ಭೀಮೆಗೆ 8 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ : ಮಹಾರಾಷ್ಟ್ರ ಮಾಹಿತಿ ತಪ್ಪು

By Kannadaprabha News  |  First Published Oct 20, 2020, 8:01 AM IST

ಭೀಮಾ ನದಿಗೆ 8 ಲಕ್ಷ ಕ್ಯುಸೆಕ್‌ ನೀರು ಬಿಡುತ್ತಿರುವ ಬಗ್ಗೆ ಮಹಾರಾಷ್ಟ್ರ ತಪ್ಪ ಮಾಹಿತಿ ನೀಡಿದೆ


 ರಾಯಚೂರು (ಅ.20):  ಭೀಮಾ ನದಿಗೆ 8 ಲಕ್ಷ ಕ್ಯುಸೆಕ್‌ ನೀರು ಬಿಡುತ್ತಿರುವ ಬಗ್ಗೆ ಮಹಾರಾಷ್ಟ್ರ ತಪ್ಪ ಮಾಹಿತಿ ನೀಡಿದ್ದು, ಅಲ್ಲಿನ ಸರ್ಕಾರ ಹಾಗೂ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ ತಿಳಿಸಿದರು.

ತಾಲೂಕಿನ ಕೃಷ್ಣ ಮತ್ತು ಭೀಮಾ ನದಿಯ ಸಂಗಮವಾಗುವ ಗುರ್ಜಾಪುರ ಬ್ರಿಜ್ಡ್‌ ಕಂ ಬ್ಯಾರೇಜ್‌ಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಎರಡು ಮೂರು ದಿನಗಳಿಂದ ಭೀಮಾ ನದಿಗೆ 8 ಲಕ್ಷ ಲ್ಯುಸೆಕ್‌ ನೀರು ಹರಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಯಿಸಿ, ಮಹಾರಾಷ್ಟ್ರದ ಅಧಿಕಾರಿಗಳು ನೀಡಿರುವ ಮಾಹಿತಿ ತಪ್ಪಾಗಿರಬಹುದು. ಅವರು ನೀರಿನ ಹರಿವಿಗೆ ಸಂಬಂಧಿಸಿದಂತೆ ನೀಡಿದ ಮಾಹಿತಿ ಸಮಪರ್ಕವಾಗಿಲ್ಲ. ಅವರು ನೀಡಿರುವ ಮಾಹಿತಿ ನಿಖರವಾಗಿದ್ದರೆ, ಈ ವೇಳೆಗಾಗಲೇ ನೀರು ಹರಿದು ಬರಬೇಕಿತ್ತು. 

Tap to resize

Latest Videos

ಪ್ರವಾಹದಿಂದ ತನ್ನ ಮರಿ ರಕ್ಷಿಸಿದ ಶ್ವಾನ

ಈ ಕುರಿತಂತೆ ಮಹಾರಾಷ್ಟ್ರದ ನೀರಾವರಿ ಸಚಿವರೊಂದಿಗೆ ಮಾತನಾಡಲಾಗಿದೆ. ಮಹಾರಾಷ್ಟ್ರದ ನೀರಾವರಿ ಇಲಾಖೆಯ ಅಧಿಕಾರಿಗಳು ನೀರು ಹರಿಸುವಿಕೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡುತ್ತಿದ್ದು, ಈ ಕುರಿತು ಪರಿಶೀಲಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.

click me!