ದಿಕ್ಕು ದೋಚದೆ ಅಟೋದಲ್ಲಿ ಗಂಗಾವತಿಗೆ ಬಂದ 17 ಜನ ಕಾರ್ಮಿಕರು| ಕೆಲಸ ಕಳೆದುಕೊಂಡು ಅತಂತ್ರರಾದ ಕಲ್ಯಾಣಿ ಸ್ಟೀಲ್ ಕಾರ್ಖಾನೆಯ ಕಾರ್ಮಿಕರು| ಲಾಕ್‌ಡೌನ್ ಆಗಿದ್ದರಿಂದ ಕೆಲಸ ಇಲ್ಲದ ಕಾರಣ ಕೆಲಸದಿಂದ ತೆಗೆದು ಹಾಕಿದ ಕಲ್ಯಾಣಿ ಸ್ಟೀಲ್ ಕಾರ್ಖಾನೆ|
ರಾಮಮೂರ್ತಿ ನವಲಿ
ಗಂಗಾವತಿ (ಮೇ.13): ಕೊರೋನಾ ಮಹಾಮಾರಿಯಿಂದಾಗಿ ಲಾಕ್‌ಡೌನ್ ಆಗಿದ್ದರಿಂದ ಕಲ್ಯಾಣಿ ಸ್ಟೀಲ್ ಕಾರ್ಖಾನೆಯ ಮದ್ಯಪ್ರದೇಶದ ಕಾರ್ಮಿಕರು ಕೆಲಸ ಕಳೆದುಕೊಂಡು ಅತಂತ್ರರಾಗಿದ್ದಾರೆ. ಇವರು ತಮ್ಮ ರಾಜ್ಯಕ್ಕೆ ಹೋಗಲು 17 ಕಾರ್ಮಿಕರು ಗಂಗಾವತಿ ಟೋಲ್ ಗೇಟ್‌ನಿಂದ ಆಟೋದಲ್ಲಿ ಗಂಗಾವತಿಗೆ ಆಗಮಿಸಿದ್ದಾರೆ.
ಒಂದೇ ಆಟೋದಲ್ಲಿ 17 ಜನರು ಬರುತ್ತಿದ್ದವರನ್ನು ಕಂಡು ಅನುಮಾನಿಸಿದ ಸ್ಥಳೀಯರು ವಿಚಾರಣೆ ಮಾಡುತ್ತಿದ್ದಂತಯೇ ಆಟೋ ಚಾಲಕ ಪೊಲೀಸ್ ಠಾಣೆ ಬಳಿ ಬಿಟ್ಟು ಹೋಗಿದ್ದಾರೆಂದು ಕಾರ್ಮಿಕ ಭರಮ್, ರಾಜ್ ರಾಮ್ ತಿಳಿಸಿದ್ದಾರೆ.
ಮಧ್ಯಪ್ರದೇಶದ ರೇವಾ ಜಿಲ್ಲೆಯ ಜಾವಾ ತಾಲೂಕಿನವರಾದ ಕಾರ್ಮಿಕರನ್ನು ಗುತ್ತಿಗೆದಾರೊಬ್ಬರು ಕಾರ್ಖಾನೆಗೆ ಕರೆದುಕೊಂಡು ಬಂದಿದ್ದರು. ಈಗ ಲಾಕ್‌ಡೌನ್ ಆಗಿದ್ದರಿಂದ ಕೆಲಸ ಇಲ್ಲದ ಕಾರಣ ಕೆಲಸದಿಂದ ತೆಗೆದು ಹಾಕಿದ್ದಾರೆ. ಅನಿವಾರ್ಯವಾಗಿ ತಮ್ಮ ಊರು ತಲುಪಲು ಸಾಧ್ಯವಾಗದ ಕಾರಣ ಅಟೋ ಹಿಡಿದು ಸಾಗಿದ್ದಾರೆ. ಆದರೆ ಇವರು ಈಗ ಗಂಗಾವತಿಯಲ್ಲಿದ್ದಾರೆ.
ಕೊರೋನಾ ಕಂಟಕದಿಂದ ಮತ್ತೆ ಕೊಪ್ಪಳ ಪಾರು: ನಿಟ್ಟುಸಿರು ಬಿಟ್ಟ ಜನತೆ..!
ಮದ್ಯ ಪ್ರದೇಶ ಮೂಲದ ಕಾರ್ಮಿಕರನ್ನು ಅವರ ರಾಜ್ಯಕ್ಕೆ ಕಳಿಸಿಕೊಡುವ ವ್ಯವಸ್ಥೆಯನ್ನು ತಾಲೂಕ ಆಡಳಿತ ಮತ್ತು ನಗರ ಸಭೆ ಕೈಗೊಂಡಿದೆ.
ಉಪಹಾರ ವ್ಯವಸ್ಥೆ:
ಗಂಗಾವತಿಗೆ ಆಗಮಿಸಿದ 17 ಜನ ಮದ್ಯ ಪ್ರದೇಶ ರಾಜ್ಯದ ಕಾರ್ಮಿಕರಿಗೆ ನಗರ ಸಭಾ ಸದಸ್ಯರಾದ ಪರುಶರಾಮ ಮಡ್ಡೀರ, ಪತ್ರಕರ್ತ ವಿಶ್ವನಾಥ್ ಬೆಳಗಲ್ ಮಠ, ರಮೇಶ ಚೌಡ್ಡಿ, ಎಟಿಎಂ ಸಿ ಸದಸ್ಯ ಶರಣೇಗೌಡ ಸೇರಿದಂತೆ ಸ್ಥಳೀಯರು ಸಹಕಾರ ನೀಡಿದ್ದಾರೆ.