ಎರಡನೇ ಚುನಾವಣೆಯಲ್ಲಿ ಕಾಂಗ್ರೆಸ್‌ ಸಿ. ರಮೇಶ್‌- ಜನತಾದಳದ ವೈ. ಮಹೇಶ್‌, ಮೂರನೇ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎನ್‌. ಮಂಜುನಾಥ್‌- ಜೆಡಿಎಸ್‌ನ ಬಿ. ಚಿದಾನಂದ, ನಾಲ್ಕನೇ ಚುನಾವಣೆಯಲ್ಲಿ ಜೆಡಿಎಸ್‌ನ ಸಂದೇಶ್‌ ನಾಗರಾಜ್‌- ಬಿಜೆಪಿಯ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ ಗೆದ್ದಿದ್ದರು. ಮಲ್ಲಿಕಾರ್ಜನಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ 2013 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್‌. ಧರ್ಮಸೇನ ಗೆದ್ದಿದ್ದರು.

2010 ರಲ್ಲಿ ನಡೆದ ಚುನಾವಣೆಯಲ್ಲಿ ಮಂಜುನಾಥ್‌ ಅವರಿಗೆ ಎರಡನೇ ಬಾರಿ ಟಿಕೆಟ್‌ ನೀಡಲಾಗಿತ್ತು. ಅಲ್ಲಿಯವರೆಗೆ ಯಾವುದೇ ಪಕ್ಷ ಸತತ ಎರಡನೇ ಬಾರಿಗೆ ಟಿಕೆಟ್‌ ನೀಡಿರಲಿಲ್ಲ. ಆ ಚುನಾವಣೆಯಲ್ಲಿ ಮಂಜುನಾಥ್‌ ಸೋತರು. 2016 ರಲ್ಲಿ ನಡೆದ ಚುನಾವಣೆಯಲ್ಲಿ

ಕಾಂಗ್ರೆಸ್‌ ಹಾಗೂ ಜೆಡಿಎಸ್‌- ಎರಡೂ ಹಾಲಿ ಸದಸ್ಯರಿಗೆ ನೀಡಿದ್ದವು. ಆರ್‌. ಧರ್ಮಸೇನ ಹಾಗೂ ಸಂದೇಶ್‌ ನಾಗರಾಜ್‌ ಪುನಾರಾಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದರು. ಏಕೆಂದರೆ ಆವರೆಗೆ ಸತತ ಎರಡನೇ ಬಾರಿಗೆ ಯಾರೂ ಆಯ್ಕೆಯಾಗಿರಲಿಲ್ಲ.

click me!