ಗದಗ: ಅನೈತಿಕ ಸಂಬಂಧಕ್ಕೆ ಬಿತ್ತು ಯುವಕನ ಹೆಣ..!

Suvarna News   | Asianet News
Published : May 13, 2020, 01:50 PM ISTUpdated : May 13, 2020, 02:00 PM IST
ಗದಗ: ಅನೈತಿಕ ಸಂಬಂಧಕ್ಕೆ ಬಿತ್ತು ಯುವಕನ ಹೆಣ..!

ಸಾರಾಂಶ

ಅನೈತಿಕ ಸಂಬಂಧ ಹಾಗೂ ಆಸ್ತಿ ವಿವಾದ ಯುವಕಷ ಕೊಲೆ| ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಜ್ಜೂರ ಕೆರೆಯಲ್ಲಿ ಘಟನೆ| ಪಾರ್ಟಿ ಮಾಡೋಕೆ ಕರೆದು ಕೊಲೆ ಮಾಡಿದ್ದಾರೆ ಎಂಬ ಆರೋಪ| ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯ ಮನೆಯವರು ಯುವಕನ ಕೊಲೆ ಮಾಡಿ ಕೆರೆಯಲ್ಲಿ ಕಲ್ಲು ಕಟ್ಟಿ ಬಿಟ್ಟಿರುವ ಶಂಕೆ|

ಗದಗ(ಮೇ.13): ಅನೈತಿಕ ಸಂಬಂಧ ಹಾಗೂ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನ ಕೊಲೆಯಾದ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಜ್ಜೂರ ಕೆರೆಯಲ್ಲಿ ಇಂದು(ಬುಧವಾರ) ನಡೆದಿದೆ. ಮಂಜುನಾಥ (22) ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ಏನಿದು ಪ್ರಕರಣ...? 

ಶಿರಹಟ್ಟಿ ತಾಲೂಕಿನ ಮಾಚ್ಚೇನಹಳ್ಳಿ ಗ್ರಾಮದ ನಿವಾಸಿ ಮಂಜುನಾಥ ಎಂಬಾತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎಂದು ಹೇಳಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಂಜುನಾಥ ಹಾಗೂ ಮಹಿಳೆಯ ಮನೆಯವರ ಮಧ್ಯೆ ಜಗಳ ಕೂಡ ನಡೆದಿತ್ತು ಎನ್ನಲಾಗಿದೆ. ಹೀಗಾಗಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯ ಮನೆಯವರು ಮಂಜುನಾಥನನ್ನ ಕೊಲೆ ಮಾಡಿ ಕೆರೆಯಲ್ಲಿ ಕಲ್ಲು ಕಟ್ಟಿ ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. 

ತಂಗಿ ಜೊತೆ ಕ್ಲೋಸ್ ಆಗಿದ್ದ ಕಾರಣಕ್ಕೆ ಗೆಳೆಯನನ್ನೇ ಕೊಂದ..!

ಮಹಿಳೆಯ ತಂದೆ ಮಾನಪ್ಪ ಸೇರಿದಂತೆ ಐದು ಜನರರು ಮಂಜುನಾಥನನ್ನ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ತಿಂಗಳು 5ನೇ ತಾರೀಖಿನಂದು ರಾತ್ರಿ ಪಾರ್ಟಿ ಮಾಡೋಕೆ ಕರೆದುಕೊಂಡು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಶಿರಹಟ್ಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC