ಕೊಡಗಿನಲ್ಲಿ ವಿಪರೀತ ಮಳೆ, ಮಡಿಕೇರಿ-ಮೈಸೂರು ನಡುವೆ ಸಂಚಾರ ಸ್ಥಗಿತ

By Gowthami K  |  First Published Jul 4, 2023, 6:56 PM IST

ಕೊಡಗು ಜಿಲ್ಲೆಯಲ್ಲಿ ತೀವ್ರಗೊಂಡ ಗಾಳಿ ಮಳೆಯಿಂದಾಗಿ ಮರ ಧರೆಗುರುಳಿದೆ. ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಮರ ಉರುಳಿ ಬಿದ್ದಿದ್ದು, ಪರಿಣಾಮ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಸಂಚಾರ ಸ್ಥಗಿತಗೊಂಡಿದೆ.


ಕೊಡಗು (ಜು.4): ಕೊಡಗು ಜಿಲ್ಲೆಯಲ್ಲಿ ತೀವ್ರಗೊಂಡ ಗಾಳಿ ಮಳೆಯಿಂದಾಗಿ ಮರ ಧರೆಗುರುಳಿದೆ. ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಮರ ಉರುಳಿ ಬಿದ್ದಿದ್ದು, ಪರಿಣಾಮ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಸಂಚಾರದಲ್ಲಿ ವ್ಯತ್ಯಯವಾಗಿದೆ. ಮಡಿಕೇರಿ ಕುಶಾಲನಗರ ಮಧ್ಯೆ ಬೋಯಿಕೇರಿ ಬಳಿ ಮರ ಬಿದ್ದಿದೆ. ಬೃಹತ್ ಮರಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಧರೆಗುರುಳಿದೆ. ಸಾರ್ವಜನಿಕರು ಮರವನ್ನು ತೆರವುಗೊಳಿಸುತ್ತಿದ್ದಾರೆ. ನಾಳೆ ಬೆಳಿಗ್ಗೆ 8.30 ವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದೆ.

Chamarajanagar: ಅಪರಿಚಿತ ಶವ ಸಂಸ್ಕಾರ ನಡೆಸಿ ಮಾನವೀಯತೆ ಮೆರೆದ ಮುಸ್ಲಿಂ ಯುವಕರು

Tap to resize

Latest Videos

undefined

ಇನ್ನೊಂದೆಡೆ ಕೊಡಗಿನಲ್ಲಿ ಮಳೆ ತೀವ್ರಗೊಳ್ಳುತ್ತಿದ್ದಂತೆ ಹೆದ್ದಾರಿ ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಬಿರುಕು ಹಿನ್ನೆಲೆ ಕೊಡಗು ಜಿಲ್ಲಾಡಳಿತ ಹೆದ್ದಾರಿ ಬಂದ್ ಮಾಡಿದೆ. ಕೊಯನಾಡು ಸಮೀಪದಲ್ಲಿ ವರ್ಷದ ಹಿಂದೆಯೇ ಕುಸಿದಿದ್ದ ಹೆದ್ದಾರಿ. ಹೀಗಾಗಿ ಮತ್ತೆ ಹೆದ್ದಾರಿ ಕುಸಿಯುವ ಆತಂಕ ಹಿನ್ನೆಲೆ ಹೆದ್ದಾರಿ ಬಂದ್ ಮಾಡಿ ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬ್ರಿಟೀಷ್ ಕಾಲದಲ್ಲಿ ನಿರ್ಮಾಣ ಮಾಡಿದ್ದ ರಸ್ತೆಯಲ್ಲಿ ಸದ್ಯ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ಹಾಸನದಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ರೌಡಿಶೀಟರ್‌ನ ಬರ್ಬರ ಹತ್ಯೆ!

ಹೆದ್ದಾರಿ 275 ರಲ್ಲಿ ಎರಡು ಅಡಿ ಆಳಕ್ಕೆ ಕುಸಿದಿದೆ.  ಮೂರು ದಿನಗಳಿಂದ ಮಳೆ ತೀವ್ರಗೊಂಡ ಹಿನ್ನೆಲೆ ಹೆದ್ದಾರಿ ಮತ್ತಷ್ಟು ಕುಸಿದು ಅವಘಡ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಹೆದ್ದಾರಿಗೆ ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಲಾಗಿದೆ. ಪರ್ಯಾಯ ರಸ್ತೆಯೂ ಹದಗೆಡುವ ಸಾಧ್ಯತೆ ಇದ್ದು, ಪರ್ಯಾಯ ರಸ್ತೆ ಹದಗೆಟ್ಟಲ್ಲಿ ಮಂಗಳೂರು ಮಡಿಕೇರಿ ಸಂಚಾರ ದುಸ್ಥರವಾಗಲಿದೆ. ಹೀಗಾಗಿ ಕೂಡಲೇ ಪರ್ಯಾಯ ರಸ್ತೆಯನ್ನಾದರೂ ಸರಿಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕೊಡಗು ಜನತೆ ಆರೋಗ್ಯ ಕ್ಷೇತ್ರಕ್ಕಾಗಿ ಹೆಚ್ಚು ಮಂಗಳೂರನ್ನು ಅವಲಂಬಿಸಿದ್ದಾರೆ. ಹೀಗಾಗಿ ರಸ್ತೆ ಕೆಟ್ಟರೆ ಕಷ್ಟವಾಗಲಿದೆ.

click me!