ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿರುವ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಮತ್ತು 9 ರಂದು ಮಹರ್ಷಿ ವಾಲ್ಮೀಕಿ ಜಾತ್ರೆ-2024 ಆಯೋಜಿಸಲಾಗಿದೆ ಎಂದು ಜಗದ್ಗುರು ವಾಲ್ಮೀಕಿ ಪ್ರಸಾನ್ನಾನಂದ ಮಹಾಸ್ವಾಮೀಜಿ ನುಡಿದರು.
ಗೋಕಾಕ (ಡಿ.6) : ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿರುವ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಮತ್ತು 9 ರಂದು ಮಹರ್ಷಿ ವಾಲ್ಮೀಕಿ ಜಾತ್ರೆ-2024 ಆಯೋಜಿಸಲಾಗಿದೆ ಎಂದು ಜಗದ್ಗುರು ವಾಲ್ಮೀಕಿ ಪ್ರಸಾನ್ನಾನಂದ ಮಹಾಸ್ವಾಮೀಜಿ ನುಡಿದರು.
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ನಡೆದ ಮಹರ್ಷಿ ವಾಲ್ಮೀಕಿ ಜಾತ್ರೆ-2024ರ ತಾಲೂಕು ಮಟ್ಟದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರೀಮಠದ 26ನೇ ವಾರ್ಷಿಕೋತ್ಸವ, ಲಿಂ.ಜಗದ್ಗುರು ಪುಣ್ಯಾನಂದಪುರಿ ಮಹಾಸ್ವಾಮೀಜಿಯವರ 17ನೇ ವರ್ಷದ ಪುಣ್ಯಾರಾಧನೆ ಹಾಗೂ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ಸಮಾರಂಭದ ನಡೆಲಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು, ಮನ ಧನದಿಮದ ಸಹಕಾರ ನೀಡುವಂತೆ ಕೋರಿದರು.
undefined
ವಾಲ್ಮೀಕಿ ಗುರುಪೀಠದ ಶ್ರೀಗಳನ್ನು 3 ಗಂಟೆ ಕೂಡಿಹಾಕಿದ ಭಕ್ತರು: ತಬ್ಬಿಬ್ಬಾದ ಪ್ರಸನ್ನಾನಂದ ಸ್ವಾಮೀಜಿ
ಈ ಸಂಧರ್ಭದಲ್ಲಿ ಭೀಮನಗೌಡ ಪೊಲೀಸಗೌಡರ, ಸುರೇಶ ಸನದಿ, ವಿನೋದ ಕರನಿಂಗ್, ಲಕ್ಕಪ್ಪ ಪೂಜೇರಿ, ಶಿವಪ್ಪ ಗುಡ್ಡಾಕಾರ,ಯಲ್ಲಪ್ಪ ನಾಯಕ, ಆನಂದ ಪೂಜೇರಿ, ರವಿ ಮುಡ್ಡಪ್ಪಗೋಳ ಸೇರಿದಂತೆ ವಾಲ್ಮೀಕಿ ಸಮಾಜದ ಗುರುಹಿರಿಯರು, ಮುಖಂಡರು, ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು.