ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗಾಗಿ ಇದ್ದ 2ಬಿ ಮೀಸಲಾತಿಯನ್ನು ಪುನಃ ಸ್ಥಾಪಿಸಿ ಶೇ.4 ರಿಂದ ಶೇ.8ಕ್ಕೆ ವಿಸ್ತರಿಸುವಂತೆ ಮುಸ್ಲಿಂ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು
ಜಮಖಂಡಿ (ಡಿ.5) ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗಾಗಿ ಇದ್ದ 2ಬಿ ಮೀಸಲಾತಿಯನ್ನು ಪುನಃ ಸ್ಥಾಪಿಸಿ ಶೇ.4 ರಿಂದ ಶೇ.8ಕ್ಕೆ ವಿಸ್ತರಿಸುವುದು ಸೇರಿದಂತೆ ಎಚ್. ಕಾಂತರಾಜ ವರದಿ ಸ್ವೀಕರಿಸುವುದು ಮತ್ತು ರಾಜ್ಯದಲ್ಲಿ ಪೊಲೀಸರು ದಾಖಲಿಸಿರುವ ಸ್ವಯಂ ಪ್ರೇರಿತ ಪ್ರಕರಣಗಳನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಮುಸ್ಲಿಂ ಯುನಿಟಿಯ ಪದಾಧಿಕಾರಿಗಳು ಗ್ರೇಡ್-2 ತಹಸೀಲ್ದಾರ್ ಜೆ.ಸತೀಶಕುಮಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಉದ್ಯೋಗದಲ್ಲಿ ಅವಕಾಶ ಕಲ್ಪಿಸಲಾಗಿದ್ದ 2ಬಿ ಕಟಗೇರಿ ಮೀಸಲಾತಿಯನ್ನು ಈ ಹಿಂದಿನ ಬಿಜೆಪಿ ಸರ್ಕಾರ ರದ್ದುಪಡಿಸಿರುವುದು ಕಾನೂನು ಬಾಹೀರ ಮತ್ತು ಅಸಂವಿಧಾನಿಕ ಕ್ರಮವಾಗಿದೆ. ಈಗಾಗಲೇ ಕರ್ನಾಟಕ ಮುಸ್ಲಿಂ ಯುನಿಟಿ ಸಂಘಟನೆಯು ರಾಜ್ಯದ ಘನವೆತ್ತ ರಾಜ್ಯಪಾಲರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ, ಗೃಹಮಂತ್ರಿಗಳಿಗೆ, ಕಾನೂನುಮಂತ್ರಿ ಸೇರಿ ಸಮುದಾಯದ ಎಲ್ಲ ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ಶೇ.4 ಮೀಸಲಾತಿ ಧರ್ಮಾಧಾರಿತವಾಗಿ ನೀಡಿದ್ದಲ್ಲ ಮುಮರನ್ನು ಇತರೆ ಹಿಂದುಳಿದ ಜಾತಿ (ಓಬಿಸಿ)ಯಲ್ಲಿ ಪರಿಗಣಿಸಿ ನೀಡಿರುವುದಾಗಿದೆ. ರಾಜ್ಯದಲ್ಲಿ ನೇಮಕಗೊಂಡ ಸಮಿತಿಗಳು ಹಾಗೂ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಈ ಬಗ್ಗೆ ಸ್ಪಷ್ಟನೆ ನೀಡಿದೆ.
undefined
ನಾನು ಸಿದ್ದರಾಮಯ್ಯರ ವಕ್ತಾರನಲ್ಲ; ಬಿಕೆ ಹರಿಪ್ರಸಾದ ಪರೋಕ್ಷ ಅಸಮಾಧಾನ
ಹೀಗಾಗಿ ಶೇ.4 2ಬಿ ಮೀಸಲಾತಿಯನ್ನು ರಾಜ್ಯದಲ್ಲಿ ಮತ್ತೆ ನೀಡುವಂತೆ ಕ್ರಮಕೈಗೊಳ್ಳಬೇಕು. 2015ರಲ್ಲಿ ಕರ್ನಾಟಕದ ಎಚ್. ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಮನೆ-ಮನೆಗೆ ಭೇಟಿ ನೀಡಿ ನಡೆಸಿದ ವರದಿಯೂ ಮುಸ್ಲಿಮರ ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಗುರುತಿಸಿದೆ. ಎಚ್. ಕಾಂತರಾಜ ವರದಿ ಸ್ವೀಕರಿಸಿ ಅದರನ್ವಯ ಜಾತಿ ಆಧಾರಿತ ಮೀಸಲಾತಿ ನೀಡುವುದಾದರೆ ರಾಜ್ಯದ ಅತೀ ದೊಡ್ಡ 2ನೇ ಸಮುದಾಯ ಮುಸ್ಲಿಮರದ್ದಾಗಿದೆ. ನೀಡಿರುವ ಶೇ. 4 ಮೀಸಲಾತಿ ಸಾಲುವುದಿಲ್ಲ. ಅದನ್ನು ಶೇ.8ಕ್ಕೆ ಹೆಚ್ಚಿಸಬೇಕು ಎಂದು ಕರ್ನಾಟಕ ಮುಸ್ಲಿಂ ಯುನಿಟಿಯ ಗಫೂರ ಮುಲ್ಲಾ, ತೌಫೀಕ ಬೇಪಾರಿ, ಸಯ್ಯದ, ಸಾಧೀಕ ಬಂಟನೂರ, ಮುಸ್ತಾಕ ಜಂಡ್ಡೆ, ಶಾಬೀರ್ ಬೂದಿಹಾಳ, ಅಸ್ಲಾಂ ಇತರರು ಒತ್ತಾಯಿಸಿದರು.
ಮುಸ್ಲಿಮರಿಗೆ ಈ ದೇಶದ ಸಂಪತ್ತು ಹಂಚಿದ್ರೆ ತಪ್ಪೇನು? ಅಬಕಾರಿ ಸಚಿವ ಯಾಕೆ ಹಿಂಗಂದ್ರು!?